ಮದುವೆಯಾಗದ ಬ್ರಹ್ಮಚಾರಿಗಳಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ! ಡಾಲಿ ಧನಂಜಯ್​ರಿಂದಲೇ ಆರಂಭ! ಏನಿದು ವಿಶೇಷ?

 MALENADUTODAY.COM | #KANNADANEWSWEB

ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಸ್ಲೋಗನ್​ನೊಂದಿಗೆ ಬ್ರಹ್ಮಚಾರಿಗಳೆಲ್ಲಾ ಮಹದೇಶ್ವರ ಬೆಟ್ಟಕ್ಕೆ ಮೂರು ದಿನಗಳ ಪಾದಯಾತ್ರೆ ಕೈಘೊಂಡಿದ್ದಾರೆ. ಈ ಪಾದಯಾತ್ರೆಗೆ ನಟ ಡಾಲಿ ಧನಂಜಯ್ ಸಾತ್ ನೀಡಿದ್ದಾರೆ. ಮದುವೆಯಾಗದ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಮಂಡ್ಯ ಜಿಲ್ಲೆಯ ಯುವಕರ ಗುಂಪು ಮಲೈ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿತ್ತು.

ಸದ್ಯ ಇವರ ಪಾದಯಾತ್ರೆ ಸಖತ್ ಟ್ರೆಂಂಡ್ ಆಗುತ್ತಿದೆ. ಮಂಡ್ಯದಿಂದ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟಕ್ಕೆ 3 ದಿನಗಳ ಪಾದಯಾತ್ರೆ ಕೈಗೊಂಡಿರುವ ಈ ಯುವಕರು,  ಕೃಷಿಕರು ವ್ಯಾಪಾರಸ್ಥರು  ಸಣ್ಣಪುಟ್ಟ ಕೆಲಸದವರು, ಸಾಮಾನ್ಯ ಯುವಕರಿಗೆ ಹೆಣ್ಣು ಸಿಗದ ವಿಚಾರದ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ  30 ವರ್ಷಕ್ಕಿಂತ ಮೇಲ್ಪಟ್ಟ ಬ್ಯಾಚುಲರ್​ಗಳೆಲ್ಲಾ ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ. 

ಮಂಡ್ಯದ ಕೆ.ಎಂ.ದೊಡ್ಡಿ ಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಿಂದ ʼʼಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆʼʼ ಎಂಬ ಘೋಷ ವಾಕ್ಯದೊಂದಿಗೆ ಯುವಕರು ಹೊರಟಿದ್ದು,  ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ ತಲುಪಲಿದ್ಧಾರೆ. ಇನ್ನೂ  ಈ ಯಾತ್ರೆಗೆ ಕನ್ನಡದ ನಟ ಡಾಲಿ ಧನಂಜಯ್ ಚಾಲನೆ ನೀಡಿದ್ದು ವಿಶೇಷವಾಗಿತ್ತು. 

Leave a Comment