ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!

Car's battery explodes at petrol pump / ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!

ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ  ಕಾರಿನ ಬ್ಯಾಟರಿ ಸ್ಫೋಟ!  ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!

KARNATAKA NEWS/ ONLINE / Malenadu today/ May 28, 2023 SHIVAMOGGA NEWS

ಬೀರೂರು/ ಪೆಟ್ರೋಲ್ ಹಾಕಿಸಲು ಬಂದ ವೇಳೆ ಕಾರೊಂದರ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಚಿಕ್ಕಮಗಳೂರು  ಜಿಲ್ಲೆಯ ಬೀರೂರಲ್ಲಿ ನಡೆದಿದೆ. 

ನಡೆದಿದ್ದೇನು?

ಇಲ್ಲಿನ ಪೆಟ್ರೋಲ್​ ಬಂಕ್​ ಬಳಿಯಲ್ಲಿ ಇವತ್ತು ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಆಲ್ದೂರಿನಿಂದ ಬೀರೂರಿಗೆ ಕುಟುಂಬವೊಂದು ಕಾರಿನಲ್ಲಿ ಬಂದಿತ್ತು. ಪೆಟ್ರೋಲ್​ ಹಾಕಿಸುವ ಸಲುವಾಗಿ, ಚಾಲಕ ಕಾರನ್ನು ಬಂಕ್​ಗೆ ಕೊಂಡೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.

ಸ್ಥಳೀಯರ ದೈರ್ಯ ಸಾಹಸ! 

ಇನ್ನೂ ಘಟನೆ ಬೆನ್ನಲ್ಲೆ ಪೆಟ್ರೋಲ್​ ಬಂಕ್​ನಲ್ಲಿದ್ದವರು ಹಾಗೂ ಸ್ಥಳೀಯರು ಸಹಾಯಕ್ಕೆ ನಿಂತಿದ್ದಾರೆ. ಬೆಂಕಿಯ ಅಪಾಯವನ್ನು ಲೆಕ್ಕಿಸಿದೇ ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಮಗುವನ್ನ ರಕ್ಷಿಸಿದ್ದಾರೆ. ಅಲ್ಲದೆ, ಕಾರನ್ನು ಹಿಂದಕ್ಕೆ ನೂಕಿ, ಫೈರ್ ಸೇಫ್ಟಿ ಕ್ಯಾನ್​ ಬಳಸಿ ಬೆಂಕಿ ನಂದಿಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಕಾರನ್ನ ದೂರಕ್ಕೆ ಎಳೆದು ಬೆಂಕಿ ನಂದಿಸಿದ್ದರಿಂದ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ. ಇನ್ನೂ ಬಂಕ್​ನಲ್ಲಿ ಸಂಭವಿಸಬಹುದಾಗಿದ್ದ ಅಪಾಯವೂ ಸಹ ತಪ್ಪಿದೆ. 

ಘಟನೆ ಬೆನ್ನಲ್ಲೆ ಸ್ಥಳದಲ್ಲಿ ಹಲವು ಮಂದಿ ಜಮಾಯಿಸಿದ್ದರು. ಬಂಕ್ ನಲ್ಲಿದ್ದ ಫೈರ್ ಸೇಫ್ಟಿ ಸಾಮಗ್ರಿಗಳಿಂದ ಬೆಂಕಿ ನಂದಿಸಲು ಸಹಾಯವಾಗಿದೆ. ಇನ್ನೂ ಫೈರ್​ ಸೇಫ್ಟಿ ಸ್ಪ್ರೇ ಹೊಡೆಯುತ್ತಲೇ, ಕಾರಿನ ಸುತ್ತಮುತ್ತ ಮಂಜು ಆವರಿಸಿದಂತಹ ದೃಶ್ಯ ಸೃಷ್ಟಿಯಾಗಿದೆ.