ಹಾವೇರಿಯಲ್ಲಿ ಭೀಕರ ಘಟನೆ | ಮೃತ 13 ಮಂದಿ ಗುರುತು ಪತ್ತೆ | ಶಿವಮೊಗ್ಗ, ಭದ್ರಾವತಿ, ಕಡೂರು, ಮಾಚೇನಹಳ್ಳಿ ನಿವಾಸಿಗಳು

Thirteen people from Bhadravathi taluk, Shivamogga district, died in a horrific accident near Gundenahalli Cross, Byadagi taluk, Haveri district on Friday. The accident occurred on the Bangalore-Pune National Highway

SHIVAMOGGA | MALENADUTODAY NEWS | Jun 28, 2024  ಮಲೆನಾಡು ಟುಡೆ  haveri accident news

ಶುಕ್ರವಾರದ ದಿನ ಇವತ್ತು ಶಿವಮೊಗ್ಗ ಜಿಲ್ಲೆಗೊಂದು ಭೀಕರ ಸಾವಿನ ಸುದ್ದಿ ಎದುರಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಗುಂಡೇನಹಳ್ಳಿ ಕ್ರಾಸ್‌ ಬಳಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನ 13 ಮಂದಿ ಸಾವನ್ನಪ್ಪಿದ್ದಾರೆ.  

ಮೃತರ ಗುರುತು ಪತ್ತೆ

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ನಿಂತಿದ್ದ ಲಾರಿಗೆ ಹೊಸ  ಟಿಟಿ ವಾಹನ ಡಿಕ್ಕಿಯಾಗಿದೆ. ಪರಿಣಾಮ ಟಿಟಿಯಲ್ಲಿದ್ದ  ಪರಶುರಾಮ್ ​​(45), ಭಾಗ್ಯ (40), ನಾಗೇಶ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ, ಚಾಲಕ ಆದರ್ಶ್ (23), ಮಾನಸ (24), ರೂಪಾ (40), ಮಂಜುಳಾ (50) ಮೃತಪಟ್ಟಿದ್ದಾರೆ. 

ಹೊಸ ಟಿಟಿಗೆ ಪೂಜೆ

ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ ನಾಗೇಶ್‌ ಹಾಗೂ ವಿಶಾಲಾಕ್ಷಿ ದಂಪತಿ ಪುತ್ರ ಆದರ್ಶ್‌ ಹೊಸ ಟಿಟಿ ವಾಹನವನ್ನ ಖರೀದಿಸಿದ್ದರು. ಅದನ್ನು ದೇವರಿಗೆ ಪೂಜೆ ಮಾಡಿಸಿಕೊಂಡು ಬರಲು ಮಹಾರಾಷ್ಟ್ರದ  ತಿವಾರಿ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಗಾಡಿ ಪೂಜೆ ಮಾಡಿಸಿಕೊಂಡು ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿದ್ದಾರೆ. ಆ ಬಳಿಕ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದಾರೆ. ಅಲ್ಲಿಂದ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಶಿವಮೊಗ್ಗಕ್ಕೆ ವಾಪಸ್‌ ಆಗುವಾಗ ಈ ಘಟನೆ ಸಂಭವಿಸಿದೆ. ಕಳೆದ ಸೋಮವಾರ ಹೊರಟವರು ಇವತ್ತು ಊರಿಗೆ ವಾಪಸ್‌ ಆಗಬೇಕಿತ್ತು. ವಿಧಿಯಾಟದಲ್ಲಿ ದೇವರ ದರ್ಶನಕ್ಕೆ ಹೋಗಿದ್ದವರ ಮೃತದೇಹ ಊರಿಗೆ ಆಗಮಿಸ್ತಿದೆ.  

15 ಮಂದಿಯಲ್ಲಿ 13 ಮಂದಿ ಸಾವು

ಟಿಟಿಯಲ್ಲಿ ಒಟ್ಟು 15 ಮಂದಿ ಇದ್ದರು. ಆ ಪೈಕಿ 13 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ  ಎಮ್ಮೆಹಟ್ಟಿ ಗ್ರಾಮದ ವಿಶಲಾಕ್ಷಮ್ಮ, ಆದರ್ಶ್, ನಾಗೇಶ್, ಭಾಗ್ಯ, ಮಾನಸ, ಸುಭದ್ರತಾಯಿಯವರಿದ್ದಾರೆ. ಇತ್ತ ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿ ಪರಶುರಾಮ್, ರೂಪ ದಂಪತಿ ಮೃತಪಟ್ಟಿದ್ದರೆ, ಭದ್ರಾವತಿ ತಾಲೂಕಿನ ಕಲ್ಯಾಳ್ ಸರ್ಕಲ್ ಮಂಜುಳಬಾಯಿ, ಮಂಜುಳ ಹಾಗೂ 

ಕಡೂರು ತಾಲೂಕಿನ ಬೀರೂರು ನಿವಾಸಿ ಅಂಜು ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ ಪುಣ್ಯ ಬಾಯಿ ಕೂಡ ಘಟನೆಯಲ್ಲಿ ನಿಧನರಾಗಿದ್ದಾರೆ. 

Thirteen people from Bhadravathi taluk, Shivamogga district, died in a horrific accident near Gundenahalli Cross, Byadagi taluk, Haveri district on Friday. The accident occurred on the Bangalore-Pune National Highway when a new TT vehicle collided with a parked lorry.The victims were returning from a pilgrimage to several temples in Maharashtra and Karnataka. The deceased include Nagash and Vishalakshi couple from Emmehatti village, their son Adarsh, and several other residents from nearby villages. Two people from Shivamogga city and one from Kadur taluk also lost their lives in the accident.