ಅಮೆರಿಕಾದಿಂದ ಶಿವಮೊಗ್ಗ ಸಿಇಎನ್ ಠಾಣೆಗೆ ಬಂತು ಈ ಕೇಸ್! ತಪ್ಪಿ ತಪ್ಪು ಮಾಡ್ಬೇಡಿ! ಹುಷಾರ್!?
sue moto case has been registered at Shimoga CEN station ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಸು ಮೋಟೋ ಕೇಸ್ ದಾಳಲಾಗಿದೆ
KARNATAKA NEWS/ ONLINE / Malenadu today/ Oct 27, 2023 SHIVAMOGGA NEWS
ಶಿವಮೊಗ್ಗದ CEN ಕ್ರೈಂ ಪೊಲೀಸ್ ಸ್ಟೇಷನ್ನಲ್ಲಿ INFORMATION TECHNOLOGY ACT 2000 (U/s-67(B)); PROTECTION OF CHILDREN FROM SEXUAL OFFENCES ACT 2012 (U/s-15) ಆ್ಯಕ್ಟ್ ಅಡಿಯ್ಲಲಿ Sue-moto ಕೇಸ್ ದಾಖಲಾಗಿದೆ.
ಕೆಲ ವರ್ಷಗಳ ಹಿಂದೇ ಇದೇ ರೀತಿಯ ಕೇಸ್ ದಾಖಲಾಗಿ, ಆ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ ತನಿಖಾಧಿಕಾರಿ ಅಪರಾಧಿಗೆ ಶಿಕ್ಷೆಯಾಗುವಂತೆ ಶ್ರಮವಹಿಸಿದ್ದರು. ಬಳಿಕ ಅದೇ ವಿಚಾರದಲ್ಲಿ ಉತ್ತಮ ತನಿಖಾಧಿಕಾರಿ ಎಂಬ ಪ್ರಶಸ್ತಿಗೆ ಅಂದಿನ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಪಾತ್ರರಾಗಿದ್ರು.
ಇದೀಗ ಮತ್ತೆ ಅಂತಹುದ್ದೆ ಕೇಸ್ವೊಂದು ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ಗೆ ಬಂದಿದೆ. ಆನ್ಲೈನ್ನಲ್ಲಿ ಅಪ್ರಾಪ್ತ ವಯಸ್ಸಿನವರ ಫೋಟೋ ವಿಡಿಯೋಗಳನ್ನು ಹರಿಬಿಡುವ ಹಾಗೂ ಬೇರೆಯವರಿಗೆ ವರ್ಗಾಯಿಸುವ , ಅಪ್ಲೋಡ್ ಮತ್ತು ಡೌನ್ಲೋಡ್ ಮಾಡುವವರ ಮೇಲೆ ಸೈಬರ್ ಟಿಪ್ ಎನ್ನುವ ಖಾಸಗಿ ಸಂಸ್ಥೆಯು ಕಣ್ಣಿಡುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ಇಂತಹ ಕೆಲಸ ಮಾಡಿದರೆ,ಆ ಸಂಸ್ಥೆಗೆ ತಿಳಿಯುತ್ತದೆ. ಅಲ್ಲದೆ ಕೆಲವರು ನೇರವಾಗಿ ಸೈಬರ್ ಟಿಪ್ ಸಂಸ್ಥೆಗೆ ದೂರು ನೀಡುತ್ತಾರೆ. ಅಂತಹ ಪ್ರಕರಣಗಳಲ್ಲಿ ಆಡಿಯೋ, ವಿಡಿಯೋ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಸೈಬರ್ ಟಿಪ್ ಸಂಸ್ಥೆ, ಸಂಬಂಧ ಪಟ್ಟ ತನಿಖಾ ಸಂಸ್ಥೆಗೆ ವಿವರ ರವಾನಿಸುತ್ತದೆ. ಹೀಗೆ ರವಾನೆಯಾದ ವಿವರವು ಸಿಐಡಿ ಘಟಕದಿಂದ ಶಿವಮೊಗ್ಗ ಎಸ್ಪಿ ಕಚೇರಿಗೆ ರವಾನೆಯಾಗಿದೆ. ಅಲ್ಲಿಂದ ಸಿಇಎನ್ ಠಾಣೆಗೆ ರವಾನೆಯಾಗಿದ್ದು, ಅಲ್ಲಿ ಸು ಮೋಟೋ ಕೇಸ್ ಆಗಿ ದಾಖಲಾಗಿದೆ.
ಏನಿದು ಪ್ರಕರಣ?
ಶಿವಮೊಗ್ಗ ಜಿಲ್ಲೆ ಆರೋಪಿ ಒಬ್ಬ, ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಿ ರವಾನಿಸಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಟೆಕ್ನಿಕಲ್ ಎವಿಡೆನ್ಸ್ ಅಡಿಯಲ್ಲಿ ಸ್ವಯಂ ದೂರು ತಯಾರಿಸಿ ಇದರೊಂದಿಗೆ ಮಾಹಿತಿ ಪತ್ರ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವ 02 ಪ್ರತಿಗಳು, Cyber Tipline 02 ಸಿಡಿಗಳು, 65(ಬಿ) ಇಂಡಿಯನ್ ಎವಿಡೆನ್ಸ್ ಆಕ್ಟ್-1872 ರೀತಾ ನೀಡಲಾದ 02 ಪ್ರಮಾಣ ಪತ್ರಗಳನ್ನು ಒಳಗೊಂಡು ಎಫ್ಐಆರ್ ದಾಖಲಿಸಲಾಗಿದೆ
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!