ಶಿವಮೊಗ್ಗದಲ್ಲಿ ಮತ್ತೊಂದು ಕೇಸರಿ ಸಮಾವೇಶ! ಶೌರ್ಯ ಸಂಚಲನಕ್ಕೆ ದಿನಾಂಕ ನಿಗದಿ! ಹೇಗಿರದಲಿದೆ ಕಾರ್ಯಕ್ರಮ ? ಇಲ್ಲಿದೆ ವಿವರ

ಇದೇ ತಿಂಗಳ ಎಂಟನೇ ತಾರೀಖು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿವಮೊಗ್ಗದಲ್ಲಿ ಮತ್ತೊಂದು  ಕೇಸರಿ ಸಮಾವೇಶ! ಶೌರ್ಯ ಸಂಚಲನಕ್ಕೆ ದಿನಾಂಕ ನಿಗದಿ! ಹೇಗಿರದಲಿದೆ ಕಾರ್ಯಕ್ರಮ ? ಇಲ್ಲಿದೆ ವಿವರ

ಶಿವಮೊಗ್ಗ ಈ ತಿಂಗಳಿನಲ್ಲಿ ಮತ್ತೆ ಕೇಸರಿಮಯವಾಗಲಿದೆ. ಕಳೆದ ತಿಂಗಳಿನಲ್ಲಿ ಶಿವಮೊಗ್ಗ ನಗರ ಎನ್​ಇಎಸ್​ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನ ನಡೆದಿತ್ತು. ಇದರ ಬೆನ್ನಲ್ಲೆ ಇದೇ ತಿಂಗಳ ಎಂಟನೇ ತಾರೀಖು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು

ವಿಧಾನಸಭೆ ಚುನಾವಣೆ ಹಾಗೂ ಮಲೆನಾಡಿನಲ್ಲಿ ಹಿಂದೂತ್ವದ ನೆಲೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಇತ್ತೀಚೆಗೆ ನಡೆದ ಸಮ್ಮೇಳನ ಹಾಗೂ ಆರ್​ಎಸ್​ಎಸ್​ ಮುಖಂಡ ಮೋಹನ್ ಭಾಗವತ್​ರ ಆಗಮನ ಮತ್ತು ಸಂಘ ಪರಿವಾರದ ಸಭೆಗಳು ಹೀಗೆ ಶಿವಮೊಗ್ಗದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. 

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ಇದರ ಬೆನ್ನಲ್ಲೆ ಇದೀಗ ಶೌರ್ಯ ಸಂಚಲನ ಕಾರ್ಯಕ್ರಮ ನಿಕ್ಕಿಯಾಗಿದೆ. ಇದೇ ಜನವರಿ 8 ರಂದು ಗೀತಾ ಜಯಂತಿ ಹಿನ್ನೆಲೆಯಲ್ಲಿ( ಗೀತಾ ಜಯಂತಿ ಎಂದರೆ  ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆ ತಿಳಿಸಿದ ದಿನ) ಶೌರ್ಯ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಶಿವಮೊಗ್ಗದ ಫ್ರೀಡಂ ಪಾರ್ಕ್‌ನಿಂದ ಬೆಳಗ್ಗೆ 10 ಕ್ಕೆ ಹೊರಡುವ ಶೌರ್ಯ ಸಂಚಲನ, ಜೈಲು ರಸ್ತೆ, ದುರ್ಗಿಗುಡಿ, ನೆಹರು ರಸ್ತೆ, ಸಾವರ್ಕರ್ ವೃತ್ತ, ಗಾಂಧಿ ಬಜಾರ್ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಕೊನೆಗೊಳ್ಳಲಿದೆ. ನಂತರ ಮಧ್ಯಾಹ್ನ 1.30ಕ್ಕೆ ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಜರಂಗದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹಾಗೂ ರಾಜ್ಯ ಸಂಘಟಕ ಸುನೀಲ್ ಕುಮಾರ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಗಣವೇಶ ಧರಿಸಿದ 1 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಇತ್ತೀಚೆಗಷ್ಟೆ ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಶೋಭಾಯಾತ್ರೆಯು ನಡೆದಿತ್ತು, ಇದೀಗ ಬಜರಂಗದಳ ಶೌರ್ಯ ಸಂಚಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ಸಾಕಷ್ಟು ಕುತೂಹಲ ಮೂಡಿಸಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ