ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ಜ.4ರಂದು ಬೆಳಿಗ್ಗೆ 11 ಕ್ಕೆ ಮೈಸೂರು ಮಹಾ ಸಂಸ್ಥಾನದ ಶ್ರೀ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು.ಮಧ್ಯಾಹ್ನ 2 ಗಂಟೆಗೆ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಭಾಗವಹಿಸುವರು

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

 ಶಿವಮೊಗ್ಗ ನಗರದ ಪ್ರತಿಷ್ಠಿತ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಆವರಣದಲ್ಲಿ ಜ.4 ರಿಂದ 6ವರೆಗೆ ದೇಶೀಯ ವಿದ್ಯಾಶಾಲಾ ಸಮಿತಿ(ಡಿವಿಎಸ್)ಯ ಅಮೃತ ಮಹೋತ್ಸವದ ಸಮಾರೋಪ ಹಾಗೂ ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭವು ನಡೆಯಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದ್ದಾರೆ. 

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಈ ಸಂಬಂಧ ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  1943ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಈಗ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜಿಗೀಗ 50ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಮಾರೋಪ ಆಯೋಜಿಸಲಾಗಿದೆ ಎಂದರು.

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಶಿವಮೊಗ್ಗಕ್ಕೆ ಬರಲಿದ್ದಾರೆ ಯದುವೀರ್​ ಒಡೆಯರ್​

ಜ.4ರಂದು ಬೆಳಿಗ್ಗೆ 11 ಕ್ಕೆ ಮೈಸೂರು ಮಹಾ ಸಂಸ್ಥಾನದ ಶ್ರೀ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು.ಮಧ್ಯಾಹ್ನ 2 ಗಂಟೆಗೆ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಆರಗ  ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಭಾಗವಹಿಸುವರು.

ಜ.5ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಜ.6ರಂದು ಸಂಜೆ 4.30ಕ್ಕೆ ಅಮೃತಮಹೋತ್ಸವದ ಸಮಾರೋಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಉದ್ಘಾಟಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಭಾಗವಹಿಸುವರು ಎಂದರು.

ಬ್ರೇಕಿಂಗ್​ ನ್ಯೂಸ್​ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಪ್ರತಿದಿನ ಸಂಜೆ ಕಲರ್​ಫುಲ್​ ಕಾರ್ಯಕ್ರಮ

ಪ್ರತಿದಿನ ಸಂಜೆ ಡಿ.ವಿಎಸ್ ಸಂಸ್ಥೆಯ ವಿವಿಧ ಕಾಲೇಜು, ಹೈಸ್ಕೂಲ್. ಪದವಿಪೂರ್ವ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜ.6ರಂದು ಬೆಳಗ್ಗೆ 11ಕ್ಕೆ ಡಿವಿಎಸ್ ಪಾಲಿಟೆಕ್ನಿಕ್, ಮಧ್ಯಾಹ್ನ 2 ಕ್ಕೆ ಡಿವಿಎಸ್ ಸಂಜೆ ಕಾಲೇಜಿನ ಹಾಗೂ ಸಂಜೆ 6 ಕ್ಕೆ ವಿಜ್ಞಾನ ಮತ್ತು ಕಲಾ, ವಾಣಿಜ್ಯ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ನಡೆಯಲಿದೆ. ರಾತ್ರಿ 9ಕ್ಕೆ ಕರ್ನಾಟಕ ರತ್ನ ದಿವಂಗತ ಡಾ. ಪುನೀತ್‌ರಾಜ್‌ಕುಮಾರ್ ಅವರಿಗೆ ಪಾಲಿಟೆಕ್ನಿಕ್ ಕಾಲೇಜು ರಂಗಮಂದಿರದಲ್ಲಿ ಗೌರವ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಅಹಿತಿ ನೀಡಿದ್ರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಡಿವಿಎಸ್​ ಎಂಬುದೇ ಹೆಮ್ಮೆ

ಡಿವಿಎಸ್ ಸಂಸ್ಥೆಯು ಭವ್ಯ ಆದರ್ಶಗಳನ್ನು ಒಳಗೊಂಡಿದೆ. ನಿಸ್ವಾರ್ಥ ಸೇವೆ ಹೊಂದಿದೆ. ಶೈಕ್ಷಣಿಕ ಕ್ರಾಂತಿಯನ್ನೇ ನೀಡಿದೆ. ಇಲ್ಲಿ ಓದಿದ ಹಲವರು ರಾಜಕೀಯ, ಸಾಂಸ್ಕೃತಿಕ ಹಾಗೂ ಉನ್ನತ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಕಡಿದಾಳ್ ಮಂಜಪ್ಪ, ಮಾಜಿ ಶಿಕ್ಷಣ ಸಚಿವ ಕೆ.ಆರ್. ಬದರೀನಾರಾಯಣ ಈ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಪ್ಯಾರಾ ಓಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸುಹಾಸ್ ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಹೆಮ್ಮೆಯ ವಿಚಾರ ಎಂದರು.

ಇದನ್ನು ಓದಿ : Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಸಂಸ್ಥೆಯ ಅಧ್ಯಕ್ಷ ಕೆ.ಎಸ್.ರುದ್ರಪ್ಪ ಕೊಳಲೆ ಮಾತನಾಡಿ, ಸಂಸ್ಥೆಯು ಒಂದು ಹಿರಿಯ ಪ್ರಾಥಮಿಕ ಶಾಲೆ, ಎರಡು ಪದವಿ ಪೂರ್ವ ಕಾಲೇಜು, ಎರಡು ಪ್ರೌಢಶಾಲೆ, ಎರಡು ಪದವಿ ಕಾಲೇಜು, ಒಂದು ಪಾಲಿಟೆಕ್ನಿಕ್ ಕಾಲೇಜು ಹಾಗೂ ಒಂದು ರಂಗಮಂದಿರವನ್ನು ಹೊಂದಿದೆ. ರಾಜ್ಯದಲ್ಲಿಯೆ ಉತ್ತಮ ಫಲಿತಾಂಶಕ್ಕೆ ಹೆಸರಾಗಿದೆ.

ತೀರ್ಥಹಳ್ಳಿಯಲ್ಲಿ ಕಾಡಾನೆ ಮತ್ತು ಕುರುವಳ್ಳಿ ಬಾಯ್ಸ್​/ ಮರಿಯಾನೆಯನ್ನ ಓಡಿಸೋ ರಾತ್ರಿ ಕಾರ್ಯಾಚರಣೆ ಹೇಗಿದೆ ನೋಡಿ

ಸುಮಾರು 4ಸಾವಿರದ 8ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ. 2018ರಲ್ಲಿಯೇ 75ನೆ ವರ್ಷದ ಅಮೃತ ಮಹೋತ್ಸವವನ್ನು ಸಂಸ್ಥೆ ಆಚರಿಸಿಕೊಂಡಿತ್ತು. ಈಗ  ಅಮೃತ ಮಹೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳಲಿದೆ. ಈ ಎಲ್ಲಾ ಮೂರು ದಿನದ ಕಾರ್ಯಕ್ರಮಗಳಿಗೆ ಡಿವಿಎಸ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಣ್ಣೀರಿಟ್ಟ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್. ರಾಜಶೇಖರ್, ಸಹಕಾರ್ಯದರ್ಶಿ ಡಾ. ಎ. ಸತೀಶ್‌ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕರಾದ ಕೆ. ಬಸವಪ್ಪ ಗೌಡ, ಎಂ. ರಾಜು, ಡಾ.ಹೆಚ್.ಮಂಜುನಾಥ್, ಶಿಕ್ಷಕ ಪ್ರತಿನಿಧಿಗಳಾದ ಹೆಚ್.ಸಿ. ಉಮೇಶ್, ಡಾ.ಎಂ. ವೆಂಕಟೇಶ್ ಉಪಸ್ಥಿತರಿದ್ದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ