ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

MP Raghavendra's social media handler Prasanna Bhat goes missing from lake

ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಸಂಸದ ಬಿ.ವೈ ರಾಘವೇಂದ್ರರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗು ಅವರ ಸೋಶಿಯಲ್​ ಮೀಡಿಯಾಗಳನ್ನು ನೋಡಿಕೊಳ್ಳುತ್ತಿದ್ದ ಪ್ರಸನ್ನ ಭಟ್​, ರವರು ಇವತ್ತು ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದಾರೆ. 

ಇದನ್ನು ಸಹ ಓದಿ : ಹೊಸವರ್ಷದ ಖುಷಿಯಲ್ಲಿ ನಿಜಕ್ಕೂ ನಡೆದಿದ್ದೇನು? ಬುಲೆಟ್ ಫೈರ್​/ ಇಬ್ಬರ ಸಾವಿನ ಬಗ್ಗೆ ಎಸ್​ಪಿ ಹೇಳಿದ್ದೇನು? ಡಿಟೇಲ್ಸ್​ ವಿಡಿಯೋ ನೋಡಿ

ಇವತ್ತು ಅವರು ರಾಮನಗರದ ಕನಕಪುರದಲ್ಲಿರುವ ಕೆರೆಯೊಂದರಲ್ಲಿ ಈಜಲು ಹೋಗಿದ್ದ ಅವರು, ವಾಪಸ್ ಬಂದಿಲ್ಲ, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ತಮ್ಮ ಸಹೋದರ ಕೌಶಿಕ್ ಜೊತೆಗೆ ಪ್ರಸನ್ನ ಈಜಲು ತೆರಳಿದ್ದರು. ಕೌಶಿಕ್ಗೆ ಈಜಲು ಬರದ ಕಾರಣಕ್ಕೆ ಅವರು ಕೆರೆಗೆ ಇಳಿದಿರಲಿಲ್ಲ, ಆದರೆ ಈಜಲು ಹೋಗಿದ್ದ ಪ್ರಸನ್ನರವರು ವಾಪಸ್ ದಡಕ್ಕೆ ಬರಲಿಲ್ಲ 

ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್​

ಬಿವೈ ರಾಘವೇಂದ್ರರವರ ಜೊತೆಗೆ ಸಧಾ ಇರುತ್ತಿದ್ದ ಪ್ರಸನ್ನ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಪ್ರಸನ್ನರವರು ತಮ್ಮ ಕೌಟುಂಬಿಕ ಪ್ರವಾಸದಲ್ಲಿದ್ದರು. ರಾಮನಗರದಲ್ಲಿರುವ ತಮ್ಮ ಸಹೋಧರನ ಮನೆಗೆ ತೆರಳಿದ್ದರು. ಅಲ್ಲಿ ಈಜಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ