Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

Malenadu Today

ಶಿವಮೊಗ್ಗ ಬೆಂಗಳೂರು ನಡುವೆ ಟ್ರೈನ್​​ ನಲ್ಲಿ ಓಡಾಡುವ ಸಾಕಷ್ಟು ಪ್ರಯಾಣಿಕರಿದ್ದಾರೆ, ವಿಶೇಷವಾಗಿ ರೈಲಿನಲ್ಲಿಯೇ ಜರ್ನಿ ಸುಲಭ ಹಾಗೂ ಆರಾಮದಾಯಕ ಎನ್ನುವ ನೂರಾರು ಪ್ರಯಾಣಿಕರು ಪ್ರತಿನಿತ್ಯ ರೈಲ್ವೆ ಮಾಹಿತಿಗಳನ್ನು ಗಮನಿಸುತ್ತಾರೆ.

ಬ್ರೇಕಿಂಗ್​ ನ್ಯೂಸ್​ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಅವರಿಗಾಗಿ ರೈಲ್ವೆ ಇಲಾಖೆ ಮತ್ತೊಂದು ಸೌಲಭ್ಯವನ್ನು ಒದಗಿಸುತ್ತಿದೆ.  ಯಶವಂತಪುರ ಶಿವಮೊಗ್ಗ (16579 YESVANTPUR – SHIVAMOGGA TOWN Intercity Exp) ನಡುವೆ ಸಂಚರಿಸುವ ರೈಲಿಗೆ   ವಿಸ್ಟಾಡೋಮ್  (vistadome) ಬೋಗಿ ಅಳವಡಿಸಲಾಗಿದೆ. ಈ ಸಂಬಂಧ ಡಿಸೆಂಬರ್​ 30 ರಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ. 

Malenadu Today

ಇದನ್ನು ಸಹ ಓದಿ : ಹೊಸವರ್ಷದ ಖುಷಿಯಲ್ಲಿ ನಿಜಕ್ಕೂ ನಡೆದಿದ್ದೇನು? ಬುಲೆಟ್ ಫೈರ್​/ ಇಬ್ಬರ ಸಾವಿನ ಬಗ್ಗೆ ಎಸ್​ಪಿ ಹೇಳಿದ್ದೇನು? ಡಿಟೇಲ್ಸ್​ ವಿಡಿಯೋ ನೋಡಿ

ರೈಲು ಸಂಖ್ಯೆ 16579 ಯಶವಂತಪುರ – ಶಿವಮೊಗ್ಗ, ರೈಲು ಸಂಖ್ಯೆ 16580 ಶಿವಮೊಗ್ಗ – ಯಶವಂತಪುರ ರೈಲಿಗೆ ತಾತ್ಕಾಲಿಕವಾಗಿ ಒಂದು ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗಿದೆ . ಈ ಬೋಗಿಯು ಬರುವ ಮಾರ್ಚ್​ 31 ರ ವರೆಗೂ ಮುಂದುವರಿಯಲಿದೆ. 

ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್​

Malenadu Today

 ವಿಸ್ಟಾಡೋಮ್ ಬೋಗಿ ಏನು ವಿಶೇಷ

ವಿಸ್ಟಾಡೋಮ್​ ಈಗೀನ ಕಾಲದ ವ್ಯವಸ್ಥೆಯನ್ನು ಹೊಂದಿದ್ದು, ಏಸಿ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ, ಕಿಟಕಿ ಗಾಜಿನಲ್ಲಿ ನಿಸರ್ಗದ ಸೌಂದರ್ಯ ಸವಿಯಬಹುದು, ಪ್ರಯಾಣಿಕನ ಅನುಕೂಲದ ಅಗತ್ಯಗಳಿಗೆ ತಕ್ಕಂತೆ ಬೋಗಿ ಸಿದ್ದಪಡಿಸಲಾಗಿದ್ದು, ಸೀಟುಗಳು 180 ಡಿಗ್ರಿ ತಿರುಗಿಸಬಹುದು. 44 ಸೀಟ್​ನ ಬೋಗಿಯಲ್ಲಿ  ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ.  ಅದರಲ್ಲಿಯು ಬೋಗಿಯ ಒಂದು ಬದಿಯಲ್ಲಿ ಬೃಹತ್ ಗಾಜಿನ ವ್ಯವಸ್ಥೆಯಿದ್ದು, ಅದರ ಮೂಲಕ ಹೊರಗಿನ ಸಂಪೂರ್ಣ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಸೆಲ್ಪಿ ಪ್ರಿಯರಿಗೆ ಈ ಬೋಗಿ ತಕ್ಕುದಾದ ಜಾಗವಾಗಿದೆ. 

ಪ್ಲಾಶ್​ಬ್ಯಾಕ್​ ಸ್ಟೋರಿ : ಶಿವಮೊಗ್ಗದ ಪೊಲೀಸ್ ಇಲಾಖೆ ಪಾಲಿಗೆ ಆ ದಿನ ಅತ್ಯಂತ ಕರಾಳವಾಗಿತ್ತು.ಅಂದು ರೌಡಿಗಳು ವಿಜ್ರಂಭಿಸಿದರು.ಪೊಲೀಸರು ಜೈಲು ಸೇರಿದರು.ಯಾಕೆ ಗೊತ್ತಾ? JP Flash Back Story

ದಕ್ಷಿಣ ಭಾರತದಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಈ ರೀತಿಯ ಭೋಗಿಯ ಸೌಲಭ್ಯ ಸಿಕ್ಕಿರುವುದು ಎರಡನೆಯದಾಗಿದೆ.  ಕಳೆದ ವರ್ಷದಲ್ಲಿ ಈ ವಿಸ್ಟಾಡೋಮ್ ಕೋಚ್ ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸಿದ್ದು, ಜನ ಮೆಚ್ಚುಗೆ ಪಡೆದಿತ್ತು. ತಾಂತ್ರಿಕ ಕಾರಣಗಳಿಂದ ಈ ಸೇವೆಯನ್ನು ರೈಲ್ವೆ ಹಿಂಪಡೆದಿತ್ತು

Malenadu Today

ಇದನ್ನ ಸಹ ಓದಿ :BREAKING NEWS / ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಗನ್​ಫೈರ್​/ ಓರ್ವ ಗಂಭೀರ/ ಗುಂಡು ಹಾರಿಸಿವನು ಸಹ ಸಾವು/ NEW YEAR ನ ಮೊದಲ ಕ್ರೈಂ

ಈ ವಿಸ್ಟಾ ಡೋಮ್ ಕೋಟ್ರನ್ನು ಪುನರಾರಂಭಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯವರಿಗೆ ಪುನಃ ವಿಸ್ಟಾ ಡೋಮ್ ಕೋಚ್ ಅಳವಡಿಸಲು ಮನವಿ ಮಾಡಿಕೊಳ್ಳಲಾಗಿತ್ತು. ರೈಲ್ವೆ ಇಲಾಖೆಯು ಮನವಿಗೆ ಸ್ಪಂದಿಸಿ ವಿಸ್ಟಾ ಡೋಮ್ ಕೋಚ್ ಅನ್ನು ಪುನಃ ಅಳವಡಿಸಿದ್ದು ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಿದೆ.

Malenadu Today

ಸಂಸದರ ಕೃತಜ್ಞತೆ

ಈ ಹಿನ್ನೆಲೆಯಲ್ಲಿ ಭೋಗಿ ಸೇವೆಯನ್ನು ಪುನರಾರಂಭಿಸಿರುವ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಸಂಸದ ರಾಘವೇಂದ್ರ ಇಲಾಖಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Malenadu Today

Share This Article