ಕಣ್ಣೀರಿಟ್ಟ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬವನ್ನು ಪಕ್ಷದ ಜಿಲ್ಲಾ ಯುವ ಘಟಕ ಹಾಗು ವಿವಿಧ ಸಂಘಟನೆಗಳು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದರು.

ಕಣ್ಣೀರಿಟ್ಟ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ

ನಿನ್ನೆ ಭಾನುವಾರ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಯವರ ಹುಟ್ಟುಹಬ್ಬವನ್ನು ವಿವಿದೆಡೆ ವಿವಿಧ ರೀತಿಯಲ್ಲಿ ಆಚರಿಸಲಾಯ್ತು, ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿಯವರ ಹುಟ್ಟುಹಬ್ಬವನ್ನು ಪಕ್ಷದ ಜಿಲ್ಲಾ ಯುವ ಘಟಕ ಹಾಗು ವಿವಿಧ ಸಂಘಟನೆಗಳು ಮತ್ತು ಅಭಿಮಾನಿಗಳು  ಹಮ್ಮಿಕೊಂಡಿದ್ದರು. 

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ, ಸೈಯದ್ ಸಾದತ್ ದರ್ಗಾಕ್ಕೆ ಪೂಜೆ, ಬಾಬಾ ಸಾಹೇಬ್​ ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಪ್ರತಿಮೆಗಳಿಗೆ ಮಾಲಾರ್ಪಣೆ, ಸರ್ಕಾರಿ ಆಸ್ಪತ್ರೆಗೆ ತೆರಳಿ ಬ್ರೆಡ್ಡು ಹಣ್ಣು ವಿತರಣೆ ಹೀಗೆ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಹಲವೆಡೆ ಶಾರದಾ ಅಪ್ಪಾಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಯ್ತು. 

ಬ್ರೇಕಿಂಗ್​ ನ್ಯೂಸ್​ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಆಟೋಚಾಲಕರು ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರೇ, ಶಾರದಾ ಅಪ್ಪಾಜಿಯವರ ಮನೆ ಎದುರು ಸಾವಿರಾರು ಲಾಡು ವಿತರಿಸಲಾಯ್ತು. ಹೀಗೆ ಅಪ್ಪಾಜಿ ಗೌಡರ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಅಭಿಮಾನ ಕಂಡು ಶಾರದಾ ಅಪ್ಪಾಜಿ ಭಾವುಕರಾದರು. 

ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್​

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,  ಕ್ಷೇತ್ರದ ಜನರು ಹೊಂದಿರುವ ಅಭಿಮಾನ, ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪಾಜಿಯವರು ಕೈಗೊಂಡಿರುವ ಜನಪರ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ.

ಪ್ಲಾಶ್​ಬ್ಯಾಕ್​ ಸ್ಟೋರಿ : ಶಿವಮೊಗ್ಗದ ಪೊಲೀಸ್ ಇಲಾಖೆ ಪಾಲಿಗೆ ಆ ದಿನ ಅತ್ಯಂತ ಕರಾಳವಾಗಿತ್ತು.ಅಂದು ರೌಡಿಗಳು ವಿಜ್ರಂಭಿಸಿದರು.ಪೊಲೀಸರು ಜೈಲು ಸೇರಿದರು.ಯಾಕೆ ಗೊತ್ತಾ? JP Flash Back Story

ಅವರೊಂದಿಗೆ ಇದ್ದು, ಎಲ್ಲಾ ರೀತಿಯಲ್ಲೂ ಬೆಳವಣಿಗೆ ಕಂಡ ಬಹಳಷ್ಟು ಮಂದಿ ಇಂದು ಅವರಿಗೆ ದ್ರೋಹ ಬಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳುತ್ತಾ ಶಾರದಾ ಅಪ್ಪಾಜಿ ಕಣ್ಣೀರಿಟ್ಟರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ