ಹಾವೇರಿ ದುರ್ಘಟನೆ | ಎಮ್ಮೆಹಟ್ಟಿ ಗ್ರಾಮದಲ್ಲಿ ಆಕ್ರಂದನ | ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?

horrific accident yesterday near Gundenahalli Cross, Badagi Taluk, Haveri District

ಹಾವೇರಿ ದುರ್ಘಟನೆ  | ಎಮ್ಮೆಹಟ್ಟಿ ಗ್ರಾಮದಲ್ಲಿ ಆಕ್ರಂದನ | ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?
Gundenahalli Cross, Badagi Taluk, Haveri District

SHIVAMOGGA | MALENADUTODAY NEWS | Jun 28, 2024  ಮಲೆನಾಡು ಟುಡೆ  haveri accident news

ನಿನ್ನೆ ದಿನ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಗುಂಡೇನಹಳ್ಳಿ ಕ್ರಾಸ್‌ ಬಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಶಿವಮೊಗ್ಗದ 13 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಊರಿನಲ್ಲಿಂದು ವಿಷಯ ತಿಳಿಯುತ್ತಲೇ ನೀರವ ಮೌನ ಆವರಿಸಿತ್ತು. ಮೃತ ಸಂಬಂಧಿಕರು , ಊರಿನವರು  ಮೃತ ಕುಟುಂಬಸ್ಥರ ಮನೆಯ ಬಳಿಗೆ ದೌಡಾಯಿಸಿದ್ದರು. ಊರಿನವರು ಹೆಚ್ಚಿನ ಮಾಹಿತಿಗಾಗಿ ಹಲವರನ್ನ ಸಂಪರ್ಕಿಸುತ್ತಾ, ಮುಂದೇನು ಮಾಡುವುದು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. 

ಅಂತಿಮ ದರ್ಶನಕ್ಕೆ ಸಿದ್ಧತೆ

ಇನ್ನೊಂದಡೆ ಹಾವೇರಿಯಲ್ಲಿ ಮೃತರಾದವರನ್ನು ಊರಿಗೆ ಸ್ಥಳಾಂತರಿಸುವ ಸಂಬಂಧ ಊರಿನ ಮುಖಂಡರು , ಯುವಕರು ಹಾವೇರಿಗೆ ದೌಡಾಯಿಸಿದ್ದಾರೆ. ಇತ್ತ ಎಮ್ಮೆಹಟ್ಟಿ ಗ್ರಾಮದಲ್ಲಿ ಮೃತರ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಲಾಗುತ್ತಿದೆ. 

ಇನ್ನು ಹಾವೇರಿ ಘಟನೆ ಬಗ್ಗೆ ಮಾತನಾಡಿರುವ ಹಾವೇರಿ ಎಸ್‌ಪಿ ಅಂಶುಕುಮಾರ್‌ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಟಿಟಿ ಡಿಕ್ಕಿಯಾಗಿದೆ. ಇಬ್ಬರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.  ಇಬ್ಬರು ಪುರುಷರು, ಇಬ್ಬರು ಮಕ್ಕಳು ಹಾಗೂ ೯ ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ. ಅತಿವೇಗ ಘಟನೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದಿದ್ದಾರೆ.  ʼ

Thirteen people from Shivamogga died in a horrific accident yesterday near Gundenahalli Cross, Badagi Taluk, Haveri District. The news of the deaths has caused widespread grief in the victims' village. Arrangements are being made to transport the bodies back to the village and for the funerals to be held at the local school grounds and Hindu Rudrabhumi cemetery.

Haveri SP Anshukumar stated that the accident was caused by a TT vehicle colliding with a parked lorry. Two injured survivors are receiving treatment. The deceased include two men, two children, and nine women. Excessive speed is suspected to be a contributing factor, and an investigation is ongoing.