ಭದ್ರಾ ಡ್ಯಾಮ್‌ | ಜಲಾಶಯದಿಂದ ನದಿಗೆ ಒಂದು ಟಿಎಂಸಿ ನೀರು | ಗದಗ, ಹಾವೇರಿ ಜನರಿಗೆ ಗುಡ್‌ ನ್ಯೂಸ್

Bhadra Dam | One TMC of water from reservoir to river | Good news for the people of Gadaga, Haveri

ಭದ್ರಾ ಡ್ಯಾಮ್‌ | ಜಲಾಶಯದಿಂದ ನದಿಗೆ  ಒಂದು ಟಿಎಂಸಿ ನೀರು | ಗದಗ, ಹಾವೇರಿ ಜನರಿಗೆ ಗುಡ್‌ ನ್ಯೂಸ್
Gadaga, Haveri, Bhadra Dam

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಭದ್ರಾ ಜಲಾಶಯದಿಂದ ನದಿಗೆ ಬರೋಬ್ಬರ ಒಂದು ಟಿಎಂಸಿ ನೀರನ್ನು ಹರಿಸಲಾಗುತ್ತಿದೆ. ಈ ಸಂಬಂಧ ಮಾಹಿತಿ ಲಭ್ಯವಾಗಿದೆ. ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿರುವವರಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. 

ಭದ್ರಾ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲಾಗುತ್ತಿದೆ. ತುಂಗಭದ್ರಾ ನದಿ ದಂಡೆಯಲ್ಲಿರುವ ನಗರ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿರುವ ಈ ಹಿನ್ನೆಲೆಯಲ್ಲಿ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಮೇ 22ರ ರಾತ್ರಿಯಿಂದ ಅಂದರೆ ಇಂದು ರಾತ್ರಿಯಿಂದಲೇ  28ರ ವರೆಗೆ ತಲಾ 2ಸಾವಿರ ಕ್ಯೂಸೆಕ್‌ನಂತೆ(ಕಡೇ ದಿನ 1574 ಕ್ಯೂಸೆಕ್ ಮಾತ್ರ) ಒಟ್ಟು 11,574 ಕ್ಯೂಸೆಕ್ (1 ಟಿಎಂಸಿ) ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ವೃತ್ತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.