ತೀರ್ಥಹಳ್ಳಿ ಹರಿದಾಡ್ತಿದೆ ಕೋಟಿ ಕಾಯಿನ್‌? | ಹಣ ಎಣಿಸಿ ಎಣಿಸಿ ಕೊಡುವ ಮೊದಲು ಇರಲಿ ಜಾಗ್ರತೆ |

Thirthahalli police are creating awareness among the people to be ware of bitcoin trading in the taluk

ತೀರ್ಥಹಳ್ಳಿ ಹರಿದಾಡ್ತಿದೆ  ಕೋಟಿ ಕಾಯಿನ್‌? | ಹಣ ಎಣಿಸಿ ಎಣಿಸಿ ಕೊಡುವ ಮೊದಲು ಇರಲಿ ಜಾಗ್ರತೆ |
bitcoin trading

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಭಾಗದಲ್ಲಿ  ಬಿಟ್‌ ಕಾಯಿನ್‌ bitcoin trading   ರೂಪದ ಚೈನ್‌ ಲಿಂಕ್‌ ವಹಿವಾಟವೊಂದು ಜೋರಾಗಿ ನಡೆಯುತ್ತಿದೆ. ಈ ಮೊದಲು ವಿವಿಧ ವಸ್ತುಗಳನ್ನ ನೀಡಿ ಸನ್‌ಫ್ಲವರ್‌, ಟ್ರೈ ಆಂಗಲ್‌ ಟ್ರೇಡಿಂಗ್‌ ನಡೆಸ್ತಿದ್ದ ಕೆಲವು ಕಂಪನಿಗಳು ಈಗೀಗ ಷೇರ್‌ ಮಾರ್ಕೆಟ್‌ನಲ್ಲಿ ಆಲ್ಗೋ ಟ್ರೆಡಿಂಗ್‌, ಬೋಟ್‌ ಟ್ರೇಡಿಂಗ್‌ ಹೆಸರಿನಲ್ಲಿ ಗ್ರಾಹಕರನ್ನ ಸೆಳೆಯುತ್ತಿದೆ. 

ದೇಶದಲ್ಲಿ ಇಂತಹದ್ದೊಂದು ವಹಿವಾಟು ಮುಂಚೂಣಿಯಲ್ಲಿದೆ. ಷೇರು ಮಾರುಕಟ್ಟೆಯು ಕನಸಿನ ಕೇಂದ್ರವಾಗಿದ್ದು, ಇಲ್ಲಿರುವ ದುಡ್ಡಿನ ಚೀಲವನ್ನ ಸುಲಭವಾಗಿ ಹೊತ್ತುಕೊಂಡು ಮನೆಗೆ ಬರಬಹುದು ಭ್ರಮೆಯೊಂದಿದೆ. ಅದು ಲಾಗುವಾಗುವುದಿಲ್ಲ. ಹಾಗೆ ಶ್ರೀಮಂತರಾಗಲು ನಿರಂತರ ಅಧ್ಯಯನ ಬೇಕಿದೆ. ಹಾಗಿದ್ದರೂ ಬಿಟ್‌ ಕಾಯಿನ್‌ ಪ್ರಪಂಚದಲ್ಲಿ ಕೋಟಿಗಟ್ಟಲೇ ದುಡ್ಡಿದೆ, ಅದನ್ನು ಈಸಿಯಾಗಿ ಎತ್ತಿಕೊಡುತ್ತೇವೆ ಎಂಬಂತಹ ಸುಳ್ಳುಗಳನ್ನ ಹೇಳಿ ಗ್ರಾಹಕರ ಹಣವನ್ನು ಲೂಟಿ ಮಾಡಲಾಗುತ್ತಿದೆ. 

ಇದಕ್ಕೆ ಪೂರಕವೆಂಬಂತೆ  ತೀರ್ಥಹಳ್ಳಿ ಭಾಗದಲ್ಲಿ ಇತ್ತೀಚಿಗೆ U…..T COIN ಎಂಬ  ಹೂಡಿಕೆ ತುಂಬಾ ಪ್ರಚಲಿತದಲ್ಲಿ ಇದೆಯಂತೆ..ಈ ನಿಟ್ಟಿನಲ್ಲಿ ಯಾವುದೇ ಡಿಜಿಟಲ್ ಹೂಡಿಕೆಗಳು ಅಪಾಯಕಾರಿಯಾಗಿದ್ದು, ತನ್ನದೇ ಆದ Risk Zone ನ್ನು ಹೊಂದಿರುತ್ತದೆ. ಆದ್ದರಿಂದ ಹೂಡಿಕೆದಾರರು ಯಾವದೇ ಹೂಡಿಕೆ ಮಾಡುವ ಮುನ್ನ  ಇಂತಹ digital financial instrument  ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳುವುದು ಹಾಗೂ ಅದರಲ್ಲಿನ ಅಪಾಯ ಅರಿತು ಜಾಗ್ರತೆ ವಹಿಸುವಂತೆ ತೀರ್ಥಹಳ್ಳಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡುತ್ತಿದ್ದಾರೆ. ಈ ಕಾಳಜಿಯ ಎಚ್ಚರಿಕೆಯನ್ನ  ಗ್ರಾಹಕರು ಯಾವುದೇ ವಹಿವಾಟು ಆರಂಭಿಸುವ ಮುನ್ನ ವಹಿಸಿದರೇ ಉತ್ತಮ ಎನ್ನುವುದು ಮಲೆನಾಡು ಟುಡೆಯ ಆಶಯ