ಸ್ಕೂಲ್ ನಲ್ಲಿ ಫುಡ್ ಕೋರ್ಟ್ ಓಪನ್ ಮಾಡಿ ಎಗ್ ರೈಸ್ ಚಿಕನ್ ಕಬಾಬ್ ಮಾರಾಟ ಮಾಡಿದ ಮಕ್ಕಳು, ಕಾರಣವೇನು ಗೊತ್ತಾ.?

Children opened a food court in school and sold egg rice chicken kebabs, do you know the reason?

ಸ್ಕೂಲ್ ನಲ್ಲಿ ಫುಡ್  ಕೋರ್ಟ್ ಓಪನ್ ಮಾಡಿ ಎಗ್ ರೈಸ್ ಚಿಕನ್ ಕಬಾಬ್ ಮಾರಾಟ ಮಾಡಿದ ಮಕ್ಕಳು, ಕಾರಣವೇನು ಗೊತ್ತಾ.?

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಟ್ಟಮಕ್ಕಿ ಸಹ್ಯಾದ್ರಿ ಐಸಿಐಸಿ ಶಾಲೆಯ ಆವರಣದಲ್ಲಿ ಮಕ್ಕಳಿಂದ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳ ನಡೆಯಿತು.

 ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಐಸಿ  ಶಾಲೆ ಆವರಣದಲ್ಲಿ ಮಕ್ಕಳಿಂದ ಆಹಾರ ತಯಾರಿಕೆ ಹಾಗೂ ಮಾರಾಟ ಮೇಳ ನಡೆಯಿತು. ವಿದ್ಯಾರ್ಥಿಗಳು ತರಕಾರಿ ಸಲಾಡ್, ಪಾನಿಪೂರಿ, ದೋಸೆ, ಕೋಸಂಬರಿ, ಎಗ್ ರೈಸ್ ಚಿಕನ್ ಕಬಾಬ್  , ತಂದೂರಿ ರೊಟಿ,  ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಕರಿ, ಮಟನ್ ಕರಿ, ವಿವಿದ ಬಗೆಯ ಜ್ಯೂಸ್ ಹಾಗೂ ಐಸ್ ಕ್ರೀಂ  ಮುಂತಾದ ನಾನಾ ಬಗೆಯ ತಿಂಡಿ ತಿನಿಸಿಗಳನ್ನು ಸ್ವತಃ ತಯಾರು ಮಾಡಿ, ಉತ್ಸಾಹದಿಂದ ಮಾರಾಟ ಮಾಡುತ್ತಿದ್ದ ದೃಶ್ಯ ಪೋಷಕರು ಮತ್ತು ಸಾರ್ವಜನಿಕರ ಗಮನಸೆಳೆಯಿತು.

ಆಹಾರ ಮೇಳಕ್ಕೆ ಶಾಲೆ ಅಧ್ಯಕ್ಷರು ಬಾಳೆಹಳ್ಳಿ ಪ್ರಭಾಕರ್​ , ಒಕ್ಕಲಿಗ ಸಂಘದ ನೀರ್ದೇಶಕ ಧರ್ಮೇಶ್, ತೀರ್ಥಹಳ್ಳಿ ಡಿಎಸ್ ಪಿ ಗಜಾನನ ವಾಮನ ಸುತಾರ್, ಮುಖ್ಯ ಶಿಕ್ಷಕಕರು ಜಗದೀಶ್, ಶಾಲೆಯ ಶಿಕ್ಷಕ ವಂದ ಹಾಗೂ ಪೋಷಕರು ಮಾರ್ಗದರ್ಶಕರಾಗಿದ್ದರು.

ಶಾಲೆಯಲ್ಲಿ ನಡೆದ ಆಹಾರ ಮೇಳ ಕುರಿತು ಪ್ರತಿಕ್ರಿಯಿಸಿದ  ಮುಖ್ಯಶಿಕ್ಷಕರು ಆಹಾರ ಮೇಳದಿಂದ ಮಕ್ಕಳಿಗೆ ವ್ಯವಹಾರ ಜ್ಞಾನದ ಜೊತೆಗೆ, ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿದೆ. ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಪೋಷಕರು ಅಡುಗೆ ಮಾಡುವಾಗ ಮಕ್ಕಳು ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ. ತರಕಾರಿ ಹಾಗೂ ಅಡುಗೆ ಪದಾರ್ಥಗಳ ಬಗ್ಗೆ ವಿಶೇಷ ಆಸಕ್ತಿ ಮೂಡಲು ಸಹಕಾರಿ ಯಾಗಲಿದೆ. ಮಕ್ಕಳ ಆಹಾರ ಮೇಳಕ್ಕೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಪ್ರತಿ ವರ್ಷ ಶಾಲೆ ವಿದ್ಯಾರ್ಥಿ ಗಳಿಂದ ಮಕ್ಕಳಿಗೆ ಪೋಷಕಾಂಶ ಒದಗಿಸುವ ತಿಂಡಿಗಳ ಆಹಾರ ಮೇಳ ಆಯೋಜಿಸಲಾಗುವುದು ಎಂದರು.