ಮುಗಿಯದ ತೀರ್ಥಹಳ್ಳಿ ಕೊಂಬಿನ ಕಥೆ! ದಾಖಲಾಯ್ತು ಮತ್ತೊಂದು ಕೇಸ್! ಏಕೆ ಗೊತ್ತಾ?
A case under the Arms Act has been registered at Theerthahalli Police Station in connection with the items found at Basavanagadde in Thirthahalli
SHIVAMOGGA NEWS / Malenadu today/ Nov 27, 2023 | Malenadutoday.com
THIRTHAHALLI | ಕಳೆದ ನವೆಂಬರ್ ಒಂದರು ತೀರ್ಥಹಳ್ಳಿ ಬಸವನಗದ್ದೆಯಲ್ಲಿ ಪ್ರಸನ್ನ ಎಂಬವರ ಮನೆಗೆ ಅರಣ್ಯ ಇಲಾಖೆಯವರು ಯಾರೋ ಮಾಹಿತಿ ನೀಡಿದ್ರು ಎಂದು ದಾಳಿ ನಡೆಸಿದ್ದ ವಿಚಾರ ಗೊತ್ತೆ ಇದೆ. ಆನಂತರ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಮುಂದೆ ನಿಂತು, ಹಿರಿಯರೊಬ್ಬರು ಅರೆಸ್ಟ್ ಆಗುವುದನ್ನ ತಪ್ಪಿಸಿದ್ದರು ಈ ಬಗೆಗಿನ ವರದಿಯ ಲಿಂಕ್ ಇಲ್ಲಿದೆ ತೀರ್ಥಹಳ್ಳಿ ಕೊಂಬಿನ ಕಥೆ | ಗೊತ್ತಿರೋರೆ ಇಟ್ಟರು ಪಿನ್! ನಡೀತು ಸಂಕಷ್ಟದ ರೇಡ್ | ಅರಣ್ಯ ಇಲಾಖೆಗೆ ಸಿಕ್ಕಿದ್ದೇನು?
ಇದೆಲ್ಲದರ ಬಳಿಕ ಅರಣ್ಯ ಇಲಾಖೆ ಅಮಾನತು ಪಡಿಸಿಕೊಂಡಿದ್ದ ವಸ್ತುಗಳ ಆಧಾರದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಕಲಂ: 2(2), 2(16), 9, 39, 49, 49 (3), 49(3), 50, 51 we e ale o n 1963 : 84, 86, 87 ರ ಅಡಿಯಲ್ಲಿ ತನಿಖೆ ಕೈಗೊಂಡಿದೆ.
READ : ಯಾರಿಗೂ ಸಿಗದ ಅಜ್ಜಿ ಕಾಡಿಂದ ಕೂಗಿ ಕರೆದಳು! 3 ದಿನ ಅರಣ್ಯದಲ್ಲಿ ಹೇಗಿದ್ದಳು 85 ವರ್ಷದವಳು! ಹೊಸನಗರದಲ್ಲಿ ಅಚ್ಚರಿ
ಈ ಮಧ್ಯೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಇದೇ ವಿಚಾರದಲ್ಲಿ ಇನ್ನೊಂದು ಕೇಸ್ ದಾಖಲಾಗಿದೆ INDIAN ARMS ACT, 1959 (U/s-25) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಬಸವನಗದ್ದೆಯಲ್ಲಿ ನಡೆದಿದ್ದ ದಾಳಿ ವೇಳೆ ಲಭ್ಯವಾದ ನಾಡ ಬಂದೂಕಿನ ವಿಚಾರದಲ್ಲಿ ಆರ್ಮ್ಸ್ ಆಕ್ಟ್ ಅಡಿಯಲ್ಲಿ. ತನಿಖೆ ಮಾಡಲು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ತೀರ್ಥಹಳ್ಳಿ ರವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಬಂದೂಕನ್ನ ಸುಪರ್ಧಿಗೆ ಪಡೆದು ಕೇಸ್ ದಾಖಲಿಸಲಾಗಿದೆ.