ತೀರ್ಥಹಳ್ಳಿ ಕೊಂಬಿನ ಕಥೆ | ಗೊತ್ತಿರೋರೆ ಇಟ್ಟರು ಪಿನ್! ನಡೀತು ಸಂಕಷ್ಟದ ರೇಡ್​ | ಅರಣ್ಯ ಇಲಾಖೆಗೆ ಸಿಕ್ಕಿದ್ದೇನು?

Forest department raid case report at Tirthahalli Basavangadde ತೀರ್ಥಹಳ್ಳಿ ಬಸವನಗದ್ದೆಯಲ್ಲಿ ನಡೆದ ಅರಣ್ಯ ಇಲಾಖೆ ರೇಡ್ ಪ್ರಕರಣದ ವರದಿ

ತೀರ್ಥಹಳ್ಳಿ ಕೊಂಬಿನ ಕಥೆ |  ಗೊತ್ತಿರೋರೆ ಇಟ್ಟರು ಪಿನ್! ನಡೀತು ಸಂಕಷ್ಟದ ರೇಡ್​ |  ಅರಣ್ಯ ಇಲಾಖೆಗೆ ಸಿಕ್ಕಿದ್ದೇನು?

KARNATAKA NEWS/ ONLINE / Malenadu today/ Nov 2, 2023 SHIVAMOGGA NEWS

THIRTHAHALLI|  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬಸವನಗದ್ದೆಯಲ್ಲಿ ನಿನ್ನೆ ಮನೆಯೊಂದರ ಮೇಲೆ ದಾಳಿ ನಡೆಸಿ ವನ್ಯಜೀವಿಗಳ ಕೊಂಬುಗಳನ್ನ ವಶಕ್ಕೆ ಪಡೆದಿದ್ದಾರೆ. 

ದಾಳಿಯಲ್ಲಿ ಒಟ್ಟಾರೆ  21 ಕೊಂಬುಗಳು, 10 ಕೆಜಿ ಗಂಧದ ಮರ, ಒಂದು ನಾಡ ಬಂದೂಕು ಪತ್ತೆಯಾಗಿವೆ. ಅರಣ್ಯ ಅಧಿಕಾರಿಗಳಿಗೆ ಮನೆಯ ಮಾಲೀಕರೇ ಸಹಕಾರ ನೀಡಿದ್ದು ಚೀಲದಲ್ಲಿ ತುಂಬಿದ್ದ ವಸ್ತುಗಳನ್ನ ಇಲಾಖೆಗೆ ಒಪ್ಪಿಸಿದ್ದಾರೆ.ಸದ್ಯ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಂಭವವಿದೆ.

ನಿಜಕ್ಕೂ ನಡೆದಿದ್ದೇನು?

ಬಸವನಗದ್ದೆಯ ಪ್ರಸನ್ನ ಅವರ ಮನೆಯಲ್ಲಿ ದೊಡ್ಡ ಪ್ರಮಾಣದ ವನ್ಯ ಜೀವಿ ವಸ್ತುಗನ್ನು ಸಂಗ್ರಹಿಸಿಡಲಾಗಿದೆ ಎಂದು ಯಾರೋ ಮಹಾನುಭಾವರು  ಅರಣ್ಯ ಇಲಾಖೆಯ ಬೆಂಗಳೂರು ಕಚೇರಿಗೆ ಮಾಹಿತಿ ನೀಡಿದ್ದಾರೆ. ಜೊತೆಯಲ್ಲಿ ಮನೆಯ ಲೊಕೆಷನ್​ ಕೂಡ ಹಾಕಿದ್ದರಂತೆ. ಕೇಂದ್ರ ಇಲಾಖೆಯಿಂದ ಬಂದ ಮಾಹಿತಿ ಆಧರಿಸಿ ತೀರ್ಥಹಳ್ಳಿಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದರು.

READ : ಮಲೆನಾಡಿಗರೇ ಎಚ್ಚರ! ಸೀನಿಯರ್ ಸಿಟಿಜನ್ ಮನೆ ಮೇಲೆ ಅರಣ್ಯ ಇಲಾಖೆ ರೇಡ್ | ಅರೆಸ್ಟ್ ತಪ್ಪಿಸಿದ ಶಾಸಕ

ಏಲ್ಲಿಂದ ಬಂದವು?

ಮಲ್ನಾಡ್​ನಲ್ಲಿ ಹಳೆ ಕಾಲದ ಕೊಂಬು, ಕೋಡುಗಳು ಇರುವುದು ಸಹ, ಇಲ್ಲಿವರೆಗೂ ಡಿಪಾರ್ಟ್​ಮೆಂಟ್​ ಇಂತಹವಕ್ಕೆ ತೊಂದರೆ ಕೊಟ್ಟಿರಲಿಲ್ಲ. ಹಾಗಾಗಿ ಅವುಗಳನ್ನ ವಿಲೇವಾರಿ ಮಾಡಲು ಸಹ ಮಲೆನಾಡಿಗರು ಹೋಗಿರಲಿಲ್ಲ. ಆದರೆ ಈಗ ಅದು ಕೇಸು, ಕಟ್ಲೆ ಅಂತಾ ತಲೆನೋವು ತರುತ್ತಿದೆ. ಪ್ರಸನ್ನರವರ ನಿವಾಸದಲ್ಲಿ ಪೂರ್ವಜರಿಂದ ಬಂದಿದ್ದ ಹಲವು ಜಿಂಕೆಯ ಮತ್ತು ಕಾಡುಕೋಣದ ಕೋಡುಗಳ ಸಂಗ್ರಹ ಇದ್ದವು. ಹಳೆ ಮನೆ ಅಳಿದ ಬಳಿಕ ಅವುಗಳನ್ನ ಚೀಲಕ್ಕೆ ತುಂಬಿ ಮೂಟೆ ಕಟ್ಟಿ ಇಟ್ಟಿದ್ದರು. ಸದ್ಯ ಅವುಗಳನ್ನೆ ಅರಣ್ಯ ಇಲಾಖೆ ಜಪ್ತಿ ಮಾಡಿದೆ. 

ಆರಗ ಆಕ್ರೋಶ

ನಿನ್ನೆ ಬಸವನಗದ್ದೆಯಲ್ಲಿ ಯಾರೇ ಜನಪ್ರತಿನಿಧಿ ಇರುತ್ತಿದ್ದರು ಅಂತಹದ್ದೊಂದು ಆಕ್ರೋಶ ತೋರಿಯೇ ತೀರುತ್ತಿದ್ದರು. ಮಾಜಿ ಸಚಿವ ಆರಗ ಜ್ಞಾನೇಂದ್ರರವರು ಸಹ ಆರೋಗ್ಯ ಸರಿಯಿಲ್ಲದ ಹಿರಿಯರನ್ನ ಬಂಧಿಸಿದರೇ ನಮ್ಮ ಹೆಣದ ಮೇಲೆ ಬಂಧಿಸಿ ಎಂದು ಅರಣ್ಯ ಅಧಿಕಾರಿಗಳಿಗೆ ಸವಾಲ್ ಹಾಕಿದರು. ಅವರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಅಲ್ಲಿಂದ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ತೆರಳಿದ್ದಾರೆ.