ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪರಿಗೆ ದಿಢೀರ್​​ ದೆಹಲಿಯಿಂದ ಬುಲಾವ್! ಕಾರಣ?

The High Command has called KS Eshwarappa to come to Delhi ಕೆ.ಎಸ್​.ಈಶ್ವರಪ್ಪರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಕರೆ ನೀಡಿದೆ

ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪರಿಗೆ ದಿಢೀರ್​​ ದೆಹಲಿಯಿಂದ ಬುಲಾವ್! ಕಾರಣ?

KARNATAKA NEWS/ ONLINE / Malenadu today/ Nov 2, 2023 SHIVAMOGGA NEWS

SHIVAMOGGA|  ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಾಕಿ ಉಳಿದಿರುವ ಮಧ್ಯೆಯೇ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಮೂವರು ಇತರ ಹಿಂದುಳಿದ ವರ್ಗದ (ಒಸಿ) ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. 

ಅದರಲ್ಲಿಯು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ರಿಗೆ (ks eshwarappa) ಬುಲಾವ್ ಬಂದಿರುವುದು ಇನ್ನಷ್ಟು ಅಚ್ಚರಿ ತರಿಸಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಸಹ ಸೂಚನೆ ಬಂದಿದ್ದು, ಗುರುವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ, ಈ ನಾಯಕರು ಯಾರನ್ನು ಭೇಟಿ ಮಾ ಡುತ್ತಾರೆ ಎಂಬುದರ ಮಾಹಿತಿಯಿಲ್ಲ 

READ : ಈಶ್ವರಪ್ಪ ಕಾಂಗ್ರೆಸ್​ಗೆ? | ಹೀಗ್ಯಾರು ಹೇಳಿದ್ದು? ಮಾಜಿ ಡಿಸಿಎಂ ಕೊಟ್ಟ ಉತ್ತರವೇನು?

ಇನ್ನೂ ಬಗ್ಗೆ ಮಾತನಾಡಿರುವ ಕೆ.ಎಸ್​.ಈಶ್ವರಪ್ಪ ದೆಹಲಿಗೆ ಬರಲು ಸೂಚನೆ ಬಂದಿದೆ, ಯಾಕೆ ಅಂತ ಗೊತ್ತಿಲ್ಲ

ಪಕ್ಷದ ಸೂಚನೆ ಮೇರೆಗೆ ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ.ನನ್ನ ಜೊತೆಗೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರನ್ನೂ ಕರೆದಿದ್ದಾರೆ. ಯಾಕೆ ಎಂಬುದು ಮಾತ್ರ ಗೊತ್ತಿಲ್ಲ ಎಂದಿದ್ದಾರೆ.ದೆಹಲಿಯ ಪಕ್ಷದ ಕಚೇರಿಗೆ ಆಗಮಿಸುವಂತೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ಸಂದೇಶ ತಲುಪಿದೆ. ಪಕ್ಷದ ಕಚೇರಿಯಲ್ಲೇ ಸಭೆ ಇದೆ ಎಂದು ಮೂಲಗಳು ತಿಳಿಸಿವೆ.