ಈಶ್ವರಪ್ಪ ಕಾಂಗ್ರೆಸ್​ಗೆ? | ಹೀಗ್ಯಾರು ಹೇಳಿದ್ದು? ಮಾಜಿ ಡಿಸಿಎಂ ಕೊಟ್ಟ ಉತ್ತರವೇನು?

KS Eshwarappa held a press conference in Shimoga ಕೆಎಸ್​ ಈಶ್ವರಪ್ಪನವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ರು

ಈಶ್ವರಪ್ಪ ಕಾಂಗ್ರೆಸ್​ಗೆ? | ಹೀಗ್ಯಾರು ಹೇಳಿದ್ದು? ಮಾಜಿ ಡಿಸಿಎಂ ಕೊಟ್ಟ ಉತ್ತರವೇನು?

KARNATAKA NEWS/ ONLINE / Malenadu today/ Oct 21, 2023 SHIVAMOGGA NEWS

KS ESHWARAPPA | ವಿವಿಧ ವಿಷಯಗಳ ಬಗ್ಗೆ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಇವತ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು,  ಪ್ರಜಾಪ್ರಭುತ್ವದಲ್ಲಿ ಏನೇನು ನಡೆಯಬಾರದೂ ಅದೆಲ್ಲಾ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ವಾಗ್ದಾಳಿಯ ಅಂಶಗಳನ್ನು ಇಲ್ಲಿ ನೀಡಲಾಗಿದೆ. 

ಆರೋಪ : 1 | ಸಚಿವ ಬೈರತಿ ಸುರೇಶ್ ಆಪ್ತ ಹಾಗೂ ಇತರರು ಸೇರಿಕೊಂಡು ನಕಲಿ ವೋಟರ್ ಕಾರ್ಡ್, ನಕಲಿ ಆಧಾರ ಕಾರ್ಡ್, ನಕಲಿ ಪಾನ್ ಕಾರ್ಡ್ ತಯಾರಿಸುತ್ತಿದ್ದರು ಎಂದು ಬಹಿರಂಗವಾಗಿದೆ. ಇದು ಸಚಿವರಿಗೆ ಗೊತ್ತಿತ್ತಾ, ಎಷ್ಟು ವರ್ಷದಿಂದ ಇದು ನಡೆದಿದೆ, ಮುಂದೆ ನಡೆಯಲಿರುವ 5  ರಾಜ್ಯಗಳ ಚುನಾವಣೆಯಲ್ಲಿ ದುರ್ಬಳಕೆ ಆಗುವುದಿಲ್ಲವೇ? ಈ ಬಗ್ಗೆ ಸಿಎಂ ತಕ್ಷಣವೇ ಹೇಳಿಕೆ ನೀಡಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು

ಜೋಗ ಜಲಪಾತ ವೀಕ್ಷಣೆಗೆ ಈಗ ಹೋಗಬಹುದಾ? ಹೇಗಿದೆ ವ್ಯವಸ್ಥೆ? ಸನ್ನಿವೇಶ? JP ವರದಿ

ಆರೋಪ : 2 | ಸೇಡಂನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೆಸರು ಪ್ರಸ್ತಾಪವಾಗಿದೆ. ನನ್ನ ಪ್ರಕರಣದಲ್ಲಿ ಸಿಕ್ಕ ಟೈಪ್ಡ್ ಕಾಪಿಯನ್ನೇ ಮುಂದಿಟ್ಟುಕೊಂಡು ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇವತ್ತು ಅದು ನಿಮಗೆ ಮರೆತು ಹೋಯಿತೆ ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ್ರು. ತಕ್ಷಣವೇ ಸಚಿವ ಶರಣಪ್ರಕಾಶ್​ ಪಾಟೀಲ್ ರಿಂದ ಸಿಎಂ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ರು

ಆರೋಪ :3 | ಬೆಂಗಳೂರಿನಲ್ಲಿ ಸಿಕ್ಕ ಹಣದ ಬಗ್ಗೆ ಡಿಕೆ ಶಿವಕುಮಾರ್ ಬೇರೆ  ಬೇರೆ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಏನು ಜಡ್ಜಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ಶಿವಕುಮಾರ್ ಆರೋಪದಿಂದ ಮುಕ್ತವಾಗಿ ಹೊರ ಬರುತ್ತಾರೆ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್ ಜಡ್ಜಾ? ಈ ಎಲ್ಲದರ ಬಗ್ಗೆ ಸಿದ್ದರಾಮಯ್ಯ ಏಕೆ ಮಾತನಾತನಾಡುತ್ತಿಲ್ಲ? ಸಂವಿಧಾನ, ಕಾನೂನು ಮೊದಲಾದವು ಬಗ್ಗೆ ಮಾತನಾಡುವ ಅವರು ಇದರ ಬಗ್ಗೆ ಮಾತನಾಡಬೇಕು

ಶಿವಮೊಗ್ಗದ ಟಿಪ್ಪುನಗರದ ರಾಜೀಕ್​​, ಭದ್ರಾವತಿ ಗ್ರೌಡಳ್ಳಿ ತೋಟದಲ್ಲಿ ಕೊಲೆಯಾಗೋದಕ್ಕೆ ಕಾರಣವೇನು? EXCLUSIVE

ಆರೋಪ : 4 |  ರಾಜ್ಯದಲ್ಲಿ ಆಡಳಿತ ಕುಸಿದಿದೆ, ಆರ್ಥಿಕವಾಗಿ ದಿವಾಳಿಯಾಗಿದೆ. ಶಿವಮೊಗ್ಗ ದಸರಾ ವೈಭವದಿಂದ ನಡೆಯುತ್ತಿದ್ಫರೂ ಕೇವಲ 20 ಲಕ್ಷ ರೂಪಾಯಿ ನೀಡುವ ಮೂಲಕ ಸರ್ಕಾರ ದಸರಾ ಮೆರವಣಿಗೆಯನ್ನು ನಿರ್ಲಕ್ಷಿಸಿದೆ

ಆರೋಪ : 5 | ನಾನು ಕಾಂಗ್ರೆಸ್‌ ಗೆ ಹೋಗುವುದಾಗಿ ಹೇಳುಲಾಗುತ್ತಿದೆ. ಸಚಿವ ಎಂ.ಬಿ.ಪಾಟೀಲ್ ಹೀಗೆ ಹೇಳಿದ್ದಾರೆ. ಹಾಗೊಂದು ವೇಳೆ ಹೋದರೆ ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಬಿಜೆಪಿ ಪಕ್ಷ ನನಗೆ ಹಿಂದುತ್ವ ಪ್ರತಿಪಾದನೆ ಮಾಡಲು ಬೆಳೆಸಿದೆ. ಅವರ ಮಾತು ಶುದ್ಧ ಸುಳ್ಳು ,  ಹಾಗಾಗಿ ಎಂ.ಬಿ.ಪಾಟೀಲ್ ತಮ್ಮ ಕ್ಷಮೆ ಕೇಳಬೇಕು

BREAKING NEWS | ಭದ್ರಾವತಿ ಗ್ರಾಮಾಂತರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ | ಓರ್ವನ ಕೊಲೆ!

ಆರೋಪ : 6 | ನನ್ನ ಮೌನ ನನ್ನ ದೌರ್ಬಲ್ಯ ಅಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇದು ಸರ್ಕಾರದ ಆಂತರಿಕ ವಿಷಯ. ಅವರು ಬಹಿರಂಗವಾಗಿ ಬಡಿದಾಡಿಕೊಳ್ಳುವುದು ಬೇಡ. ತಮ್ಮ ಶಕ್ತಿ ಬಹಿರಂಗವಾಗಿ ಪ್ರದರ್ಶಿಸುವುದು ಬೇಡ ಎಂದರು. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ