ಅಮೆರಿಕಾದಿಂದ ಬಂತು ಟಪಾಲ್’| ದಾಖಲಾಯ್ತು ಸಾಲು ಸಾಲು FIR | ಮೊಬೈಲ್​ಗಳಿಂದಲೇ ಆಗ್ತಾರೆ ಅರೆಸ್ಟ್! ಏನಿದು?

Details of FIRs registered through Cyber Tip Line at Shimoga CEN Police Station ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ಸೈಬರ್ ಟಿಪ್​ ಲೈನ್​ ಮೂಲಕ ದಾಖಲಾದ ಎಫ್​ಐಆರ್​ಗಳ ವಿವರ

ಅಮೆರಿಕಾದಿಂದ ಬಂತು ಟಪಾಲ್’| ದಾಖಲಾಯ್ತು ಸಾಲು ಸಾಲು FIR | ಮೊಬೈಲ್​ಗಳಿಂದಲೇ ಆಗ್ತಾರೆ ಅರೆಸ್ಟ್! ಏನಿದು?

KARNATAKA NEWS/ ONLINE / Malenadu today/ Nov 2, 2023 SHIVAMOGGA NEWS

SHIVAMOGGA |   ಅಪ್ರಾಪ್ತ ವಯಸ್ಸಿನವರ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅಂತಹವರ ಅಶ್ಲೀಲ ಚಿತ್ರವನ್ನು ಸಂಗ್ರಹಿಸುವುದು, ವರ್ಗಾಯಿಸುವುದು, ಹಂಚುವುದು ಅಪರಾಧ. ಮೇಲಾಗಿ ಈ ಕೃತ್ಯಗಳನ್ನ ಗಮನಿಸಲು ಅಮೆರಿಕಾದ ಸಂಸ್ಥೆಯೊಂದು ಆನ್​ಲೈನ್​ನ ಮೇಲೆ ಕಣ್ಣಿಟ್ಟಿರುತ್ತದೆ. ಅಮೆರಿಕಾದಿಂದ ಶಿವಮೊಗ್ಗದ ಸಿಇಎನ್​ ಠಾಣೆಗೆ ಇಂತಹದ್ದೊಂದು ಏರಿಯಾದ ಇಂತಹ ನಿವಾಸಿ ಅಂತಹ ಕೃತ್ಯವೆಸಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಡಿ ಸಾಕ್ಷ್ಯದ ಸಮೇತ ಅಮೆರಿಕಾದ ಸಂಸ್ಥೆ ಸೈಬರ್ ಟಿಪ್​ ಲೈನ್ ವಿವರಗಳನ್ನು ಕಳುಹಿಸಿಕೊಡುತ್ತದೆ. 

READ : BREAKING NEWS : ಶಿವಮೊಗ್ಗ ಪೊಲೀಸ್​ಗೆ ರಾಷ್ಟ್ರಮಟ್ಟದ ಗರಿ/ ಇನ್​ಸ್ಪೆಕ್ಟರ್​ ಗುರುರಾಜ್​ಗೆ ಸಿಕ್ಕಿತು India Cyber Cop Award

ಈ ಹಿಂದೇ ಇದೇ ರೀತಿಯಲ್ಲಿ ಸೈಬರ್ ಟಿಪ್​ ಲೈನ್​ನಿಂದ ಬಂದಿದ್ದ ಪ್ರಕರಣವನ್ನು ಭೇದಿಸಿದ ಇನ್​ಸ್ಪೆಕ್ಟರ್​ ಗುರುರಾಜ್​ಗೆ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿ ಲಭ್ಯವಾಗಿತ್ತು. ಇದೀಗ ಮತ್ತೆ ಅಂತಹ ನಾಲ್ಕು ಪ್ರಕರಣಗಳು ಶಿವಮೊಗ್ಗಕ್ಕೆ ರವಾನೆಯಾಗಿದ್ದು, ಟಿಪ್​ ಲೈನ್​ ಸಂಸ್ಥೆ ಎಸ್​ಪಿ ಕಚೇರಿಗೆ ಟಪಾಲ್​ ಕಳುಹಿಸಿದೆ. ಈ ಟಪಾಲ್ ಸಿಇಎನ್​ ಪೊಲೀಸ್ ಸ್ಟೇಷನ್​ಗೆ ರವಾನೆಯಾಗಿದ್ದು,ಎಫ್​ಐಆರ್​ಗಳು ದಾಖಲಾಗಿದೆ. 

READ : ಮಕ್ಕಳ ಅಶ್ಲೀಲ ಚಿತ್ರ ತೆಗೆದು ಶಿಕ್ಷಕನ ಆಟ/ ಅಮೆರಿಕಾದಿಂದ ಬಂದಿತ್ತು ಸುಳಿವು/ ಗುರುರಾಜ್​ ಭೇದಿಸಿದ ದೇಶದ ಟಾಪ್​ಮೋಸ್ಟ್​​ ಪ್ರಕರಣ ಯಾವುದು ಗೊತ್ತಾ?

ಶಿವಮೊಗ್ಗ ಸಿಟಿಯ ಪ್ರತಿಷ್ಟಿತ ಬಡಾವಣೆಯಲ್ಲಿರುವ ನಿವಾಸಿಗಳ ವಿರುದ್ಧ ಈ ಎಫ್​ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ   Section: INFORMATION TECHNOLOGY ACT 2000 (U/s-67(B)); PROTECTION OF CHILDREN FROM SEXUAL OFFENCES ACT 2012 (U/s-15) ಅಡಿಯಲ್ಲಿ ಕೇಸ್​ ದಾಖಲಾಗಿದೆ. ಪ್ರಕರಣ ಗಂಭೀರವಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ