ಎದೆಯ ಹತ್ತಿರ ಅನ್ನನಾಳದಲ್ಲಿ ಸಿಲುಕಿದ 3.5 ಸೆಂಟಿಮೀಟರ್‌ ಉದ್ದದ ಮಟನ್‌ ಮೂಳೆ | VIRAL STORY

Hyderabad, Nallagunda, Telangana, Viral Story, Kakkireni, Mutton Bone, doctors Remove 3.5-cm Long Mutton Bone Stuck Near Heart In Elderly Man

ಎದೆಯ ಹತ್ತಿರ ಅನ್ನನಾಳದಲ್ಲಿ ಸಿಲುಕಿದ 3.5 ಸೆಂಟಿಮೀಟರ್‌ ಉದ್ದದ  ಮಟನ್‌ ಮೂಳೆ | VIRAL STORY
Hyderabad, Nallagunda, Telangana, Viral Story, Kakkireni, Mutton Bone

SHIVAMOGGA | MALENADUTODAY NEWS | May 16, 2024  ಮಲೆನಾಡು ಟುಡೆ ವೈರಲ್‌ ಸ್ಟೋರಿ

ಬಿರಿಯಾನಿ ಪ್ರಿಯರು ಅಚ್ಚರಿ ಪಟ್ಟು ಓದುವಂತಹ ಸ್ಟೋರಿಯಿದು. ಹಿರಿಯ ವ್ಯಕ್ತಿಯೊಬ್ಬರ ಅನ್ನನಾಳದಲ್ಲಿ ಸಿಲುಕಿದ್ದ 3.5 ಸೆಂಟಿ ಮೀಟರ್‌ ಉದ್ದ ಮಟನ್‌ ಮೂಳೆಯೊಂದನ್ನ ಹೈದರಾಬಾದ್‌ನ ವೈದ್ಯರು ಯಶಸ್ವಿಯಾಗಿ ಹೊರಕ್ಕೆ ತೆಗೆದಿದ್ದಾರೆ. ಮತ್ತು ಈ ಸುದ್ದಿ ಇದೀಗ ವೈರಲ್‌ ಆಗುತ್ತಿದೆ. 

ಅನ್ನನಾಳದ ಅಲ್ಸರ್‌ಗೆ ಕಾರಣವಾಗಿದ್ದ ಮೂಳೆಯನ್ನು ರೋಗ ಪರೀಕ್ಷೆ ಮೂಲಕ ಪತ್ತೆ ಹಚ್ಚಿದ ವೈದ್ಯರು ಎಂಡೋಸ್ಕೋಪಿ ನಡೆಸಿ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಮೂಳೆಯನ್ನು ಹೊರಕ್ಕೆ ತೆಗೆದಿದ್ದಾರೆ. ಅನ್ನನಾಳದ ಒಂದು ಬದಿಗಂಟಿಕೊಂಡಿದ್ದ ಮೂಳೆ, ಹೃದಯಕ್ಕೂ ಸಮಸ್ಯೆ ತಂದಿಟ್ಟಿತ್ತು. ಅದೃಷ್ಟಕ್ಕೆ 66 ವರ್ಷದ ಹಿರಿಯರ ಜೀವ ಇದೀಗ ಉಳಿದಿದೆ. 

ನೆರೆಯ ರಾಜ್ಯ ತೆಲಂಗಾಣದ ನಲ್ಲಗುಂದ ಕಕ್ಕಿರೇನಿ ಗ್ರಾಮದ ನಿವಾಸಿ ಕೆಲದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು, ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಅವರು ಗ್ಯಾಸ್ಟಿಕ್‌ ಎಂದು ಮಾತ್ರೆ ಕೊಟ್ಟಿದ್ದರು. ಆ ಬಳಿಕ ವೃದ್ದರಿಗೆ ನೋವು ವಿಪರೀತವಾಗಿದೆ ಹೀಗಾಗಿ ಮನೆಯವರು ಹೈದ್ರಾಬಾದ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಅಲ್ಲಿ ಪರಿಶೀಲಿಸಿದಾಗ, ವೃದ್ಧರ ಅನ್ನನಾಳದಲ್ಲಿ ಮಟನ್‌ ಮೂಳೆ ಇರುವುದು ಗೊತ್ತಾಗಿದೆ. ಆ ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇನ್ನೂ ಹಿರಿಯರಿಗೆ ಹಲ್ಲುಗಳು ಇಲ್ಲದ ಹಿನ್ನೆಲೆಯಲ್ಲಿ ಮೂಳೆಯು ಸರಿಯಾಗಿ ಜಗಿಯಲಾಗದೇ ಅನ್ನನಾಳ ಸೇರಿಕೊಂಡಿರಬಹುದು ಎಂದು ಊಹಿಸಲಾಗಿದೆ.