ಕೆಎಸ್‌ ಈಶ್ವರಪ್ಪ ದೆಹಲಿಯಿಂದ ವಾಪಸ್!‌ ನಿನ್ನೆ ರಾತ್ರಿ ಅಲ್ಲಿ ನಡೆದಿದ್ದೇನು? ಅಮಿತ್‌ ಶಾ ನೋ ಎಂದಿದ್ದೇಕೆ?

KS Eshwarappa returns from Delhi What happened there last night? Why did Amit Shah say no?

ಕೆಎಸ್‌ ಈಶ್ವರಪ್ಪ ದೆಹಲಿಯಿಂದ ವಾಪಸ್!‌ ನಿನ್ನೆ ರಾತ್ರಿ ಅಲ್ಲಿ ನಡೆದಿದ್ದೇನು? ಅಮಿತ್‌ ಶಾ ನೋ ಎಂದಿದ್ದೇಕೆ?
KS Eshwarappa , Delhi , Amit Shah

Shivamogga  Apr 4, 2024  ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿರುವ ಕೆಎಸ್‌ ಈಶ್ವರಪ್ಪರ ದೆಹಲಿ ಪ್ರವಾಸ ವಿಮಾನಯಾನಕ್ಕಷ್ಟೆ ಸೀಮಿತವಾಗಿದೆ. ಶಿವಮೊಗ್ಗದಿಂದ ದೆಹಲಿಗೆ ಹೋದ ಅವರು ಅಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ರನ್ನ ಮಾತನಾಡಿಸದೇ ವಾಪಸ್‌ ಆಗಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ದೆಹಲಿಯಲ್ಲಿ ಮತ್ತೊಂದು ಟ್ವಿಸ್ಟ್‌ ಸಿಕ್ಕಿದ್ದು, ಅಲ್ಲಿಗೆ ಹೋಗಿದ್ದ ಕೆಎಸ್‌ ಈಶ್ವರಪ್ಪನವರಿಗೆ ಅಮಿತ್‌ ಶಾರ ಕಚೇರಿಯಿಂದ ಮಾತುಕತೆ ಕ್ಯಾನ್ಸಲ್‌ ಆಗಿದೆ ಎಂಬ ಸಂದೇಶ ರವಾನೆಯಾಗಿದ್ದು, ಈ ಮೆಸೇಜ್‌ ತೀವ್ರ ಕುತೂಹಲ ಮೂಡಿಸ್ತಿದೆ. 

ಏನಾಯ್ತು.. 

ರಾಜ್ಯಕ್ಕೆ ಬಂದಿದ್ದ ಅಮಿತ್‌ ಶಾ ಕೆಎಸ್‌ ಈ‍ಶ್ವರಪ್ಪರವರಿಗೆ ಕರೆ ಮಾಡಿದ್ದರು. ಪ್ರಚಾರ ನಡೆಸ್ತಿರುವಾಗಲೇ ಕರೆ ಮಾಡಿದ್ದ ಅಮಿತ್‌ ಶಾ ತಮ್ಮ ನಿರ್ಧಾರವನ್ನು ವಾಪಸ್‌ ಪಡೆಯಬೇಕು ಎಂದು ಈಶ್ವರಪ್ಪನವರಿಗೆ ಮನವಿ ಮಾಡಿದ್ದರು. ಈ ವಿಚಾರವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಕೆಎಸ್‌ ಈಶ್ವರಪ್ಪ ರಾಜ್ಯಾಧ್ಯಕ್ಷರನ್ನ ಬದಲಾವಣೆ ಮಾಡಿದರೇ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದರು. ಈಶ್ವರಪ್ಪನವರು ತಮ್ಮ ಕಂಡೀಷನ್‌  ಹೇಳಿಕೊಂಡ  ನಂತರ ನಿನ್ನೆ ದೆಹಲಿಗೆ ತೆರಳಿದ್ದರು. ಆದರೆ ಅಲ್ಲಿ ಯಾವುದೇ ಸಭೆಯಿಲ್ಲದೆ ವಾಪಸ್‌ ಅಗಿದ್ದಾರೆ. 

ಇನ್ನೂ ಅಮಿತ್‌ ಶಾರವರೇ ದೆಹಲಿಗೆ ಕರೆದು ಈಶ್ವರಪ್ಪನವರನ್ನ ಏಕೆ ಮಾತನಾಡಿಸಲಿಲ್ಲ ಎಂಬುದು ಕುತೂಹಲ ಮೂಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮಗಳು ತಮ್ಮದೇ ವಿವರಣೆಯನ್ನು ನೀಡುತ್ತಿದ್ದು, ಮೂಲಗಳ ಪ್ರಕಾರ, ಅಮಿತ್‌ ಶಾರ ಕರೆ ವಿಚಾರವನ್ನು ಕೆಎಸ್‌ ಈಶ್ವರಪ್ಪನವರು ಬಹಿರಂಗವಾಗಿ ಹೇಳಿಕೊಂಡಿದ್ದರಿಂದ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಕಂಡೀಷನ್‌ ವಿಚಾರದ ಕಾರಣಕ್ಕಾಗಿ ಅಮಿತ್‌ ಶಾ ಈಶ್ವರಪ್ಪರ ಜೊತೆ ಮಾತುಕತೆ ನಡೆಸಲಿಲ್ಲ ಎನ್ನಲಾಗುತ್ತಿದೆ. 

ಇನ್ನೂ ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಕೆಎಸ್‌ ಈ‍ಶ್ವರಪ್ಪ ದೆಹಲಿಗೆ ಬಂದು ಮಾತನಾಡಿ ಎಂದಿದ್ದರು. ಅದರಂತೆ ಬಂದಿದ್ದೇನೆ. ಆದರೆ ಮಾತುಕತೆ ಕ್ಯಾನ್ಸಲ್‌ ಆಗಿದೆ. ಪರೋಕ್ಷವಾಗಿ ಅವರಿಗೆ ನಾನು ಚುನಾವಣೆ ನಿಲ್ಲುವುದು ಅವರಿಗೆ ಸರಿ ಎನಿಸಿರಬಹುದು ಎಂದಿದ್ಧಾರೆ.