ಕೆ.ಎಸ್​.ಈಶ್ವರಪ್ಪರನ್ನ ಪೊಲೀಸರು ವಶಕ್ಕೆ ತಗೊಂಡ್ರಾ? ಎಸ್​ಪಿ ಕಚೇರಿ ಮೆಟ್ಟಿಲಲ್ಲಿ ಶಾಸಕರ ಧಿಕ್ಕಾರ ಕೂಗಿದ್ದೇಕೆ? ನಡೆದಿದ್ದೇನು? ಫೋಟೋ ಸ್ಟೋರಿ

Did KS Eshwarappa be taken into custody by the police? Why did the MLAs shout slogans on the steps of the SP office? What happened? Photo Story

SHIVAMOGGA  |  Jan 4, 2024  |  ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಸಿದರು. 

ಬಸ್​ ನಿಲ್ದಾಣದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ಬಂದ ಸಂದರ್ಭದಲ್ಲಿ ಕೆ.ಎಸ್​.ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರನ್ನ  ಎಸ್​ಪಿ ಕಚೇರಿ ಒಳಗೆ ಬರದಂತೆ ಪೊಲೀಸರು ತಡೆದಿರುವುದು

ಬಸ್​ ನಿಲ್ದಾಣದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ಬಂದ ಸಂದರ್ಭದಲ್ಲಿ ಕೆ.ಎಸ್​.ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರನ್ನ  ಎಸ್​ಪಿ ಕಚೇರಿ ಒಳಗೆ ಬರದಂತೆ ಪೊಲೀಸರು ತಡೆದಿರುವುದು

ಈ ವೇಳೆ  ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ  ನಾವು ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು  ಆಗ್ರಹಿಸಿದ್ರು. 

ಪೊಲೀಸರ ತಡೆಯ ನಡುವೆ ಶಿವಮೊಗ್ಗ ಎಸ್​ಪಿ ಕಚೇರಿ ಒಳಕ್ಕೆ ನುಗ್ಗಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಪೊಲೀಸರ ತಡೆಯ ನಡುವೆ ಶಿವಮೊಗ್ಗ ಎಸ್​ಪಿ ಕಚೇರಿ ಒಳಕ್ಕೆ ನುಗ್ಗಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು

ಶಿವಮೊಗ್ಗ ಬಸ್‌ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿ ನಂತರ ಕರಸೇವಕರನ್ನು ಬಂಧಿಸಿದಂತೆ ನಮ್ಮನ್ನು ಬಂಧಿಸಿ ಎಂಬ ಘೋಷಣೆ ಕೂಗುತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ನುಗ್ಗಿದ್ದರು. ಪೊಲೀಸರ ತಡೆಯ ನಡುವೆಯೂ ಅವರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು

ಎಸ್​ಪಿ ಕಚೇರಿಯ ಆವರಣಕ್ಕೆ ಬಂದು ಕಚೇರಿಯ ಮೆಟ್ಟಿಲ ಮೇಲೆ ಪ್ರತಿಭಟನೆ ಕುಳಿತ ಮಾಜಿ ಮಂತ್ರಿ ಕೆಎಸ್​ ಈಶ್ವರಪ್ಪ

ಎಸ್​ಪಿ ಕಚೇರಿಯ ಆವರಣಕ್ಕೆ ಬಂದು ಕಚೇರಿಯ ಮೆಟ್ಟಿಲ ಮೇಲೆ ಪ್ರತಿಭಟನೆ ಕುಳಿತ ಮಾಜಿ ಮಂತ್ರಿ ಕೆಎಸ್​ ಈಶ್ವರಪ್ಪ

READ :ಆಟೋ ಪರ್ಮಿಟ್​, ನೈಟ್ ONE AND HALF ರೇಟ್​, ರೈಲ್ವೆ ಸ್ಟೇಷನ್​ನಲ್ಲಿ ರಿಕ್ಷಾ ರಶ್​! ಮಹತ್ವದ ಸೂಚನೆ ನೀಡಿದ DC ಡಾ.ಆರ್.ಸೆಲ್ವಮಣಿ

ಇನ್ನೂ  ಕರಸೇವಕ ಶ್ರೀಕಾಂತ್ ಪೂಜಾರಿ ಒಳ್ಳೆಯ ನಡೆತೆಯ ಮೇಲೆ ಅವರ ಮೇಲಿದ್ದ ಕೇಸನ್ನು ವಾಪಾಸ್ಸು ತೆಗೆಯಲಾಗಿದೆ. ಕಾಂಗ್ರೆಸ್ ಸರ್ಕಾರವೇ ಶ್ರೀಕಾಂತ್ ಮೇಲಿದ್ದ ರೌಡಿಶೀಟ್‌ನ್ನು ತೆಗೆದಿದ್ದು, ಈಗ ಕರಸೇವಕ ಎಂದು ಬಂಧಿಸಲಾಗಿದೆ. 

ಕೆ.ಎಸ್​.ಈಶ್ವರಪ್ಪರವರನ್ನ ವಶಕ್ಕೆ ಪಡೆದು ಕರೆದೊಯ್ದ ಡಿವೈಎಸ್​ಪಿ ಬಾಲರಾಜ್​

 ಕೆ.ಎಸ್​.ಈಶ್ವರಪ್ಪರವರನ್ನ ವಶಕ್ಕೆ ಪಡೆದು ಕರೆದೊಯ್ದ ಡಿವೈಎಸ್​ಪಿ ಬಾಲರಾಜ್​ 

ಇದು ಹಿಂದುತ್ವ ವಿರೋಧಿ ನೀತಿಯಾಗಿದೆ. ಹಿಂದೂ ಧರ್ಮವನ್ನು ಹೊಡೆಯಲು ಯಾವ ಕಾರಣಕ್ಕೂ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಆಕ್ರೋಶವನ್ನು ಹೊರಹಾಕಿದ್ರು.. 

ಕೆ.ಎಸ್​.ಈಶ್ವರಪ್ಪರವರನ್ನ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಎಸ್​ಪಿ ಕಚೇರಿ ಮೆಟ್ಟಿಲ ಮೇಲೆ ಕುಳಿತು ಶಾಸಕ ಚನ್ನಬಸಪ್ಪ ಹಾಗೂ ಹಿರಿಯ ಬಿಜೆಪಿ ಮುಖಂಡ ಭಾನುಪ್ರಕಾಶ್​ ಪ್ರತಿಭಟನೆ ಪೊಲೀಸರೊಂದಿಗೆ ವಾಗ್ವಾದ

ಕೆ.ಎಸ್​.ಈಶ್ವರಪ್ಪರವರನ್ನ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಎಸ್​ಪಿ ಕಚೇರಿ ಮೆಟ್ಟಿಲ ಮೇಲೆ ಕುಳಿತು ಶಾಸಕ ಚನ್ನಬಸಪ್ಪ ಹಾಗೂ ಹಿರಿಯ ಬಿಜೆಪಿ ಮುಖಂಡ ಭಾನುಪ್ರಕಾಶ್​ ಪ್ರತಿಭಟನೆ ಪೊಲೀಸರೊಂದಿಗೆ ವಾಗ್ವಾದ 

ಕೆ.ಎಸ್​.ಈಶ್ವರಪ್ಪ ಸೇರಿದಂತೆ ಎಂ.ಬಿ.ಭಾನುಪ್ರಕಾಶ್, ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವರಾಜ್, ಗಿರೀಶ್ ಪಟೇಲ್, ಹರಿಕೃಷ್ಣ, ಜಗದೀಶ್, ಎಸ್.ದತ್ತಾತ್ರಿ, ದೀನದಯಾಳ್‌, ಕೆ.ವಿ.ಅಣ್ಣಪ್ಪ, ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕ ಚನ್ನಬಸಪ್ಪರವರು ಸಹ ಪೊಲೀಸ್ ವಶಕ್ಕೆ

 ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕ ಚನ್ನಬಸಪ್ಪರವರು ಸಹ ಪೊಲೀಸ್ ವಶಕ್ಕೆ 

ಇನ್ನೂ ಪ್ರತಿಭಟನಾಕಾರರನ್ನು ತಡೆಯಲು ಹಲವು ಸಲ ಪೊಲೀಸರು ಮುಂದಾದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದಗಳು ಸಹ ನಡೆದವು. ಅಲ್ಲದೆ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದ ಬೆನ್ನಲ್ಲೆ, ಬಿಜೆಪಿ ಕಾರ್ಯಕರ್ತರು ಮಾಜಿ ಮಂತ್ರಿ ಕೆ.ಎಸ್​ . ಈಶ್ವರಪ್ಪರವರನ್ನ ವಶಕ್ಕೆ ಪಡೆದಿದ್ದನ್ನ ಬಂಧನ ಎಂದು ಖಂಡಿಸಿ ಧಿಕ್ಕಾರ ಕೂಗಿದರು. 

ಪೊಲೀಸ್ ವ್ಯಾನ್​ನಲ್ಲಿಯು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು

 ಪೊಲೀಸ್ ವ್ಯಾನ್​ನಲ್ಲಿಯು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು