ಅರ್ಚಕರ ಸಂಬಳ ವಾಪಸ್! ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ

Priests' salaries refunded! KS Eshwarappa attacks Siddaramaiah government /Hiremagalur Kannan/shimoganewslive

ಅರ್ಚಕರ ಸಂಬಳ ವಾಪಸ್!  ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ
Priests' salaries refunded! KS Eshwarappa attacks Siddaramaiah government /Hiremagalur Kannan/shimoganewslive

SHIVAMOGGA  |  Jan 23, 2024  |   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಂ ಎಂದು ಘೋಷಣೆ ಕೂಗಿರುವುದು ನನಗೆ ಅತೀವ ಸಂತೋಷವಾಗಿದೆ  ಅಂತಾ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ರವರು  ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅವರು ರಾಮನ ಭಕ್ತರು ಎಂದು ನಾನು ಮೊದಲೇ ಹೇಳಿದ್ದೆ ರುಜುವಾತಾಗಿದೆ ಎಂದುರು.  

ಶ್ರೀರಾಮ ಎಲ್ಲರಿಗೂ ಒಂದೇ ಕಾಂಗ್ರೆಸ್ ರಾಮ ಬಿಜೆಪಿರಾಮ ಎಂದಿಲ್ಲ.ರಾಜಕಾರಣಕ್ಕಾಗಿ ಕಾಂಗ್ರೆಸ್​ ವಿಭಿನ್ನ ನಿಲುವು ತೋರುತ್ತಿದೆ. ಮಹಾತ್ಮ ಗಾಂಧಿಯವರ ಸಮಾಧಿ ಮೇಲೆ ಹೇ ರಾಮ್ ಎಂದು ಬರೆದಿದೆ. ಸಿದ್ದರಾಮಯ್ಯರ ನಡೆ ಇಷ್ಟವಾಯ್ತು ಈಗಲಾದರೂ ಕಾಂಗ್ರೆಸ್‌ಗೆ ಬುದ್ದಿ ಬಂದಿತಲ್ಲ ಎಂಬುದು ಸಮಾಧಾನವಾಗಿದೆ. ಕಾಂಗ್ರೆಸ್ ಬದಲಾದರೆ ಉಳಿಯುತ್ತದೆ ಇಲ್ಲವಾದರೆ ವಿಳಾಸ ಇಲ್ಲದಂತೆ ಹೋಗುತ್ತದೆ ಎಂದರು

ಇದೇ ವೇಳೆ  ಆದಾಯ ನೋಡಿ ಅರ್ಚಕರ ವೇತನ ನಿಗದಿ ಮಾಡುವ ಸರಕಾರದ ನೀತಿ ಸರಿಯಲ್ಲ. ಅನೇಕ ದೇವಸ್ಥಾನಗಳಲ್ಲಿ ಅತೀ ಹೆಚ್ಚು ಆದಾಯ ಬರುತ್ತಿದ್ದು ಅಲ್ಲಿನ ಅರ್ಚಕರಿಗೆ ಅತೀ ಹೆಚ್ಚು ವೇತನ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಮಾಜಿ ಸಚಿವರು,  ಕನ್ನಡ ಖ್ಯಾತ ಧಾರ್ಮಿಕ ಚಿಂತಕ ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ನೀಡಿರುವ ಸರಕಾರ, ಅವರಿಗೆ ವೇತನದ ಹಣ ವಾಪಸ್ ಕಟ್ಟಲು ತಿಳಿಸಲಾಗಿದೆ. ಸರಕಾರ ಈ ವಿಚಾರದಲ್ಲಿ ಕ್ಷಮೆ ಕೇಳಬೇಕು. ಆರ್ಚಕ ಸಮೂಹಕ್ಕೆ ಮಾಡಿದ ಅವಮಾನಕ್ಕಾಗಿ ಮುಜರಾಯಿ ಸಚಿವರು ರಾಜೀನಾಮೆ ನೀಡಬೇಕೆಂದು ಈಶ್ವರಪ್ಪ ಆಗ್ರಹಿಸಿದ್ದಾರೆ.