ಶಿವಮೊಗ್ಗ ಗ್ಯಾಂಗ್ ವಾರ್ ಕೇಸ್ | 302, 307 ಕೇಸ್‌ನಲ್ಲಿ ಮತ್ತೊಂದು ಅಪ್‌ಡೇಟ್ಸ್ |
Shimoga Gang War Case | Another update on 302, 307 case Lashkar Mohalla Case, Adil Pasha, Yasin Qureshi, Sheebu, Ghaus, KRpuram,Shimoga Gang War Case

SHIVAMOGGA | MALENADUTODAY NEWS | May 11, 2024
ಶಿವಮೊಗ್ಗ ಗ್ಯಾಂಗ್ ವಾರ್ ಪ್ರಕರಣ ಸಂಬಂಧ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಲಷ್ಕರ್ ಮೊಹಲ್ಲಾದಲ್ಲಿ ನಡೆದ ಘಟನೆ ಸಂಬಂಧ 302 ಕೇಸ್ ದಾಖಲಾಗಿದ್ದು ಈ ಸೆಕ್ಷನ್ ಅಡಿಯಲ್ಲಿ 10 ಜನರ ವಿರುದ್ಧ ಹಾಗೂ 307 ಸೆಕ್ಷನ್ ಅಡಿಯಲ್ಲಿ 8 ಜನರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇದೀಗ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ವಾಟ್ಸಾಪ್ ಸಂದೇಶದ ಮೂಲಕ ಆರೋಪಿಗಳ ಹೆಸರನ್ನ ಬಿಡುಗಡೆ ಮಾಡಿದ್ದಾರೆ.
ಶಿವಮೊಗ್ಗ ಗ್ಯಾಂಗ್ ವಾರ್ ಕೇಸ್ | 18 ಮಂದಿ ಅರೆಸ್ಟ್ | 10 ಜನರ ವಿರುದ್ಧ 302 | 8 ಆರೋಪಿ ವಿರುದ್ಧ 307 ಕೇಸ್
ಕಳೆದ ಬುಧವಾರ ಸಂಜೆ ನಡೆದ ಗ್ಯಾಂಗ್ ವಾರ್ ನಲ್ಲಿ ನಡೆದ ಮೂವರ ಕೊಲೆಗೆ ಸಂಬಂಧಿಸಿದಂತೆ ಒಟ್ಟು 16 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್ ವಾರ್ ನಲ್ಲಿ ಭಾಗಿಯಾದ 19 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಪೈಕಿ ಯಾಸೀನ್ ಖುರೇಶಿ, ಖಲಂದರ್ ಅಲಿಯಾಸ್ ಶೇಬು ಹಾಗೂ ಗೌಸ್ ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ.
ಆದಿಲ್ ಪಾಶಾನ ಗ್ಯಾಂಗ್‌ನಲ್ಲಿದ್ದ ಆರೋಪಿಗಳಾದ ಸಾಕಿಬ್, ಸಗೀರ್, ಸಮೀರ್, ಇಬ್ರಾಹಿಂ ಅಲಿ, ಇಮ್ರಾನ್ ಅಲಿಯಾಸ್ ನಿಮ್ಮು, ಪರ್ವೇಜ್, ಪ್ರತಾಪ್ ಅಲಿಯಾಸ್ ಅಣ್ಣಾನನ್ನ ಬಂಧಿಸಲಾಗಿದೆ.
ಇನ್ನೂ ಕೊಲೆಯಾದ ಯಾಸಿನ್ ಖುರೇಶಿ ತಂಡದಲ್ಲಿರುವ ಮೊಹಮ್ಮದ್ ರಿಜ್ವಾನ್, ಆರ್ಯನ್ ಖಾನ್, ಶಹಬಾಜ್ ಖಾನ್, ಅಜರ್, ಯಾಸಿನ್ ಭಟ್, ಸುಹೇಬ್ ಡಂಗರ್, ಸೋಹಿಲ್ ಕೊಂಗಾಟಿ ಹಾಗೂ ರಿಜ್ವಾನ್ ಪಾಶಾ ಬಂಧಿಸಲಾಗಿದೆ. ಬಂಧಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
Lashkar Mohalla Case, Adil Pasha, Yasin Qureshi, Sheebu, Ghaus, KRpuram,Shimoga Gang War Case