ಗೋಣಿ ಚೀಲದಲ್ಲಿ ಬಾಲಕಿ ಶವಪತ್ತೆ ಕೇಸ್‌ | 24 ಗಂಟೆಯಲ್ಲಿ ಆರೋಪಿ ಅರೆಸ್ಟ್‌ | ಚಿಕ್ಕಪ್ಪನ ಮಗಳನ್ನ ಕೊಂದಿದ್ದೇಕೆ?

Case of girl's dead body in gunny bag Accused arrested in 24 hours | Shikaripura Rural Police Station Case

ಗೋಣಿ ಚೀಲದಲ್ಲಿ ಬಾಲಕಿ ಶವಪತ್ತೆ ಕೇಸ್‌ | 24 ಗಂಟೆಯಲ್ಲಿ ಆರೋಪಿ ಅರೆಸ್ಟ್‌  | ಚಿಕ್ಕಪ್ಪನ ಮಗಳನ್ನ ಕೊಂದಿದ್ದೇಕೆ?
Shikaripura Rural Police Station Case

SHIVAMOGGA | MALENADUTODAY NEWS | Apr 23, 2024   

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಕೊಪ್ಪದ ಕೆರೆ ಬಳಿಯ ಕೆರೆಯಲ್ಲಿ  ಗೋಣಿಚೀಲದಲ್ಲಿ ಬಾಲಕಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಘಟನೆ ಬೆನ್ನಲ್ಲೆ ಪ್ರಕರಣ ದಾಖಲಿಸಿದ ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಪೊಲೀಸರು ಆರೋಪಿಯನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. 

ಪ್ರಕರಣದಲ್ಲಿ ಬಾಲಕಿಯ ಪಾಲಕರು ಕೆಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದರು. ಅದರಂತೆ ಪೊಲೀಸರು ಅವರು ಶಂಕಿಸಿದ ವ್ಯಕ್ತಿಯನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಾರಿಗೆಯಲ್ಲಿ ಬಾಲಕಿ ಆರೋಪಿಯ ತಂಗಿಯಾಗಬೇಕು, ಸ್ವಂತ ಚಿಕ್ಕಪ್ಪನ ಮಗಳನ್ನ ಆರೋಪಿ ಕೊಲೆ ಮಾಡಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆರೋಪಿಯು ಈ ಕೃತ್ಯವೆಸಗಿದ್ದ ಎನ್ನಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.