ಶಿಕಾರಿಪುರ ‘ಗೋಣಿ ಮೂರ್ತಪ್ಪ’ ಕೊಲೆ ಕೇಸ್! ನಾಲ್ವರಿಗೆ ಜೀವಾವಧಿ! ಏನಿದು ಪ್ರಕರಣ!?|

Shimoga court sentences four persons to life imprisonment in Shikaripura town murder case Shivamogga Court Complex, Shivamogga Court and Litigation, Shivamogga Court News, 2nd Additional District and Sessions Court, Shivamogga

ಶಿಕಾರಿಪುರ ‘ಗೋಣಿ ಮೂರ್ತಪ್ಪ’ ಕೊಲೆ ಕೇಸ್! ನಾಲ್ವರಿಗೆ ಜೀವಾವಧಿ! ಏನಿದು ಪ್ರಕರಣ!?|

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga| shikaripura|  Malnenadutoday.com |  ಸರಿಸುಮಾರು ಆರು ವರ್ಷಗಳ ಹಿಂದೆ ಶಿಕಾರಿಪುರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ  ಶಿವಮೊಗ್ಗ ಕೋರ್ಟ್  ಶಿಕ್ಷೆ ನೀಡಿದೆ. ಶಿಕಾರಿಪುರದ ರಾಜಕೀಯ ಮುಖಂಡರಾದ ಗೋಣಿ ಮಾಲ್ತೇಶ್​ರವರ ಸಂಬಂಧಿಯೊಬ್ಬರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ   

ಏನಿದು ಪ್ರಕರಣ? 

ದಿನಾಂಕಃ 21-04-2017 ರಂದು ಈ ಘಟನೆ ನಡೆದಿತ್ತು.  ಶಿಕಾರಿಪುರ ಟೌನ್ ಚೌಡೇರಕೇರಿಯ ವಾಸಿಗಳಾದ ಗೋಣಿ ಮೂರ್ತಪ್ಪ ಮತ್ತು ಪಕ್ಕದ ಮನೆಯರಾದ ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ರವರುಗಳಿಗೆ ಹುಣಸೇ ಮರದ ಕಸದ ವಿಚಾರವಾಗಿ ಜಗಳ ಶುರುವಾಗಿತ್ತು. 

ಮೊದಲ ದಿನವೇ 400 ಮಂದಿ ಪ್ರಯಾಣ! ಏರ್​ಪೋರ್ಟ್​ನಲ್ಲಿ ಸಂಸದರು ನೀಡಿದರು ಮತ್ತೊಂದು ಗುಡ್ ನ್ಯೂಸ್!

ಈ ಹಿನ್ನೆಲೆಯಲ್ಲಿ  ಅವಿನಾಶ್, ಪ್ರಶಾಂತ್, ಗುತ್ಯಪ್ಪ ಮತ್ತು ಪ್ರದೀಪ್ ರವರುಗಳು ಸೇರಿಕೊಂಡು ಗೋಣಿ ಮೂರ್ತಪ್ಪ ರವರನ್ನು ಕಂದ್ಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಸಂಬಂಧ ಮೃತನ  ಹೆಂಡತಿ  ದೂರು ನೀಡಿದ್ದರು. ಶಿಕಾರಿಪುರ ಟೌನ್ ಪೊಲೀಸ್ ಠಾಣೆ  (shikaripura police station) ನಲ್ಲಿ ಐಪಿಸಿ 143, 147, 148, 504, 323, 447, 506(2), 302, 307 ಸಹಿತ 149  ಕೇಸ್​ ದಾಖಲಾಗಿತ್ತು. 

 

ಕೇಸ್​ ಸಂಬಂಧ ಅಂದಿನ ತನಿಖಾಧಿಕಾರಿಗಳಾದ ಹರೀಶ್ ಕೆ ಪಟೇಲ್, ಸಿಪಿಐ, ಶಿಕಾರಿಪುರ ವೃತ್ತ ರವರು ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದ  ಶಿವಮೊಗ್ಗದ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ದಲ್ಲಿ ನಡೆದಿತ್ತು. ಇದೀಗ ವಿಚಾರಣೆ ಮುಗಿದಿದ್ದು ಆರೋಪಿಗಳಿಗೆ ನ್ಯಾಯಾದೀಶರಾದ  ಬಿ.ಆರ್ ಪಲ್ಲವಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  

ಮೆಸ್ಕಾಂ ಪ್ರಕಟಣೆ! ಶಿವಮೊಗ್ಗ ನಗರದ 25 ಕ್ಕೂ ಹೆಚ್ಚು ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

1)ಅವಿನಾಶ್ @ ಅವಿ, 25 ವರ್ಷ,  ಚೌರಡೇರಕೇರಿ, ಶಿಕಾರಿಪು ಟೌನ್, 2) ಪ್ರಶಾಂತ @ ಗುಂಡ, 26 ವರ್ಷ, ಕುಂಬಾರಗುಂಡಿ ಶಿಕಾರಿಪುರ ಟೌನ್, 3) ಪ್ರದೀಪ್ ಆರ್, 28 ವರ್ಷ, ಚನ್ನಕೇಶವ ನಗರ, ಶಿಕಾರಿಪುರ ಟೌನ್ ರವರಿಗೆ ಜೀವಾವದಿ ಶಿಕ್ಷೆ ಮತ್ತು ತಲಾ ರೂ 90,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ 

ಶಿವಮೊಗ್ಗ , ಸಾಗರ ಮಾರುಕಟ್ಟೆಯಲ್ಲಿ ಇವತ್ತಿನ (21-11-2023) ಅಡಿಕೆ ದರ ಎಷ್ಟಿದೆ?

 4) ಗುತ್ಯಪ್ಪ @ ಗೌತಮ್, 28 ವರ್ಷ, ಶಿಕಾರಿಪುರ ಟೌನ್ ಈತನಿಗೆ ಜೀವಾವದಿ ಶಿಕ್ಷೆ ಮತ್ತು ರೂ 80,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ 

5) ಅಕ್ಷಯ್, 24 ವರ್ಷ, ಮಾಯಪ್ಪನಕೇರಿ ಶಿಕಾರಿಪುರ ಟೌನ್ ಈತನ ವಿರುದ್ಧ ಕಲಂ 201 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 3 ವರ್ಷ ಕಾರಾವಾಸ ಶಿಕ್ಷೆ ಮತ್ತು  ರೂ 10,000/-  ದಂಡ, ದಂಡ ಕಟ್ಟಲು ವಿಫಲನಾದಲ್ಲಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ 

.