ಐಸ್ ಕ್ಯಾಂಡಿಯಷ್ಟು ಉದ್ದದ ಮೀನು ನುಂಗಿದ ಮಗು! ಆನಂತರ ಸರ್ಜಿ ಆಸ್ಪತ್ರೆಯಲ್ಲಿ ಏನಾಯ್ತು ಗೊತ್ತಾ?

child who swallowed a fish as long as an ice candy! Do you know what happened at Sarji Hospital after that? ,child eat fish ,nyamati, davanagere

ಐಸ್ ಕ್ಯಾಂಡಿಯಷ್ಟು ಉದ್ದದ ಮೀನು ನುಂಗಿದ ಮಗು! ಆನಂತರ ಸರ್ಜಿ ಆಸ್ಪತ್ರೆಯಲ್ಲಿ  ಏನಾಯ್ತು ಗೊತ್ತಾ?
child who swallowed a fish as long as an ice candy! Do you know what happened at Sarji Hospital after that? ,child eat fish ,nyamati, davanagere

Shivamogga | Feb 7, 2024 |11  ತಿಂಗಳ ಮಗುವಿನ ಗಂಟಲಲ್ಲಿ ಸಿಲುಕಿಕೊಂಡಿದ್ದ ಮೀನೊಂದನ್ನ ತೆಗೆದು ಪುಟಾಣಿಯ ಜೀವ ಉಳಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ  ಸರ್ಜಿ ಆಸ್ಪತ್ರೆಯ ವೈದ್ಯರು ಇಂತಹದ್ದೊಂದು ವಿಶೇಷ ಆಪರೇಷನ್​ನಲ್ಲಿ ಪಾಲ್ಗೊಂಡು ಪುಟಾಣಿಯೊಂದರ ಜೀವ ಉಳಿಸಿದ್ದಾರೆ.   

ದಾವಣಗೆರೆ ಜಿಲ್ಲೆ  ಹೊನ್ನಾಳಿ ತಾಲ್ಲೂಕು ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಮತ್ತು ರೋಜಾ ದಂಪತಿಯ  11 ತಿಂಗಳ ಮಗು ಪ್ರತೀಕ್‌ ಮನೆಯೊಳಗೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಮಿನೊಂದನ್ನ ತಿನಿಸು ಎಂದು ಮಗು ಬಾಯಿಗೆ ಹಾಕಿಕೊಂಡಿದೆ. ಮಗುವಿನ ಬಾಯಿ ಸೇರಿದ ಮೀನು, ಪುಟಾಣಿಯ ಗಂಟಲಿನಲ್ಲಿ ಇಳಿಯದೆ ಅಲ್ಲಿ ಸಿಲುಕಿ ಹಾಕಿಕೊಂಡಿತ್ತು.

ತಕ್ಷಣ ಮನೆಯವರು ಮಗುವಿನ ಅವಸ್ಥೆಯನ್ನು ಅರಿತು, ಮೀನನ್ನ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಆಗಲಿಲ್ಲ. ಹೀಗಾಗಿ ಅಕ್ಕಪಕ್ಕದವರನ್ನ ಕರೆದಿದ್ದಾರೆ. ಅವರಿಂದಲೂ ಏನೂ ಆಗಲಿಲ್ಲ. ಅಷ್ಟೊತ್ತಿಗೆ ಮಗು ಸ್ಥಿತಿ ಗಂಭೀರವಾಗ ತೊಡಗಿತ್ತು.ಆತಂಕಕ್ಕೆ ಒಳಗಾದ ಪೋಷಕರು ಗೊತ್ತಿರುವ ವೈದ್ಯರಿಗೆ ಕರೆ ಮಾಡಿದ್ದಾರೆ. ಸರ್ಜಿ ಆಸ್ಪತ್ರೆಯ ವೈದ್ಯರಿಗೂ ಕರೆ ಬಂದಿದೆ. ತಕ್ಷಣ ವೈದ್ಯರು ಆಸ್ಪತ್ರೆ ಕರೆತರುವಂತೆ ಸೂಚಿಸಿದ್ದಾರೆ. 

ಇನ್ನೊಂದೆಡೆ ಮಗು ಜೊಲ್ಲು ಜಾಸ್ತಿ ಸುರಿಸುತ್ತದೆ ಎಂಬ ಕಾರಣಕ್ಕೆ ಜಿಲೇಬಿ ರೀತಿಯ ಮೀನನ್ನ ಬಾಯಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮೀನು ಇಟ್ಟರೆ ಮಗು ಜೊಲ್ಲು ಸುರಿಯುವುದನ್ನ ನಿಲ್ಲಿಸುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಎರಡು ವಾದಗಳಲ್ಲಿ ಯಾವುದು ಸರಿಯೋ ಏನೋ ಆದರೆ ಮಗುವಿನ ಗಂಟಲಿನಲ್ಲಿ ಮೀನು ಸಿಲುಕಿಕೊಂಡಿದೆ. ಅದರ ಬೆನ್ನಲ್ಲೆ ಮಗು ಸ್ಥಿತಿ ಗಂಭೀರವಾಗಿದೆ 

ತಡಮಾಡದ ಪೋಷಕರು ಸೀದಾ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನ ಶಿಫ್ಟ್ ಮಾಡಿದ್ದಾರೆ. ಆರಂಭಿಕ ಅವಶ್ಯಕ  ತಪಾಸಣೆ ನಡೆಸಿದ ತಜ್ಞ ವೈದ್ಯರು ತೀವ್ರ ನಿಗಾಘಟಕದಲ್ಲಿ ಮಗುವನ್ನ ಇರಿಸಿದ್ದಾರೆ. ಅಲ್ಲದೆ ಮಗುವಿಗೆ ಅವಶ್ಯಕವಿರುದ್ದ ವೈದ್ಯಕೀಯ ಸಹಾಯವನ್ನ ಒದಗಿಸಿದ್ದಾರೆ. 

ಆ ಬಳಿಕ ಮಗುವಿನ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರ ತೆಗೆದು ಮಗುವಿನ ಜೀವವನ್ನು ಉಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಮಗುವಿಗೆ ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್‌ ಚಿಕಿತ್ಸೆ ಅವರು ನೀಡಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದೆ. 

ಚಿಕ್ಕಮಕ್ಕಳು ಈ ರೀತಿ ಆಹಾರ ಪದಾರ್ಥ, ಇಲ್ಲವೇ ಚಾಕೋಲೇಟ್‌, ಕಾಡಿಗೆ ಡಬ್ಬಿ, ಅಡಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವಾದಂತಹ ಘಟನೆಗಳು ಈ ಹಿಂದೆ ನಡೆದಿದ್ದವು.  ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು  ತೀವ್ರ ನಿಗಾ ಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯರಾದ ಡಾ.ವಿನೋದ್‌ ಸಲಹೆ ನೀಡಿದ್ದಾರೆ.

ವೈದ್ಯರ ಸೇವೆಯನ್ನು ಸರ್ಜಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಹಾಗೂ  ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಪ್ರಶಾಂತ್‌ ಅವರು ಶ್ಲಾಘಿಸಿದ್ದಾರೆ.