ದಾವಣಗೆರೆ ಜಿಲ್ಲೆ ಚನ್ನಗಿರಿ ಯುವಕ ಶಿವಮೊಗ್ಗದಲ್ಲಿ ಅರೆಸ್ಟ್! ವಿನೋಬನಗರ ಪೊಲೀಸ್ ಸ್ಟೇಷನ್​ ಕಾರ್ಯಾಚರಣೆಗೆ ಕಾರಣ ಇಲ್ಲಿದೆ

Channagiri youth from Davanagere district arrested at Vinobanagar police station in Shivamogga The reason?

ದಾವಣಗೆರೆ ಜಿಲ್ಲೆ ಚನ್ನಗಿರಿ ಯುವಕ ಶಿವಮೊಗ್ಗದಲ್ಲಿ ಅರೆಸ್ಟ್!  ವಿನೋಬನಗರ ಪೊಲೀಸ್ ಸ್ಟೇಷನ್​ ಕಾರ್ಯಾಚರಣೆಗೆ ಕಾರಣ ಇಲ್ಲಿದೆ
Channagiri youth from Davanagere district arrested at Vinobanagar police station in Shivamogga The reason?

SHIVAMOGGA  |  Dec 30, 2023  |  ಶಿವಮೊಗ್ಗದಲ್ಲಿ ದಾವಣಗೆರೆ ನಿವಾಸಿ ಅರೆಸ್ಟ್! 

ಶಿವಮೊಗ್ಗ ಪೊಲೀಸರ ಗಾಂಜಾ ಕಾರ್ಯಾಚರಣೆ ಇದ್ದಕ್ಕಿದ್ದ ಹಾಗೆ ಚುರುಕುಗೊಂಡಿದೆ. ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ಇದೀಗ ವಿನೋಬನಗರ ಪೊಲೀಸ್ ಸ್ಟೇಷನ್​ಗೂ ವ್ಯಾಪಿಸಿದೆ. ಇದಕ್ಕೆ ಪೂರಕ ಎಂಬಂತೆ ವಿನೋಬನಗರ ಪೊಲೀಸ್ ಸ್ಟೇಷನ್ ಪೊಲೀಸರು ದಾವಣಗೆರೆ ಜಿಲ್ಲೆ ಚೆನ್ನಗಿರಿ ನಿವಾಸಿಯೊಬ್ಬನನ್ನ ಅರೆಸ್ಟ್ ಮಾಡಿದ್ದು ಆತನಿಂದ ಬರೋಬ್ಬರಿ 1 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. 

ವಿನೋಬನಗರ ಪೊಲೀಸ್ ಸ್ಟೇಷನ್/shimoga vinobanagar police station

ಮಾದಕ ವಸ್ತು ಗಾಂಜಾ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ವಿನೋಬನಗರ ಪೊಲೀಸ್ ಸ್ಟೇಷನ್​ ಪೊಲೀಸರು ದಿನಾಂಕ: 29-12-2023 ರಂದು  ನವುಲೆಯ ಇಂದಿರಗಾಂಧಿ ಬಡಾವಣೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದವನ ಮೇಲೆ ರೇಡ್ ಮಾಡಿದ್ದಾರೆ. 



READ :ಜನವರಿ 26ರಿಂದ 30ರವರೆಗೆ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ! ಪೂರ್ತಿ ವಿವರ ಇಲ್ಲಿದೆ

 

ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಸಲ್ಮಾನ್ ಖಾನ್, 22 ವರ್ಷ, ಚೆನ್ನಗಿರಿ, ದಾವಣಗೆರೆ ಜಿಲ್ಲೆ ಈತನನ್ನು ವಶಕ್ಕೆ ಪಡೆದು,  1) ಅಂದಾಜು ಮೌಲ್ಯ 1,00,000/- ರೂ ಗಳ 2 ಕೆ.ಜಿ. 53 ಗ್ರಾಂ ತೂಕದ ಒಣ ಗಾಂಜಾ, ತೂಕ ಮಾಡುವ ಯಂತ್ರ, ಮೊಬೈಲ್ ಫೋನ್ ಮತ್ತು ರೂ 500/- ನಗದು ಹಣವನ್ನು ಅಮಾನತುಪಡಿಸಿಕೊಂಡಿದ್ದಾರೆ. 

ಅಲ್ಲದೆ, ಆರೋಪಿತನ ವಿರುದ್ಧ ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0271/2023 ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.