ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ- ಜೆಪಿ ಬರೆಯುತ್ತಾರೆ

ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ

ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ- ಜೆಪಿ ಬರೆಯುತ್ತಾರೆ
ಶಿವಮೊಗ್ಗದ ಡಬಲ್ ಮರ್ಡರ್ ನ್ನು ಪೊಲೀಸರು ತಪ್ಪಿಸಬಹುದಿತ್ತಲ್ಲವೇ/ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ- ಜೆಪಿ ಬರೆಯುತ್ತಾರೆ

ಬಹಳ ದಿನಗಳಿಂದ ಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಚುನಾವಣೆ ಸಂದರ್ಭದಲ್ಲಿ ರೌಡಿಗಳು ಫುಲ್ ಅಲರ್ಟ್ ಆಗಿ, ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ದ್ವೇಷ ಪ್ರತಿಕಾರಕ್ಕೆ ಹೆಣಗಳು ಉರುಳುತ್ತವೆ.ಚುನಾವಣೆ ಸಂದರ್ಭದಲ್ಲಿ ಕೊಲೆಗಳಾಗುವ ಸಾಧ್ಯತೆಗಳ ಬಗ್ಗೆ ಮಲೆನಾಡು ಟುಡೆ ಗ್ರೌಂಡ್ ರಿಪೋರ್ಟ್ ಮಾಡಿತ್ತು.

ಶಿವಮೊಗ್ಗದಲ್ಲಿ ನೆಲಕ್ಕುರುಳುವ ಜೀವಗಳಿಗೆಗೆ ಜಾತಿ ಧರ್ಮದ ಲೆಕ್ಕವಿಲ್ಲ. ಕತ್ತಿಯಂಚಿಗೆ ರಕ್ತದ ಕಮಟು ವಾಸನೆ ತಾಕಿದ್ರೆ ಸಾಕು. ಹೆಣಗಳು ಬೀಳುತ್ತವೆ. 08-05-2024 ರ ಸಂಜೆ 5.30 ರಿಂದ 6 ಗಂಟೆ ಸುಮಾರಿಗೆ ಲಷ್ಕರ್ ಮೊಹಲ್ಲದ ಮೀನು ಮಾರುಕಟ್ಟೆ ಸರ್ಕಲ್ ಬಳಿ ಇಬ್ಬರು ರೌಡಿ ಶೀಟರ್ ಗಳ ಕೊಲೆಯಾಗುತ್ತದೆ. ಮತ್ತೋರ್ವನಿಗೆ ಚಾಕು ಇರಿದ ಪರಿಣಾಮ ಆತ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದಾನೆ

 

ಈ ಕೊಲೆಯಾಗುವ ಮೂರು ದಿನದ ಹಿಂದಷ್ಟೆ..ಇದೇ ಇಬ್ಬರು ರೌಡಿಗಳ ನಡುವೆ ಕೆ.ಆರ್ ಪುರಂ ರಸ್ತೆಯಲ್ಲಿ ಗಲಾಟೆಯಾಗಿದ್ದನ್ನು ಸಾರ್ವಜನಿಕರು ನೋಡಿದ್ದಾರೆ. ನೆನ್ನೆಯ ಘಟನೆ ಹೇಗಾಯ್ತು ಎಂದು ಕೆ.ಆರ್ ಪುರಂ ನಿಂದ ಲಷ್ಕರ್ ಮೊಹಲ್ಲಾದವರಿಗೆ ನಡೆಸಿದ ತನಿಖಾ ವರದಿಗಾರಿಕೆಯಲ್ಲಿ ಪೊಲೀಸರ ಸಾಕಷ್ಟು ಲೋಪವಾಗಿರುವುದು ಕಂಡು ಬಂದಿದೆ.

 

ಆದಿಲ್ ವರ್ಸಸ್ ಯಾಸಿನ್ ಖುರೇಷಿ

ಆದಿಲ್ ಸುಂದರ ಆಶ್ರಯ ಜೀವನ್ ಮರ್ಡರ್ ಕೇಸಿನ ಪ್ರಮುಖ ಆರೋಪಿಯಾಗಿದ್ದ.. ಯಾಸಿನ್ ಖುರೇಷಿ ಕೂಡ ರೌಡಿ ಶೀಟರ್.. ಇವರಿಬ್ಬರ ನಡುವೆ ಅದ್ಯಾವ ಕೌಟುಂಬಿಕ ವಿಷಯ ತಗಾದೆ ತೆಗೆದಿದೆಯೋ ಗೊತ್ತಿಲ್ಲ..ಲೋಕಸಭೆ ಚುನಾವಣೆ ಹಿಂದಿನ ದಿನ ಮದ್ಯಾಹ್ನ ಆದಿಲ್ ಮತ್ತು ಸಹಚರರು ಯಾಸಿನ್ ಖುರೇಷಿ ಹಾಗು ಮತ್ತೋರ್ವನನ್ನು ಕೆ.ಆರ್ ಪುರಂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದೆ. ಕೆ.ಆರ್ ಪುರಂ ನಿಂದ ಜೀವ ಉಳಿಸಿಕೊಂಡು ಲಷ್ಕರ್ ಮೊಹಲ್ಲಾಗೆ ಬಂದಿದ್ದ ಯಾಸಿನ್ ಜೀವಭಯದಿಂದ ತತ್ತರಿಸಿ ಹೋಗಿದ್ದ. ಈ ಘಟನೆಯಾದಾಗಲೇ ಪೊಲೀಸರು ಎಚ್ಚೆತ್ತುಕೊಂಡು, ಇಬ್ಬರನ್ನು ಕರೆಸಿ ಎಚ್ಚರಿಕೆ ನೀಡಿದ್ರೆ. ಇಲ್ಲ ಅಂದ್ರೆ ಕೇಸ್ ಹಾಕಿದ್ರೆ. ಮುಂದೆ ನಡೆಯಬಹುದಾಗಿದ್ದ ಕೊಲೆಯನ್ನು ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಮಲೆನಾಡು ಟುಡೆಗೆ ಹೇಳಿದ್ದಾರೆ. ಕೆ.ಆರ್ ಪುರಂ ನಲ್ಲಿ ಆದಿಲ್ ಹಾಗು ಸಹಚರರು ಯಾಸಿನನ್ನು ಓಡಾಡಿಸಿಕೊಂಡು ಹಲ್ಲೆ ಮಾಡಿದ್ದನ್ನ ಕೆಲವರು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 ಇನ್ನು ನೆನ್ನೆ ಸಂಜೆ ಕೆ.ಆರ್ ಪುರಂ ನಿಂದ ಸುಮಾರು ಹತ್ತರಿಂದ ಹದಿನೈದು ಮಂದಿಯ ತಂಡ ಬೈಕ್ ಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಬಂದಿದ್ದಾರೆ. ಮಚ್ಚು ಲಾಂಗು ಗಳನ್ನು ನೆಲಕ್ಕೆ ತಾಕಿಸಿಕೊಂಡು ಝಳಪಿಸುತ್ತಾ ಹೋಗಿದ್ದನ್ನು ಸಾರ್ವಜನಿಕರು ಕಣ್ಣಾರೆ ಕಂಡು ದಂಗಾಗಿ ಹೋಗಿದ್ದಾರೆ.ಕೆ.ಆರ್ ಪುರಂ ಎಂ.ಕೆ.ಕೆ ರಸ್ತೆ, ಉರ್ದು ಬಜಾರ್ ನಾಗಪ್ಪನ ಕೇರಿ ಲಷ್ಕರ್ ಮೊಹಲ್ಲಾದವರಿಗೆ ಮಚ್ಚು ಝಳಪಿಸುತ್ತಾ ಬರುತ್ತಿರುವಾಗ ಕೆಲವರು ಕೋಟೆ ಪೊಲೀಸರಿಗೆ ಫೋನ್ ಕೂಡ ಮಾಡಿದ್ದಾರೆ. ತಕ್ಷಣಕ್ಕೆ ಕೋಟೆ ಪೊಲೀಸರು ಯಾಕೆ ಅಲರ್ಟ್ ಆಗಲಿಲ್ಲ ಎಂಬುದು ಪ್ರಶ್ನೆಯಾಗಿ ಉಳಿದಿದೆ.

 

ಜನತಾ ಮಟಲ್ ಸ್ಟಾಲ್ ಪೆಪ್ಸಿ ಚಿಪ್ಸು ತಿಂತಿದ್ದ ಯಾಸಿನ್

 ಸಂಜೆ ಸುಮಾರು 5.30 ರ ಹೊತ್ತಿಗೆ ಯಾಸಿನ್ ಖುರೇಷಿ ಲಷ್ಕರ್ ಮೊಹಲ್ಲಾದಲ್ಲಿರುವ ಜನತಾ ಮಟಲ್ ಸ್ಟಾಲ್ ನಲ್ಲಿ ಪೆಪ್ಸಿ ಚಿಪ್ಸು ತಿನ್ನುತ್ತಾ ಕೂತಿರುವಾಗ ಬೈಕ್ ನಲ್ಲಿ ಬಂದಿದ್ದ ಆದಿಲ್ ಮತ್ತವನ ಸಹಚರರಲ್ಲಿ ಒಬ್ಬರು ಮಾತಾಡಬೇಕು ಬಾ ಅಂತಾ ಕರೆದಿದ್ದಾರೆ. ಎರಡು ದಿನದ ಹಿಂದೆಯಷ್ಟೆ ನಡೆದ ಕಹಿ ಘಟನೆಯನ್ನು ಮರೆಯದ ಯಾಸಿನ್ ಹುಡುಗರನ್ನ ಜೊತೆಯಲ್ಲಿಯೇ ಇಟ್ಟುಕೊಂಡಿದ್ದ. ಆದಿಲ್ ಕರೆದಾಗ ಯಾಸಿನ್ ತನ್ನ ಹುಡುಗರಿಗೆ ಅಲ್ಲೆ ಇರುವಂತೆ ಹೇಳಿದ್ದಾನೆ. ನಂತರ ಆದಿಲ್ ಮತ್ತು ಸಹಚರರು ಯಾಸಿನ್ ಖುರೇಷಿ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಆತ ಕುಸಿದು ಬಿದ್ದಿದ್ದಾನೆ. ನಂತರ ಯಾಸಿನ್ ಸಹಚರರು ಆದಿಲ್ ಕಡೆಯ ಇಬ್ಬರನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ರಾಜಾರೋಷವಾಗಿ ಎಸ್ಕೆಪ್ ಆಗಿದ್ದಾರೆ.

 ಇನ್ನು ಯಾಸಿನ್ ಖುರೇಷಿ ಮೇಲೆ ಹಲ್ಲೆ ಮಾಡಿದ ಗ್ಯಾಂಗ್ ನಲ್ಲಿದ್ದ ಇಬ್ಬರನ್ನು ಯಾಸಿನ್ ಕಡೆ ಹುಡುಗರು ಮಚ್ಚು ಬೀಸಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ನಂತರ ಯಾವುದೇ ಅಂಜಿಕೆಯಿಲ್ಲದೆ ಮಚ್ಚನ್ನು ನೆಲಕ್ಕಂಟಿಸಿಕೊಂಡೇ ಹೋಗಿದ್ದನ್ನ ಸಾರ್ವಜನಿಕರು ನೋಡಿದ್ದಾರೆ. ಆ ರಕ್ತದ ಕಲೆಗಳು ಮಾರ್ಗದ ಮದ್ಯ ಅಲ್ಲಲ್ಲಿ ಕಾಣಸಿಗುತ್ತದೆ. ಈ ಘಟನೆಗೂ ಮುನ್ನ ಕೋಟೆ ಪೊಲೀಸ್ ಠಾಣೆಗೆ ಸಾಕಷ್ಟು ಕರೆಗಳು ಹೋಗಿವೆ. ಕೋಟೆ ಪೊಲೀಸ್ ಠಾಣೆ ಅಣತಿ ದೂರದಲ್ಲಿ ನಡೆದ ಕೊಲೆ ಘಟನೆ ಇದಾಗಿದೆ. ಆದರೆ ಸಕಾಲದಲ್ಲಿ ಪೊಲೀಸರು ಯಾಕೆ ಘಟನಾ ಸ್ಥಳಕ್ಕೆ ಬರಲಿಲ್ಲ.. ಈ ಬಗ್ಗೆ ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ ಕೂಡ ತೀವೃ ಆಕ್ರೋಶ ಹೊರಹಾಕಿದ್ದಾರೆ.

 

 ಶಿವಮೊಗ್ಗದಲ್ಲಿ ರೌಡಿ ನಿಗ್ರಹ ದಳ ಏನ್ ಮಾಡ್ತಿದೆ?

ಶಿವಮೊಗ್ಗದಲ್ಲಿ ರೌಡಿಸಂ ಆಕ್ಟಿವ್ ಆಗಿದೆ. ಕೆಲವರು ಮುಸ್ಲಿಂ ಅಂಡರ್ ವರ್ಲ್ಡ್ ನ್ನು ರೂಲ್ ಮಾಡಬೇಕೆದು ಆ ಸಮುದಾಯದವರನ್ನೇ ಟಾರ್ಗೇಟ್ ಮಾಡಿಕೊಂಡು ವ್ಯಾಪಾರಸ್ಥರಿಂದ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಕೆಲವರು ಗಾಂಜಾ ದಂಧೆಯ ಮೇಲೆ ನಿಯಂತ್ರಣ ಸಾಧಿಸೋಕೆ ಹೋಗಿ ಕೊಲೆಯಾಗಿದ್ದಾರೆ. ಈ ಕೊಲೆಗಳು ಪ್ರತಿಕಾರದ ಭಾಗವಾಗಿ ಮತ್ತೆ ಕೊಲೆಗಳಾಗುತ್ತಿವೆ. ಪ್ರತಿ ರೌಡಿಗಳ ಮೇಲೆ ಷ್ಯಾಡೋ ಪೋಲಿಸಿಂಗ್ ಮಾಡಬೇಕಾದ ಪೊಲೀಸರು ಮೌನಕ್ಕೆ ಶರಣಾದಂತಿದೆ. ಚುನಾವಣೆಯ ಹಿಂದಿನ ದಿನ ಆರ್ ಪುರಂ ನಲ್ಲಿ ಚುನಾವಣೆ ನಡೆದ ಸಂಜೆ ಲಷ್ಕರ್ ಮೊಹಲ್ಲದ ಯಲ್ಲಮ್ಮನ ದೇವಸ್ಥಾನದ ಬಳಿ ಮಚ್ಚುಗಳೊಂದಿಗೆ ಜಮಾಯಿದ್ದ ರೌಡಿಗಳನ್ನು ಪೊಲೀಸರು ಚದುರಿಸಿದ್ದು ಬಿಟ್ರೆ ಅವರನ್ನ ಯಾಕೆ ರೌಡಿ ನಿಗ್ರಹ ದಳ ಅರೆಸ್ಟ್ ಮಾಡಲಿಲ್ಲ.