ಎಲ್ಲರೂ ಮಾಡ್ತಾರೆ, ನಾವ್ಯಾಕೆ ಸುಮ್ಮನಿರಬೇಕು? ಒಂದು ಪ್ರಶ್ನೆಗೆ ಉತ್ತರವಾಗಿದ್ದ ಎರಡು ಸಾವು! ಓಲೇಕರ್​ರ ಮನೆಯಲ್ಲಿ ನಡೆದಿದ್ದೇನು? JP ಬರೆಯುತ್ತಾರೆ

ಹೊಸವರ್ಷಕ್ಕೆ ಎಲ್ಲರೂ ಪಟಾಕಿ ಹೊಡೆಯ ಬೇಕಾದ್ರೆ..ನಾವ್ಯಾಕೆ ಸುಮ್ ನಿರಬೇಕು ಎಂದು ಕೈಗೆತ್ತಿಕೊಂಡ ಬಂದೂಕು ಸೃಷ್ಟಿಸಿದ ಅವಾಂತರ ಎಂತಾದ್ದು..? ಜೀವದ ಗೆಳೆಯನನ್ನು ಮನೆಗೆ ಪಾರ್ಟಿಗೆ ಕರೆದು ಎಡವಟ್ಟು ಮಾಡಿಕೊಂಡ ಸ್ನೇಹಿತ ! ಅತ್ತ ಗೆಳೆಯನನ್ನು ಇತ್ತ ತಂದೆಯನ್ನು ಕಳೆದುಕೊಂಡಿದ್ದು ಹೇಗೆ? .ದುರಂತ ನ್ಯೂ ಇಯರ್ ಪಾರ್ಟಿಯ ಇನ್ನರ್ ಸ್ಟೋರಿ ಏನು ಅಂತಿರಾ ಈ ಸ್ಟೋರಿ ನೋಡಿ

ಮಲೆನಾಡಿನಲ್ಲಿ ಕಾಡಿನಲ್ಲಿ ಬೇಟೆಗೆ ಹೋದ ಸಂದರ್ಭದಲ್ಲಿ ನಾಡಬಂದೂಕಿನಿಂದ ಮಿಸ್ ಫೈರ್ ಆಗಿರೋ ಸಾಕಷ್ಟು ಪ್ರಕರಣಗಳನ್ನು ಓದಿದ್ದೇವೆ. ಕಾಡಿನಲ್ಲಿ ಯಾವುದೇ ಸದ್ದಾದರೂ..ಪ್ರಾಣಿಯೇ ಇರಬೇಕು ಎಂದು ಗುಂಡು ಹಾರಿಸಿ ಬೇಟೆಗೆ ಜೊತೆಗೆ ಹೋಗಿದ್ದವರನ್ನೇ ಗುಂಡಿಟ್ಟು ಸಾಯಿಸಿದ ಉದಾಹರಣೆಗಳು ಸಾಕಷ್ಟಿದೆ. ಅಲ್ಲದೆ  ಟ್ರಿಗರ್ ಒತ್ತುವಾಗ ಮಿಸ್ ಫೈರ್ ಆಗಿ ಸಾವು ನೋವಾದ ಘಟನೆಗಳು ಕಾಡಿನ ಪರಿಸರದಲ್ಲಿ ನಡೆದಿದೆ.ಆದ್ರೆ ಶಿವಮೊಗ್ಗದ ಮನೆಯೊಂದರಲ್ಲಿ ಹೊಸ ವರ್ಷದ ಔತಣಕೂಟದ ಸಂದರ್ಭದಲ್ಲಿ ಬಂದೂಕಿನಿಂದ ಹೊರಬಂದ ಬುಲೆಟ್ ಇಬ್ಬರ ಜೀವವನ್ನು ಬಲಿಪಡೆದಿದೆ.

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ನಡೆದು ಹೋಯ್ತು ದುರಂತ

ಒಂದು ಆಕಸ್ಮಿಕವಾಗಿ ಮಿಸ್ ಫೈರ್ ಆಗಿ ಗುಂಡೇಟಿನಿಂದ ಸಾವು. ಮತ್ತೊಂದು ನನ್ನಿಂದ ಎಂತಹ ಕ್ರೌರ್ಯ ವಾಯ್ತಲ್ಲ ಎಂಬ ನೋವಿನ ಹೃದಯಾಘಾತದಿಂದಾದ ಸಾವು. ಇಬ್ಬರ ಸಾವಿಗೂ ಮರುಗುವ ಜನರಿದ್ರೂ. ಆ ಯಜಮಾನನಿಗೆ ಅದೆಂತಾ ಹುಚ್ಚು ಮಾರಾಯ. ಹೊಸ ವರ್ಷದ ಸ್ವಾಗತಕ್ಕೆ ಯಾರಾದ್ರೂ. 12 ಗಂಟೆ ರಾತ್ರೀಲಿ ಆಗಸಕ್ಕೆ ಬಂದೂಕು ಇಟ್ಟು ಕುಶಾಲತೋಪು ಸಿಡಿಸುತ್ತಾರಾ. ಇದೆಂತಾ ಹವ್ಯಾಸ ಮಾರಾಯ. ಅನ್ಯಾಯವಾಗಿ ಆ ಹುಡುಗನ ಜೀವ ಹೋಯ್ತು. ಎಂದು ಘಟನೆ ನಡೆದ ದಿನ ಜನರು ಮಾತಾಡಿಕೊಳ್ಳುತ್ತಿದ್ರು.

ಶಿವಮೊಗ್ಗಕ್ಕೆ ಪ್ರಸನ್ನ ಭಟ್ ಪಾರ್ಥಿವ ಶರೀರ/ ಹೊಸನಗರದಲ್ಲಿ ಅಂತಿಮ ವಿದಾಯಕ್ಕೆ ಸಿದ್ಧತೆ

ಹೌದು ಇದೊಂದು ಅಚಾತುರ್ಯ ಶಿವಮೊಗ್ಗ ನಗರದಲ್ಲಿ ನಡೆಯಬಾರದಿತ್ತು. ಆದ್ರೆ ವಿಧಿಯಾಟ. ಅಲ್ಲಿ ನಡೆದೇ ಹೋಯ್ತು. ಅಂದಹಾಗೆ ಈ ಸ್ಟೋರಿಯ ಹ್ಯಾಪಿ ಎಂಡಿಂಗ್ ಗೆ ಮುನ್ನುಡಿ ಬರೆಯಲು ಹೋದವನು ಟ್ರಾಜಿಡಿ ಎಂಡಿಂಗ್ ಮಾಡಿದ್ದು ನಿಜಕ್ಕೂ ದುರಂತವೇ ಸರಿ.

ಸಾಗರ ಪಟ್ಟಣದ ಎನ್​ಎನ್​ ಸರ್ಕಲ್​ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ

ಹೇಗಾಯ್ತು ಓದಿ

ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ಆ ವೈಟ್ ಹೌಸ್ ಬಂಗಲೆಯನ್ನು ನೋಡಿದಾಗ ಎಂತವರು ಒಂದು ಕ್ಷಣ ನಿಂತು ಹೋಗುತ್ತಿದ್ದ ಕಾಲವೊಂದಿತ್ತು. ವಿದ್ಯಾನಗರದಲ್ಲಿಯೇ ಅತೀ ದೊಡ್ಡದಾದ ಬಂಗಲೆ ಅದಾಗಿತ್ತು. ಶಿವಮೊಗ್ಗದ ಪ್ರತಿಷ್ಠಿತ ಗೋಪಾಲ್ ಗ್ಲಾಸ್ ಅಂಡ್ ಪ್ಲೈವುಡ್ಸ್ ಮಾಲೀಕ ಮಂಜುನಾಥ್ಒಲೇಕರ್​ ಆ ಮನೆಯ ಜಯಮಾನರಾಗಿದ್ರು. ಉತ್ತಮ ವ್ಯವಹಾರ ಜ್ಞಾನ ಹೊಂದಿದ್ದ ಮಂಜುನಾಥ್ ರವರಿಗೆ ಅದೊಂದು ಖಯಾಲಿ ಹೊಸ ವರ್ಷದಲ್ಲಿ ಕೈಕೊಟ್ಟಿತ್ತು

Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ

ಪ್ರತಿ ವರ್ಷ ಹೊಸ ವರ್ಷದ ಆಚರಣೆಗೆ ಅವರು ತಮ್ಮ ಮನೆಯಲ್ಲಿದ್ದ ಲೈಸೆನ್ಸ್ ಡಿಬಿಬಿಎಲ್ ಬಂದೂಕಿನನ್ನು ಆಕಾಶಕ್ಕೆ ಗುರಿಮಾಡಿ, ಗಾಳಿಯಲ್ಲಿ ಗುಂಡು ಹಾರಿಸಿ, ಎಲ್ಲರಿಗೂ ಶುಭಕೋರುತ್ತಿದ್ದರಂತೆ. ಆದ್ರೆ ಎರಡು ವರ್ಷ ಕೊರೊನಾ ಕಾರಣದಿಂದ ನ್ಯೂ ಇಯರ್ ಸೆಲೆಬ್ರೇಷನ್ ಗೆ ಅವಕಾಶ ಸಿಕ್ಕಿರಲಿಲ್ಲ. ಈ ವರ್ಷ ಹೊಸವರ್ಷವನ್ನು ಅದ್ದೂರಿಯಾಗಿ ಆಚರಿಸಬೇಕು, ಬಂದೂಕಿನಿಂದ ಏರ್ ಫೈರ್ ಮಾಡಿ ಹೊಸ ವರ್ಷಕ್ಕೆ ಸ್ವಾಗತ ಕೋರಬೇಕು ಎಂದು ಖುಷಿಯಲ್ಲಿ ಸ್ನೇಹಿತರನ್ನು ಅಕ್ಕಪಕ್ಕದ ಮನೆಯವರನ್ನು ಕರೆದಿದ್ರು ಮಂಜುನಾಥ್. ಆ ಆಮಂತ್ರಣಕ್ಕೆ ಓಗೊಟ್ಟು ಬಂದವರಲ್ಲಿ ವಿನಯ್ ಎಂಬ 34 ವರ್ಷದ ವಾಲಿಬಾಲ್ ಕ್ರೀಡಾಪಟು ಕೂಡ ಒಬ್ರು. 

ಹಾಗೆ ನೋಡಿದ್ರೆ 68 ವರ್ಷದ ಮಂಜುನಾಥ್ ಗೂ 34 ವರ್ಷದ ವಿನಯ್ ಗೂ ಎಲ್ಲಿಂದೆತ್ತಣದ ಸಂಬಂಧ ಎಂದು ಕೇಳುವವರು ಇದ್ದಾರೆ. ಮಂಜುನಾಥ್ ಓಲೇಕರ್ ಅವರ‌ ಪುತ್ರ ಸಂದೀಪ್ ನ ಗೆಳೆಯ ಈ ವಿನಯ್. ವಿನಯ್ ನೆಹರೂ ಕ್ರೀಡಾಂಗಣದಲ್ಲಿ ವಾಲಿ ಬಾಲ್ ಆಟ ವಾಡುವ ವೇಳೆ ಸಂದೀಪ್ ಗೆ ಪರಿಚಯವಾಗಿರುತ್ತಾರೆ. ಸಂದೀಪ್ ಮತ್ತು ವಿನಯ್ ಸ್ನೇಹವೇ ನ್ಯೂ ಇಯರ್ ಪಾರ್ಟಿಯಲ್ಲಿ ಒಂದಾಗುವಂತೆ ಮಾಡ್ತು. 

ಇದನ್ನು ಓದಿ : Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!

ಕೊನೆ ಕ್ಷಣದಲ್ಲಿ

ಮಂಜುನಾಥ್ ಓಲೇಕರ್ ಸಿಟಿ ಕ್ಲಬ್ ನಲ್ಲಿ ಸದಸ್ಯರಾಗಿದ್ದು, 31-12-22 ರ ರಾತ್ರಿ ಒಂಬತ್ತು ವರೆಗೆ ಕ್ಲಬ್ ನಿಂದ ಮನೆಗೆ ಆಗಮಿಸಿತ್ತಾರೆ. ಮನೆಯಲ್ಲಿ ಮಗ ಸಂದೀಪ್ ಹೊಸವರ್ಷದ ಎಲ್ಲಾ ಸಿದ್ದತೆಗಳನ್ನು ಮಾಡಿರ್ತಾನೆ. ಸಂದೀಪ್ ಸ್ನೇಹಿತ ವಿನಯ್ ಕೂಡ ಪಾರ್ಟಿಗೆ ಬಂದಿರ್ತಾನೆ.ಅಕ್ಕಪಕ್ಕದ ನಾಲ್ಕೈದು ಮಂದಿ ಪಾರ್ಟಿಯಲ್ಲಿ ಎಂಜಾಯ್ ಮಾಡ್ತಿರ್ತಾರೆ.

ಮಂಜುನಾಥ್ ರನ್ನು  ಕೆರಳಿಸಿ ಬಿಡ್ತಾ 12 ಗಂಟೆಯ ಪಟಾಕಿ ಸದ್ದು?

ವೈಟ್ ಹೌಸ್ ಬಂಗಲೆಯಲ್ಲಿ ಮಂಜುನಾಥ್ ಒಲೇಕರ್​ ನೇತ್ರತ್ವದಲ್ಲಿ ನಡೆಯುತ್ತಿದ್ದ ನ್ಯೂ ಇಯರ್ ವೆಲ್ ಕಮ್ ಪಾರ್ಟಿ ಅದ್ದೂರಿಯಾಗಿಯೇ ನಡೀತಿತ್ತು. ಎಲ್ಲರೂ ಎಂಜಾಯ್ ಮೂಡ್ ನಲ್ಲಿರುವ ಹೊತ್ತಿನಲ್ಲಿಯೇ. ಗಂಟೆ 12 ಆಗುತ್ತಿದ್ದಂತೆ ಎಲ್ಲರೂ ಊಟಕ್ಕೆ ಅಣಿಯಾದ್ರು. ಇತ್ತ ಶಿವಮೊಗ್ಗ ನಗರದಲ್ಲಿ ಪಟಾಕಿ ಸದ್ದು ಆರ್ಭಟಿಸ ತೊಡಗಿದ್ದವು.

ವಿನಯ್ ಊಟಕ್ಕೆ ಅಣಿಯಾದ. ಆದ್ರೆ ಮಂಜುನಾಥ್ ಎಲ್ಲರೂ ಪಟಾಕಿ ಹೊಡೆಯುವಾಗ ನಾವ್ಯಾಕೆ ಸುಮ್ಮನಿರಬೇಕು. ಡಬಲ್ ಬ್ಯಾರಲ್ ಗನ್ ಮೂಲಕ ಆಗಸಕ್ಕೆ ಫೈರ್ ಮಾಡಿ ಸದ್ದು ಮಾಡುವ ಎಂದು ಮನೆಯಲ್ಲಿದ್ದ ಲೈಸೆನ್ಸಡ್ ಡಿಬಿಬಿಎಲ್ ಬಂದೂಕು ತಂದು ಅದಕ್ಕೆ ಕಾರ್ಟೇಜ್ ಆಗಲು ಅಣಿಯಾಗ್ತರೆ ಅಷ್ಟೆ. ಗನ್ ಗೆ ಮದ್ದು ಹಾಕೋ ವೇಳೆ. ಆಗಸಕ್ಕೆ ಚಿಮ್ಮಬೇಕಾದ ಗುಂಡಿನ ಸದ್ದು, ಇನ್ನು ಆರಂಭದಲ್ಲಿಯೇ ಎದುರಿಗೆ ಊಟಕ್ಕೆ ಕೂತಿದ್ದ ವಿನಯ್ ಹೊಟ್ಟೆಯನ್ನು ಹೊಕ್ಕಿ ಬಿಡುತ್ತೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಎರಡು ಪೆಲ್ಲೆಟ್ಸ್ ಗಳು ವಿನಯ್ ಹೊಟ್ಟೆಯೊಳಗೆ ಹೋಗುತ್ತಿದ್ದಂತೆ ವಿನಯ್ ಕರುಳು ಹೊರಬಂದಿದೆ. ತನ್ನ ಕೈಯಿಂದ ಎಂತಹ ಪ್ರಮಾದವಾಯ್ತಲ್ಲ. ಮಗನ ಸ್ನೇಹಿತನನ್ನು ಪಾರ್ಟಿಗೆ ಕರೆದು, ನಾನೇ ನನ್ನ ಕಯ್ಯಾರೆ ಎಂತಹ ಕೃತ್ಯ ಎಸಗಿದೆನಲ್ಲಾ ಎಂಬ ಅಳುಕು ಮಂಜುನಾಥ್ ರನ್ನು ಘಾಡವಾಗಿ ಕಾಡಿದೆ. ಇದೇ ಮಾನಸಿಕ ಒತ್ತಡದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ತಕ್ಷಣ ವಾಹನದಲ್ಲಿ ಗಾಯಗೊಂಡ ವಿನಯ್ ಹಾಗು ಮತ್ತೊಂದು ವಾಹನದಲ್ಲಿ ಮಂಜುನಾಥ್ ರನ್ನು ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಮಾರ್ಗ ಮದ್ಯೆಯೇ ಮಂಜುನಾಥ್ ರವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇತ್ತ ವಿನಯ್ ಆಸ್ಪತ್ರೆಯಲ್ಲಿ ಮಾರನೇ ದಿನ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣಬಿಟ್ಟ. ಈ ಘಟನೆಯಲ್ಲಿ ಅಮಾಯಕನಾಗಿ ಕಾಣೋದು ವಿನಯ್ ಮಾತ್ರ.

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ವಿನಯ್ ಅತ್ಯಂತ ಬುದ್ದಿವಂತ ಭವಿಷ್ಯದ ಕನಸು ಹೊತ್ತು ಕನ್ನಡದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ಹೊಂದಿದ್ದ ಯುವಕ. ಮೊದಲು ಮಲವಗೊಪ್ಪದಲ್ಲಿರುವ ಮಹಾವೀರ್ ಜೈನ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಪಿಹೆಚ್ ಡಿ ಅಧ್ಯಯನ ಮಾಡುತ್ರಿದ್ರು. ಕನ್ನಡ ಅಧ್ಯಾಯನ ವಿಭಾಗದ ಡಾ.ವಿಜಯ ಕುಮಾರ್ ಹೆಚ್ ಜಿ, ವಿನಯ್ ಮಾರ್ಗದರ್ಶಕರಾಗಿದ್ರು. ಮಲೆನಾಡಿನ ಗ್ರಾಮದೇವತೆಗಳ ಕುರಿತು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದಡಿ ಪಿಹೆಡ್ ಡಿ ಮಾಡುತ್ತಿದ್ರು. ರಂಗಭೂಮಿ ಕಲಾವಿದರಾಗಿದ್ದ ವಿನಯ್ 

ಬ್ರೇಕಿಂಗ್​ ನ್ಯೂಸ್​ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್​ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ

ಸಿದ್ದಲಿಂಗ್ಯರವರ ಏಕಲವ್ಯ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ರು. ಐದು ಬಾರಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ತಂಡವನ್ನ ಪ್ರತಿನಿಧಿಸಿದ್ದ ವಿನಯ್ ಅಂತರಾಜ್ಯ ದಕ್ಷಿಣ ವಲಯ ಕ್ರೀಡಕೂಟದಲ್ಲಿ ಪ್ರತಿನಿಧಿಸಿದ್ದರು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ವಿನಯ್ ರನ್ನ “ವಿನಯ್ ವಾಲಿ” ಎಂದೇ ಪ್ರಖ್ಯಾತರಾಗಿದ್ದರು. ಹಲವು  ಬರಹಗಾರರೂ ಆಗಿದ್ದ ವಿನಯ್ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ  ಪಾಲ್ಗೊಂಡು ಉತ್ತಮ ಹೆಸರು ಗಳಿಸಿದ ವಿನಯ್ ಗೆ ಆ ಹೊಸವರ್ಷದ ಆಮಂತ್ರಣ ಬದುಕಿನ ದಾರಿಯನ್ನೇ ಬ್ಲಾಕ್ ಮಾಡಿಬಿಡ್ತು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ