ಕಾಡಿಗಟ್ಟುವ ವೇಳೆ ಊರ ಮಂದಿಯತ್ತ ಎರಗಿದ ಕರಡಿ | ಜೀವ ಭಯ ಬಿಟ್ಟು ಜಾಂಬವಂತನನ್ನ ಓಡಿಸಿದ ಅರಣ್ಯ ಸಿಬ್ಬಂದಿ

A bear was successfully driven back into the forest by the forest department staff in Isur village, Shikaripura taluk, Shivamogga district. The bear had appeared near the Veerabhadreshwara temple and was spotted by the forest department staff.

ಕಾಡಿಗಟ್ಟುವ ವೇಳೆ ಊರ ಮಂದಿಯತ್ತ ಎರಗಿದ ಕರಡಿ | ಜೀವ ಭಯ ಬಿಟ್ಟು ಜಾಂಬವಂತನನ್ನ ಓಡಿಸಿದ ಅರಣ್ಯ ಸಿಬ್ಬಂದಿ
forest department, Isur village, Shikaripura taluk, Shivamogga district, bear

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನ ಈಸೂರಿನಲ್ಲಿ ನಿನ್ನೆ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಕಾಡಿಗೆ ಅಟ್ಟಿದ್ದಾರೆ. ಆದರೆ ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿ ತೋರಿದ ದೈರ್ಯಕ್ಕೆ ಸಾಕ್ಷಿ ಎಂಬಂತಹ ದೃಶ್ಯವೊಂದರ ಬಗ್ಗೆ ವರದಿಯಾಗಲಿಲ್ಲ. ಅದನ್ನೀಗ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ತಾಲ್ಲೂಕಿನ ಈಸೂರು ಗ್ರಾಮದ  ವೀರಭದ್ರೇಶ್ವರ ದೇವಸ್ಥಾನ ಹಿಂಭಾಗದ ಕೆರೆಯ ಸಮೀಪ ಕರಡಿಯೊಂದು ಕಾಣಿಸಿಕೊಂಡಿತ್ತು. 

ಅದರ ಬಗ್ಗೆ ಶುಕ್ರವಾರ ಬೆಳಗ್ಗೆ ಪತ್ರಿಕೆಯಲ್ಲಿ ವರದಿಯಾಗಿತ್ತು. ಜೊತೆಯಲ್ಲಿಯೇ ಅರಣ್ಯ ಇಲಾಖೆಯ ಕಿವಿಗೂ ಸುದ್ದಿ ತಲುಪಿತ್ತು. ಉಡಾ ಬೇಟೆಯಾಡಿದ್ದ ಪ್ರಕರಣದ ತನಿಖೆಯಲ್ಲಿದ್ದ ಅಂಬ್ಲಿಗೋಳ ವಲಯದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಆರಂಭಿಸಿದ್ದರು. ಈ ಹಿಂದೆ ಹುಲಿಯೊಂದು ಕಾಣಿಸಿಕೊಂಡಿದ್ದಾಗ ಸೇರಿದ್ದ ಜನರಂತೆ, ಕರಡಿಯನ್ನ ನೋಡಲು ಊರು ಮಂದಿ ಜಮಾಯಿಸಿದ್ದರು. 

ಅರಣ್ಯ ಇಲಾಖೆಗೆ ವನ್ಯಜೀವಿಯನ್ನ ರಕ್ಷಣೆ ಮಾಡಬೇಕೋ, ಅದರಿಂದ ಜನರನ್ನ ರಕ್ಷಣೆ ಮಾಡಬೇಕೋ ಎನ್ನುವಂತಿತ್ತು ಸೇರಿದ್ದ ಮಾಬ್‌. ಇದರ ಕೆಸ ಬೆಳೆದ ಕೆರೆಯಲ್ಲಿ ಎಲೆಗಳ ಸಂಧಿಯಲ್ಲಿ ಅಡಗಿದ್ದ ಕರಡಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬೀಳದೇ ಬಹಳ ಹೊತ್ತು ಕಾಡಿತ್ತು. ಆನಂತರ ಸಿಬ್ಬಂದಿಗೆ ಕಾಣಿಸಿದ ಕರಡಿಯನ್ನು ಅರಣ್ಯದ ಕಡೆಗೆ ಓಡಿಸಲು ಉಪಾಯ ಮಾಡಲಾಗಿತ್ತು. 

ಅದರ ನಡುವೆ ಅದನ್ನ ಓಡಿಸುವ ಸಲುವಾಗಿ ಸಿಡಿಸಿದ ಗರ್ನಲ್‌ ಸದ್ದಿಗೆ ಕೆರಳಿದ ಕರಡಿ ನೇರವಾಗಿ ಜನರಿರುವ ಕಡೆಗೆ ಓಡಿ ಬಂದು ದಾಳಿ ಇಟ್ಟಿತ್ತು. ಈ ವೇಳೆ ಡೆಪ್ಯೂಟಿ ಆರ್‌ಎಫ್‌ಒ ದೀಪಕ್‌ ಜನರಿಗೆ ಅಡ್ಡಲಾಗಿ ನಿಂತು ಕರಡಿಯನ್ನು ಎದುರಿಸಿದ್ದರು. ಹಾಗೊಂದು ವೇಳೆ ದೀಪಕ್‌ ಕರಡಿಯನ್ನು ಎದುರಿಸದಿದ್ದರೇ ಅದು ಜನರ ಮೇಲೆ ಬೀಭತ್ಸ ದಾಳಿ ನಡೆಸುತ್ತಿತ್ತು. ಕೈಯಲ್ಲಿ ದೊಣ್ಣೆ ಹಿಡಿದಿದ್ದ ದೀಪಕ್‌ರ ಕೈಗೆ ಕರಡಿ ಬಾಯಿ ಹಾಕಿದೆ. ಅದರ ನಡುವೆಯು ದೈರ್ಯಗುಂದ ದೀಪಕ್‌ ಕರಡಿಯನ್ನ ದೊಣ್ಣೆಯಿಂದ ಹೊಡೆದು ಓಡಿಸುತ್ತಾ, ಜೋರಾಗಿ ಕೂಗಿ ಸದ್ದು ಮಾಡಿದ್ದಾರೆ. ಹೆದರಿದ ಕರಡಿ ಮತ್ತೊಂದು ಕಡೆಗೆ ಓಡಿದೆ. ಈ ದೃಶ್ಯ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಹೀಗೆ ನಡೆದ ಕರಡಿ ದಾಳಿ ಬೆನ್ನಲ್ಲೆ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರು ಹೋಗುವರೆಗೂ ಕಾಯಲು ನಿರ್ದರಿಸಿದ್ದರು. ಕರಡಿ ಆತಂಕಗೊಂಡಿದ್ದು, ಅದಾಗಿಯೇ ಕಾಡಿಗೆ ಹೋಗುವಷ್ಟು ಜಾಗ ಬಿಟ್ಟು ಉಳಿದೆಡೆ ಬಲೆಗಳನ್ನ ಹಾಕಲಾಯ್ತು. ಆ ಬಳಿಕ ಕಾರ್ಯಾಚರಣೆಯನ್ನು ಕೇವಲ ನಿಗಾ ವಹಿಸುವುದಕ್ಕೆ ಸೀಮಿತವಾಗಿಸಲಾಯ್ತು. ಅಂತಿಮವಾಗಿ ಕತ್ತಲಾಗುವ ಹೊತ್ತಿಗೆ ಕರಡಿ ಕಾಡಿನತ್ತ ಹೆಜ್ಜೆ ಹಾಕಲು ಆರಂಭಿಸಿತು. ಅದೇ ಹೊತ್ತಿಗೆ ಇನ್ನೊಂದಿಷ್ಟು ಗರ್ನಲ್‌ ಬಳಸಿ ಅಕ್ಕಪಕ್ಕದ ತೋಟದೊಳಗೆ ಕರಡಿ ಹೋಗದಂತೆ ಎಚ್ಚರಿಕೆ ವಹಿಸಿದ ಸಿಬ್ಬಂದಿ ಅಂತಿಮವಾಗಿ ಅದು ತುಸು ದೂರ ಕಾಡಿನೊಳಗೆ ಹೋಗುವಂತೆ ನೋಡಿಕೊಂಡು ವಾಪಸ್‌ ಆದರು. 

A bear was successfully driven back into the forest by the forest department staff in Isur village, Shikaripura taluk, Shivamogga district. The bear had appeared near the Veerabhadreshwara temple and was spotted by the forest department staff. The staff arrived and tried to drive the bear back to the forest. However, the bear charged