ಲಾಕಪ್‌ನಲ್ಲಿ ಮಟ್ಕಾ ಆರೋಪಿ ಸಾವು | ಚನ್ನಗಿರಿ ಪೊಲೀಸ್‌ ಠಾಣೆ ಮೇಲೆ ಮಾಬ್‌ ಅಟ್ಯಾಕ್‌ |

A man named Adil died in police custody in Channagiri police station yesterday, leading to a mob attack on the station.

ಲಾಕಪ್‌ನಲ್ಲಿ ಮಟ್ಕಾ ಆರೋಪಿ ಸಾವು | ಚನ್ನಗಿರಿ ಪೊಲೀಸ್‌ ಠಾಣೆ ಮೇಲೆ ಮಾಬ್‌ ಅಟ್ಯಾಕ್‌ |
Channagiri police station

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸ್‌ ಸ್ಟೇಷನ್‌ನಲ್ಲಿ ನಿನ್ನೆ ಈ ಹಿಂದೆ ಬೆಂಗಳೂರು ಕೆಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದಂತಹ ಘಟನೆ ಮಾದರಿಯ ಸನ್ನಿವೇಶ ಸಂಭವಿಸಿತ್ತು. ವ್ಯಕ್ತಿಯೊಬ್ಬ ಪೊಲೀಸ್‌ ವಶದಲ್ಲಿ ಇದ್ಧಾಗ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ 

ಠಾಣೆಗೆ ಮುತ್ತಿಗೆ ಹಾಕಿದ ಗುಂಪು ಸ್ಟೇಷನ್‌ ಮೇಲೆ ಕಲ್ಲೂತೂರಾಟ ಮಾಡಿದೆ, ಜೀಪ್‌ ಧ್ವಂಸಗೊಳಿಸಿ ಠಾಣೆಯಲ್ಲಿದ್ದ ವಾಹನಗಳನ್ನ ಧ್ವಂಸಗೊಳಿಸಿದೆ. ಅಲ್ಲದೆ ಧ್ವಜಸ್ತಂಭವನ್ನು ಹಾನಿಮಾಡಿದೆ. ಪೊಲೀಸ್‌ ಸಿಬ್ಬಂದಿಗೆ ಹಲ್ಲೆ ಮಾಡಿರುವ ಆರೋಪ ಸಹ ಕೇಳಿಬಂದಿದ್ದು, ಪೊಲೀಸರಿಗೆ ಗಾಯಗಳಾಗಿವೆ. 

ನಡೆದ ಘಟನೆ ವಿವರ ನೋಡುವುದಾದರೆ, ನಿನ್ನೆ ಚನ್ನಗಿರಿ ಪೊಲೀಸ್‌ ಠಾಣೆ ಪೊಲೀಸರು ಓಸಿ ಮಟ್ಕಾ ಆಡಿಸುತ್ತಿದ್ದ ಆರೋಪದ ಅಡಿಯಲ್ಲಿ ಓರ್ವನನ್ನ ಅರೆಸ್ಟ್‌ ಮಾಡಿದ್ದರು, ಆತನ ಬಂಧನ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಆತ ಲೋ ಬಿಪಿಯಾಗಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಆತನನ್ನ ಆಸ್ಪತ್ರೆಗೆ ರವಾನೆ ಮಾಡಲಾಯ್ತಾದರೂ ಅಲ್ಲಿ ಆತ ಸಾವನ್ನಪ್ಪಿದ್ದಾನೆ. ಇದು ಪೊಲೀಸ್‌ ವರ್ಷನ್.‌ 

ಆರೋಪಿಯನ್ನು ಅರೆಸ್ಟ್‌ ಮಾಡಿದ ಪೊಲೀಸರು ಠಾಣೆಯಲ್ಲಿ ಆತನ ಮೇಲೆ ಹಲ್ಲೆ ಮಾಡಿದ್ದು, ಪೊಲೀಸರ ಹಲ್ಲೆಯಿಂದಲೇ ಲಾಕಪ್‌ನಲ್ಲಿ ಆತ ಸಾವನ್ನಪ್ಪಿದ್ದಾನೆ. ಇದು ಪೊಲೀಸರ ದೌರ್ಜನ್ಯದಿಂದ ನಡೆದ ಘಟನೆ ಎಂಬುದು ಮೃತ ಆದಿಲ್‌ ಸಂಬಂಧಿಕರ ಆರೋಪ. 

ಈ ಎರಡು ವಾದಗಳ ಅಡಿಯಲ್ಲಿ ಮೃತ ಆದಿಲ್‌ ಸಂಬಂಧಿಕರು ಹಾಗೂ ಡಿವೈಎಸ್‌ಪಿ ಪ್ರಶಾಂತ್‌ ಚನ್ನಗಿರಿ ಆಸ್ಪತ್ರೆ ಹಾಗೂ ಚನ್ನಗಿರಿ ಪೊಲೀಸ್‌ ಸ್ಟೇಷನ್‌ ಸಮೀಪ ಮಾತುಕತೆ ನಡೆಸಿದ್ದಾರೆ. ಈ ವೇಳ ವಾಗ್ವಾದವೂ ನಡೆದಿದೆ. ಒಂದು ಹಂತದಲ್ಲಿ ಆದಿಲ್‌ನ ಸಂಬಂಧಿಕರು ಹಿರಿಯ ಅಧಿಕಾರಿಗಳ ಮನವೊಲಿಕೆಗೆ ಅಸ್ತು ಎಂದಿದ್ದರು. ಈ ನಡುವೆ ಇನ್ನೊಂದು ದೊಡ್ಡ ಗುಂಪು ಠಾಣೆಯ ಮೇಲೆ ದಾಳಿ ಮಾಡಿ ಬೆರಳಣಿಕೆಯಷ್ಟಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯು ಹಲ್ಲೆ ನಡೆಸಿದ್ದಾರೆ. ಇಡೀ ಪ್ರಕರಣ ಅದಾಗಲೇ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಆರಕ್ಷಕ ಠಾಣೆ ಮೇಲೆ ದಾಳಿ ಮಾಡಿದವರ ಬಂಧನಕ್ಕೆ ಒತ್ತಾಯ ಕೇಳಿಬರುತ್ತಿದೆ. 



A man named Adil died in police custody in Channagiri police station yesterday, leading to a mob attack on the station. The police claim Adil fell ill while being arrested for running an illegal gambling operation and died in the hospital. Adil's relatives allege he was beaten to death by the police.