Shikaripura/ ಶಿಕಾರಿಪುರದಲ್ಲಿ ನಡೆದ ಘಟನೆಯ ಹಿಂದಿದ್ಯಾ ರಾಜಕಾರಣ!

Prohibitory orders imposed in Shikaripura/Shikaripura The politics behind the incident!

Shikaripura/  ಶಿಕಾರಿಪುರದಲ್ಲಿ ನಡೆದ ಘಟನೆಯ ಹಿಂದಿದ್ಯಾ ರಾಜಕಾರಣ!
Shikaripura/ ಶಿಕಾರಿಪುರದಲ್ಲಿ ನಿಷೇದಾಜ್ಞೆ ಜಾರಿ! ಘಟನೆಯ ಹಿಂದಿದ್ಯಾ ರಾಜಕಾರಣ!

ಶಿಕಾರಿಪುರದಲ್ಲಿರುವ ಬಿಎಸ್​.ಯಡಿಯೂರಪ್ಪನವರ ನಿವಾಸದ ಮೇಲೆ ಬಂಜಾರ ಸಮುದಾಯದ ಉದ್ವಿಗ್ನ ಗುಂಪು ಕಲ್ಲುತೂರಾಟ ನಡೆಸಿದ ಬೆನ್ನಲ್ಲೆ ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಎಸ್​ಪಿ ಮಿಥುನ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಿಷೆದಾಜ್ಞೆ ಜಾರಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಅಂಬೇಡ್ಕರ್​ ಸರ್ಕಲ್​ ನಲ್ಲಿ ನಡೆಯುತ್ತಿದ್ದ ಬಂಜಾರ ಸಮುದಾಯದ ಪ್ರತಿಭಟನೆಯು, ನೇರವಾಗಿ ಬಿಎಸ್​ವೈ ನಿವಾಸದತ್ತ ತಿರುಗಿತ್ತು. ಪ್ರತಿಭಟನೆ ಇಂತಹದ್ದೊಂದು ತಿರುವು ಪಡೆದುಕೊಳ್ಳುತ್ತದೆ ಎಂಬ ಸುಳಿವು ಪೊಲೀಸರಿಗೂ ಸಿಕ್ಕಿರಲಿಲ್ಲ.

ಬಂದೋಬಸ್ತ್​ಗಿದ್ದ ಪೊಲೀಸರ ಸಂಖ್ಯೆಯು ಸಹ ಕಡಿಮೆಯಿತ್ತು. ಹೀಗಾಗಿ ಪ್ರತಿಭಟನಾಕಾರರು  ಒಳ ಮೀಸಲಾತಿ ಪರಿಷ್ಕರಣೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿ ನೇರವಾಗಿ ಬಿಎಸ್​ ಯಡಿಯೂರಪ್ಪನವರ ಮನೆಯ ಬಳಿಗೆ ದೌಡಾಯಿಸಿದ್ರು. ಈ ವೇಳೆ  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಬಿವೈ ವಿಜಯೇಂದ್ರ ಹಾಗೂ ವಿವಿಧ ಮುಖಂಡರ ಭಾವಚಿತ್ರ  ಸುಟ್ಟು ಆಕ್ರೋಶವನ್ನು ಹೊರಹಾಕಲಾಗಿದೆ. ನೂತನವಾಗಿ ಪರಿಷ್ಕರಿಸಿರುವ ಒಳ ಮೀಸಲಾತಿ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆಯ ಮುಂದೆ ನಡೆದಿದ್ದೇನು?

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಘೋಷಣೆ ಕೂಗಿದ ಜನರು ಬಿಎಸ್​​ವೈ ಮನೆಗೆ ಕಲ್ಲು ತೂರಿದ್ದಾರೆ. ಅಲ್ಲದೆ, ಮತದಾರರಿಗೆ ನೀಡಲು ತಂದಿದ್ದ ಸೀರೆಗಳನ್ನು ಬೆಂಕಿಗೆ ಹಾಕಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಆಕ್ರೋಶದಲ್ಲಿ ಪರಿಸ್ಥಿತಿಯನ್ನು ಪೊಲೀಸರು ಸಹ ಕೆಲಹೊತ್ತು ನಿಯಂತ್ರಿಸಲು ಸಾದ್ಯವಾಗಲಿಲ್ಲ.

ಬಳಿಕ ಪೊಲೀಸರು ಹೆಚ್ಚುವರಿ ಪೊಲೀಸರುನ್ನ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲದೆ ಲಾಠಿ ಚಾರ್ಜ್​ ನಡೆಸಿದ್ದಾರೆ. ಲಾಠಿ ಚಾರ್ಜ್​ ವೇಳೇ ಆಕ್ರೋಶಿತ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿದೆ. ಪರಿಣಾಮ ಕೆಲ ಪೊಲೀಸರಿಗೂ ಗಾಯಗಳಾಗಿವೆ. ಲಾಠಿ ಚಾರ್ಜ್​ನಲ್ಲಿ ಕೆಲವು ಜನರಿಗೂ ಪೆಟ್ಟು ಬಿದ್ದಿದೆ. ಸದ್ಯ ಪರಿಸ್ಥಿತಿ ತಿಳಿಯಾಗುತ್ತಿದ್ದು, ಸ್ತಳಕ್ಕೆ ಹೆಚ್ಚುವರಿ ಪೊಲೀಸ್ ತುಕಡಿಗಳನ್ನ ರವಾನಿಸಲಾಗಿದ್ದು ಉನ್ನತ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. 

ಇನ್ನೂ ಘಟನೆಯ ಹಿಂದೆ ರಾಜಕಾರಣದ ಕೈವಾಡ ಇದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಸಂಬಂಧ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್​ ನಾಯ್ಕ್​ರವರು ಇದು ಪ್ರತಿಪಕ್ಷ ಕಾಂಗ್ರೆಸ್​ನವರ ಕುಮ್ಮಕ್ಕಿನಿಂದ ನಡೆದಿರಬಹುದಾದ ಕೃತ್ಯ. ಎಲೆಕ್ಷನ್​ ಸಂದರ್ಭದಲ್ಲಿ ಜನರನ್ನ ದಾರಿ ತಪ್ಪಿಸಲಾಗುತ್ತಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. 

ಇನ್ನೊಂದೆಡೆ ಇವತ್ತು ಪ್ರತಿಭಟನೆ ನಡೆಸ್ತಿದ್ದ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ಮನವಿಯನ್ನು ಸ್ವಿಕರಿಸಲು ಅವಕಾಶ ಕೊಡಲಿಲ್ಲ, ಅಲ್ಲಿನ ತಹಶೀಲ್ದಾರ್​ರವರು ಮನವಿ ಸ್ವೀಕರಿಸಿದೇ, ಗೇಟು ಹಾಕಿಸಿದ್ರು. ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮನವಿಯನ್ನ ಸ್ವೀಕರಿಸಿದ್ದರೇ ಏನು ಸಹ ಆಗುತ್ತಿರಲಿಲ್ಲ. ಆದರೆ ಮನವಿ ಸ್ವೀಕರಿಸುವ ಬದಲಾಗಿ ಶಿಕಾರಿಪುರದ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಸಮುದಾಯದವರು ಪಕ್ಕದಲ್ಲಿಯೇ ಇರುವ ಬಿಎಸ್​ವೈರವರ ಮನೆಯತ್ತ ತೆರಳಿದರು, ಅಲ್ಲಿ ಮಾರ್ಗಮಧ್ಯೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಬಂಜಾರ ಸಮುದಾಯದ ಮುಖಂಡ ಗಿರೀಶ್​ ರವರು ಆರೋಪಿಸಿದ್ದಾರೆ. 

ಸುದ್ದಿ ಅಪ್​ಡೇಟ್ 

ಇನ್ನೂ ಶಿಕಾರಿಪುರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂಬ ಮಾಹಿತಿಯ ಬಗ್ಗೆ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ಸ್ಪಷ್ಟನೆ ನೀಡಿದ್ದು, ಸ್ಥಳದಲ್ಲಿ 144 ಸೆಕ್ಷನ್ ವಿಧಿಸಲಾಗಿಲ್ಲ ಎಂದು ಮಾಧ್ಯಮ ಸಂದೇಶ ರವಾನಿಸಿದ್ದಾರೆ. 

Read/shikaripura / ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಬಿಎಸ್​ವೈ ಮನೆಗೆ ಕಲ್ಲು ತೂರಾಟ, ಉಗ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

Read / ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ