Kagodu Thimmappa /ಬೇಳೂರು ಗೋಪಾಲಕೃಷ್ಣರಿಗೆ ಜೈ ಎಂದು ಬಿಡಿ ಎಂದರಾ ಕಾಗೋಡು ತಿಮ್ಮಪ್ಪ! ​ ಬಂಡಾಯಕ್ಕೆ ಪುಲ್​ಸ್ಟಾಪ್ ಇಟ್ಟರಾ ಹಿರಿಯ ನಾಯಕ

Kagodu Thimmappa urges party members to make Belur Gopalakrishna win

Kagodu Thimmappa /ಬೇಳೂರು ಗೋಪಾಲಕೃಷ್ಣರಿಗೆ ಜೈ ಎಂದು ಬಿಡಿ ಎಂದರಾ ಕಾಗೋಡು ತಿಮ್ಮಪ್ಪ! ​ ಬಂಡಾಯಕ್ಕೆ ಪುಲ್​ಸ್ಟಾಪ್ ಇಟ್ಟರಾ ಹಿರಿಯ ನಾಯಕ
Kagodu Thimmappa /ಬೇಳೂರು ಗೋಪಾಲಕೃಷ್ಣರಿಗೆ ಜೈ ಎಂದು ಬಿಡಿ ಎಂದರಾ ಕಾಗೋಡು ತಿಮ್ಮಪ್ಪ! ​ ಬಂಡಾಯಕ್ಕೆ ಪುಲ್​ಸ್ಟಾಪ್ ಇಟ್ಟರಾ ಹಿರಿಯ ನಾಯಕ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ರಿಗೆ (belur gopalakrishna) ಕಾಂಗ್ರೆಸ್​ ಕ್ಯಾಂಡಿಡೇಟ್ಸ್​​ನ ಮೊದಲ ಲಿಸ್ಟ್​ನಲ್ಲಿ (congres candidates list) ಟಿಕೆಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೆ ಸಾಗರ ಕಾಂಗ್ರೆಸ್​ನಲ್ಲಿ ಭಾರೀ ಬಂಡಾಯವೇ ಏಳಲಿದೆ ಎನ್ನಲಾಗಿತ್ತು. ಪೂರಕವಾಗಿ ಹುನಗೋಡು ರತ್ನಾಕರ್​ರವರು ಶಿವಮೊಗ್ಗದ ಪ್ರೆಸ್ಟ್ ಟ್ರಸ್ಟ್​ನಲ್ಲಿ ಸುದ್ದಿಗೋಷ್ಟಿ ನಡೆಸಿ, ಕಾಗೋಡು ತಿಮ್ಮಪ್ಪರವರನ್ನ (kagodu thimmappa,) ಪರಿಗಣಿಸದೇ ಟಿಕೆಟ್​ನ್ನ ಬೇಳೂರುರವರ ಕೈಗಿಟ್ಟಿರುವುದು ಅಕ್ಷಮ್ಯ ಎಂದಿದ್ದರು. ಇದರ ನಡುವೆ ಬಂಡಾಯ ಸಾರಲು ಹೊರಟವರಿಗೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರೇ ಶಾಕ್ ಕೊಟ್ಟಿದ್ದಾರೆ. 

ತಮ್ಮ ದೊಡ್ಡ ಬಳಗದೊಂದಿಗೆ ಬೆಂಗಳೂರಿಗೆ ತೆರಳಿ ಕೆಪಿಸಿಸಿ ನಾಯಕರನ್ನ  ಭೇಟಿಮಾಡಿದ್ದ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರು, ಹಂಗಲ್ಲಾ ಚರ್ಚೆ ಮಾಡದೇನೆ, ಟಿಕೆಟ್ ಇತ್ಯರ್ಥ ಮಾಡಬೇಡಿ ಎಂದು ಕಾಂಗ್ರೆಸ್ ವರಿಷ್ಟರನ್ನ ಎಚ್ಚರಿಸಿದ್ದರು.  ತಮ್ಮ ಮಗಳಿಗೆ ಟಿಕೆಟ್ ನೀಡಿ ಎಂದು ಮನವಿಯನ್ನು ಜೊತೆಗಿಟ್ಟಿದ್ದರು. ಆದಾಗ್ಯು ರಾಜ್ಯ ಕಾಂಗ್ರೆಸ್ ಬೇಳೂರು ಗೋಪಾಲಕೃಷ್ಣರನ್ನೆ ಪಕ್ಷದ ಅಭ್ಯರ್ಥಿಯನ್ನಾಗಿ ಗುರುತಿಸಿತ್ತು. ಇದು ಕಾಗೋಡು ತಿಮ್ಮಪ್ಪನವರ ಬೆಂಬಲಿಗರ ಅಂತರಾಳದಲ್ಲಿ ರೋಷಾಗ್ನಿಯ ಕಿಡಿಯಾಗಿ ಸಿಡಿಯುತ್ತಿದೆ. ಕಾಗೋಡು ತಿಮ್ಮಪ್ಪರವರ ಬೆರಳ ಸೂಚನೆ ಕಾಯುತ್ತಿದ್ದ ಬೆಂಬಲಿಗರು ಯಾವುದೇ ಕ್ಷಣದಲ್ಲಿಯು ಬಂಡಾಯದ ಭಾವುಟ ಹಾರಿಸಲು ಸಿದ್ಧವಾಗಿದ್ದರು. ಅಷ್ಟರಲ್ಲಿ ಹಿರಿಯರು ಬೇಳೂರಿಗೆ ಜೈ ಎಂದು ಬಿಡಿ ಎಂದಿದ್ದಾರೆ. 

ನಿಜ, ಕಾಗೋಡು ತಿಮ್ಮಪ್ಪನವರು ಖುದ್ದು ಬೇಳೂರು ಗೋಪಾಲಕೃಷ್ಣರಿಗೆ ವೋಟು ಹಾಕಿ, ಅವರಿಗಾಗಿ ದುಡಿಯಿರಿ, ಅವರನ್ನ ಗೆಲ್ಲಿಸಿಕೊಂಡು ಬನ್ನಿ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ಧಾರೆ. ಕಾಂಗ್ರೆಸ್​ ಗೆಲ್ಲಬೇಕು ಎಂಬುದು ನನ್ನ ಅಭಿಲಾಷೆ, ಹಾಗಾಗಿ ಬೇಳೂರು ಗೋಪಾಲಕೃಷ್ಣರನ್ನ ಗೆಲ್ಲಿಸುವ ಮೂಲಕ ಕಾಂಗ್ರೆಸ್​ನ್ನ ಗೆಲ್ಲಿಸಿ ಎಂದು ಕರೆಕೊಟ್ಟಿದ್ದಾರೆ. ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಂತ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ  ಮಾಜಿ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಈ ಮಾತನ್ನ ಹೇಳಿರುವುದು ಕುತೂಹಲ ಮೂಡಿಸಿದೆ. 

ಕಾಂಗ್ರೆಸ್​ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡ್ತಾ, ಜನರಿಗೆ ಸಿಗಬೇಕಾದ ಸೌಲಭ್ಯ ಕೊಡದಿದ್ದರೇ ಆಡಳಿತ ವ್ಯವಸ್ಥೆಯಲ್ಲಿ ಆಡಳಿತ ಮಾಡೋದಕ್ಕೆ ಯೋಗ್ಯರಾಗೋದಿಲ್ಲ. ನಾವು ಇದಕ್ಕೆ ಭದ್ದರಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನ್ನ ಗೆಲ್ಲಿಸಬೇಕು, ಬೇಳೂರು ಗೋಪಾಲಕೃಷ್ಣರನ್ನ ಗೆಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ನಾವು ಕೂಡ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ. ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣರನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅವರನ್ನ ಗೆಲ್ಲಿಸಬೇಕು ಇದರ ಅರ್ಥ ಕಾಂಗ್ರೆಸ್​ನ್ನ ಗೆಲ್ಲಿಸಬೇಕು ಎಂದಿದ್ದಾರೆ.. ಈ ಸಾರಿಯ ಚುನಾವಣೆಯಲ್ಲಿ ಪಕ್ಷವನ್ನಗೆಲ್ಲಿಸುವ ಹೋರಾಟಕ್ಕೆ ಪ್ರತಿಯೊಬ್ಬರು ಸಮರ್ಥರಾಗಿ ಕೆಲಸ ಮಾಡಬೇಕು, ನಾವು ಮಾಡುವ ಸಣ್ಣಪುಟ್ಟ ಕೆಲಸವನ್ನು ದೊಡ್ಡದು ಮಾಡಿ,, ಪಕ್ಷವನ್ನು ಸೋಲಿಸುವ ಕೆಲಸ ಮಾಡಬಾರದು. ನಿಮ್ಮ ಪಾದಕ್ಕೆ ನಮಸ್ಕಾರ ಮಾಡುತ್ತೇನೆ, ಇವತ್ತು ಕಾಂಗ್ರೆಸ್​ ಪಕ್ಷ ಸೋತಿದ್ದರಿಂದ ಈ ಭಾಗದಲ್ಲಿ ಎಷ್ಟು ಕೆಲಸ ನಿಂತಿದೆ ಎಂಬುದಕ್ಕೆ ನೀವೆ ಸಾಕ್ಷಿಯಾಗಿದ್ದೀರಿ. ಸಾರಾಯಿ ಅಂಗಡಿ ಇಡೋರನ್ನ, ದುಡ್ಡುಮಾಡೋರನ್ನ ಆಯ್ಕೆ ಮಾಡಿದರೆ, ಅವರು ಗೆದ್ದು ಬಂದು ಅದನ್ನೆ ಮಾಡುತ್ತಾರೆ ಎಂದು ಹಾಲಿ ಶಾಸಕರನ್ನ ಟೀಕಿಸಿದ ಕಾಗೋಡು ತಿಮ್ಮಪ್ಪ ತಮ್ಮ ಮಾತಿನುದ್ದಕ್ಕೂ ಪಕ್ಷ ಗೆಲ್ಲಿಸಿ ಎಂದಿದ್ದಾರೆ. 

ಕಾಗೋಡು ತಿಮ್ಮಪ್ಪನವರು ತಮ್ಮ ಮಗಳಿಗೆ ಟಿಕೆಟ್ ಕೇಳಿದ್ದು ಸರಿಯೇ ಎಂಬ ವಿಚಾರವೇ ಸಾಗರದಲ್ಲಿ ದೊಡ್ಡಮಟ್ಟಿಗೆ ಚರ್ಚೆ ಹುಟ್ಟುಹಾಕಿತ್ತು. ಆದಾಗ್ಯು ಟಿಕೆಟ್ ಬೇಳೂರು ಗೋಪಾಲಕೃಷ್ಣರ ಪಾಲಾಗುತ್ತಿದ್ದಂತೆ ಎದ್ದ ಬಂಡಾಯಕ್ಕೆ ಪೂರಕವಾಗಿ ಅಸಮಾಧಾನದ ಮಾತನ್ನಾಡದ ಕಾಗೋಡು ತಿಮ್ಮಪ್ಪ, ತಪ್ಪುಗಳನ್ನ ದೊಡ್ಡದು ಮಾಡಬೇಡಿ ಎಂದು ಬುದ್ದಿವಾದವನ್ನು ಹೇಳಿದ್ದಾರೆ. ಪಕ್ಷವನ್ನು ಸೋಲಿಸುವ ಕೆಲಸ ಮಾಡಬೇಡಿ ಎಂದು ಸಲಹೆಯನ್ನು ನೀಡಿದ್ದಾರೆ. ಗೋಪಾಲಕೃಷ್ಣ ಬೇಳೂರನ್ನ ಗೆಲ್ಲಿಸಿಕೊಂಡು ಬನ್ನಿ ಎಂದು ಕರೆಯನ್ನು ಸಹ ಕೊಟ್ಟಿದ್ದಾರೆ. ಪರಿಣಾಮ ಸಾಗರ ಕಾಂಗ್ರೆಸ್​ನಲ್ಲಿನ ಅಸಮಾಧಾನ ಹೊಗೆಯಾಡುತ್ತಲೇ, ಆರಿದಂತಾಗಿದೆ. 

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, KPCC, Shivamogga, Sagar Assembly Constituency, Sagar Taluk, Constituency, Assembly Elections 2023, Belur Gopalakrishna, Siddaramaiah, DK Shivakumar, Kagodu Thimmappa, Hunagodu Ratnakar, Mallikarjun Hakre, Ravi Kugve, Rajnandini, Congress Party, Congress Leaders, Congress Candidate List ಕೆಪಿಸಿಸಿ, ಶಿವಮೊಗ್ಗ, ಸಾಗರ ವಿಧಾನಸಭಾ ಕ್ಷೇತ್ರ, ಸಾಗರ ತಾಲ್ಲೂಕು, ಕ್ಷೇತ್ರ, ವಿಧಾನಸಭೆ ಚುನಾವಣೆ 2023 , ಬೇಳೂರು ಗೋಪಾಲಕೃಷ್ಣ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕಾಗೋಡು ತಿಮ್ಮಪ್ಪ, ಹುನಗೋಡು ರತ್ನಾಕರ್, ಮಲ್ಲಿಕಾರ್ಜುನ್​ ಹಕ್ರೆ, ರವಿ ಕುಗ್ವೆ, ರಾಜನಂದಿನಿ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಕ್ಯಾಂಡಿಡೇಟ್ ಲಿಸ್ಟ್  congress candidates list,congress first list of candidates,congress releases list of 124 candidates,congress,congress 124 candidates,congress high command,congress candidates for 2023 election,first list of congress candidates,congress candidates,congress candidate list,congress first list,congress ticket list,congress candidates list 2023,karnataka congress,congress ticket aspirantsರಾಜ್ಯ ವಿಧಾನಸಭಾ ಚುನಾವಣೆ, (Karnataka Election 2023) ಕಾಂಗ್ರೆಸ್​ (Congress)  (Candidate List)   (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar).  kagodu thimmappa,kagodu timmappa,kagodu thimmappa news,kagodu thimmappa daughter,kogodu thimmappa,minister kagodu thimmappa, belur gopalakrishna,belur gopalakrishna speech,gopalakrishna,beluru gopalkrishna,beluru gopalakrishna,gopal krishna belur,mla beluru gopalakrishna, ಬೇಳೂರು ಗೋಪಾಲಕೃಷ್ಣ, ಕಾಗೋಡು ತಿಮ್ಮಪ್ಪ, ರಾಜನಂದಿನಿ, ಸಾಗರ ಬ್ಲಾಕ್​ ಕಾಂಗ್ರೆಸ್, ಕಾಂಗ್ರೆಸ್​ ಭಿನ್ನಮತ , ಹುನಗೋಡು ರತ್ನಾಕರ್, ಬಿ.ಜಯಂತ್​, ಸಾಗರ ಕಾಂಗ್ರೆಸ್​ ನ್ಯೂಸ್, Belur Gopalakrishna, Kagodu Thimmappa, Rajnandini, Sagar Block Congress, Congress Dissident, Hunagodu Ratnakar, B. Jayanth, Sagar Congress News,