ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

Kagodu Thimmappa and Belur Gopalakrishna battle it out in KPCC for Sagar ticket

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ!  ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ  ಕಾಗೋಡು  ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ
ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

MALENADUTODAY.COM  |SHIVAMOGGA| #KANNADANEWSWEB

ಟಿಕೆಟ್​...ಟಿಕೆಟ್​.. ಟಿಕೆಟ್.. ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷದ ನಾಯಕರು ಟಿಕೆಟ್ ಗಾಗಿ  ಹೋರಾಟ ನಡೆಸ್ತಿದ್ದಾರೆ. ಚುನಾವಣೆ ಘೋಷಣೆ ಹೊತ್ತಿನಲ್ಲಿಯು ಕೈ ಪಾಳಯದ ಸಾಗರ ಟಿಕೆಟ್​ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ನಿನ್ನೆ ಬೆಂಗಳೂರಿಗೆ ತೆರಳಿರುವ ಮಾಜಿ ಸಚಿವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ನೇತೃತ್ವದ ತಂಡವೊಂದು, ರಾಜ್ಯ ಕಾಂಗ್ರೆಸ್​ ವರಿಷ್ಟರ ಮುಂದೆ ಮನವಿಯೊಂದನ್ನ ಮುಂದಿಟ್ಟಿದೆ. 

ಮತ್ತೊಮ್ಮೆ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಬಂದಿಳಿಯಲಿದ್ದಾರೆ ನರೇಂದ್ರ ಮೋದಿ! ಹುಬ್ಬಳ್ಳಿ ಬಿಟ್ಟು ಶಿವಮೊಗ್ಗವನ್ನೇ ಆಯ್ಕೆ ಮಾಡಿದ್ದೇಕೆ ಪ್ರಧಾನಿ!?

ಮುಖ್ಯವಾಗಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಟಿಕೆಟ್ ನೀಡಬಾರದು! ಹಾಗೊಂದು ನೀಡುವುದೇ ಆದಲ್ಲಿ ಕಾಗೋಡು ತಿಮ್ಮಪ್ಪ ಸೇರಿದಂತೆ , ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಬೇಕು ಎಂದು ಹಿರಿಯ ನಾಯಕನ ನೇತೃತ್ವದ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖಂಡ ಬಿಕೆ ಹರಿಪ್ರಸಾದ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಮನವಿ ಮಾಡಿದೆ. ಇದರ ಜೊತೆಯಲ್ಲಿ ಸಾಗರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಟಿಕೆಟ್ ನೀಡಬೇಕೆಂದು ದಾಳ ಉದುರಿಸಿದ್ದಾರೆ. 

ಕಾಗೋಡು ತಿಮ್ಮಪ್ಪನವರು ಹೇಳಿದ್ದೇನು? 

ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣರಿಗೆ ಪಕ್ಷದಲ್ಲಿಯೇ ವಿರೋಧವಿದೆ, ಇಷ್ಟು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಾಗಿ ದುಡಿದ ಹಲವಾರು ನಾಯಕರಿದ್ದಾರೆ. ಜಯಂತ್​ರವರಿದ್ದಾರೆ, ಕಲಗೋಡು ರತ್ನಾಕರ್​ರವರಿದ್ದಾರೆ,  ಹುನಗೋಡು ರತ್ನಾಕರ್ ಇದ್ದಾರೆ, ರಾಜನಂದಿನಿಯಿದ್ದಾರೆ. ಹಕ್ರೆ ಮಲ್ಲಿಕಾರ್ಜುನ್​ರವರಿದ್ದಾರೆ. ಹೀಗೆ ಹಲವಾರು ನಾಯಕರು ಬೇಳೂರುರವರಿಗಿಂತಲೂ ಮೊದಲೇ ಪಕ್ಷದಲ್ಲಿ ಸೇವೆ ಸಲ್ಲಿಸ್ತಿದ್ದಾರೆ. ಇನ್ನೂ ಬೇಳೂರು ಗೋಪಾಲಕೃಷ್ಣರವರು ಪಾರ್ಟಿ ಕಮಿಟ್​ಮೆಂಟ್​ ತೋರುತ್ತಿಲ್ಲ, ಅವರ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ಅಸಮಾಧಾನವಿದೆ ಎಂದು ಕಾಗೋಡು ತಿಮ್ಮಪ್ಪನವರು ಕಾಂಗ್ರೆಸ್​ ಮುಖಂಡರಿಗೆ ತಿಳಿಸಿದ್ದಾರೆ. ಇದರ ಜೊತೆಯಲ್ಲಿ ತಾನೊಬ್ಬ ಸೀನಿಯರ್ ನಾಯಕ ತಮ್ಮ ಗಮನಕ್ಕೆ ತರದೆ ಟಿಕೆಟ್ ನಿರ್ಧಾರ ಸಲ್ಲದು ಎಂದು ಪರೋಕ್ಷೆ ಎಚ್ಚರಿಕೆಯನ್ನು ನಾಯಕರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. 

 ಬಿಜೆಪಿಯಲ್ಲಿ  ಹಾಲಪ್ಪ ಹಠಾವೋ,  ಬೇಳೂರಿಂದ ಕಾಂಗ್ರೆಸ್​  ಬಚಾವೋ

ಸದ್ಯ ಕಾಗೋಡು ತಿಮ್ಮಪ್ಪನವರ ಟೀಂನ ಈ ಬೆಂಗಳೂರು ಪ್ರಯಾಣ , ಇತ್ತ ಬೇಳೂರು ಗೋಪಾಲಕೃಷ್ಣರ ಬಳಗದಲ್ಲಿ ತುಸು ಆತಂಕ ಮೂಡಿಸಿದೆ. ಆದಾಗ್ಯು  ಈ ವಯಸ್ಸಿನಲ್ಲಿ ನಮ್ಮ ಮಗಳಿಗೆ ಟಿಕೆಟ್ ನೀಡುವಂತೆ ಹೋರಾಟ ಮಾಡುತ್ತಿರುವುದು ರಾಜಕೀಯ ದುರಂತ ಎಂದು ಬೇಳೂರು ಗೋಪಾಲಕೃಷ್ಣರ ಆಪ್ತರು ಟೀಕಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಗೋಡು ತಿಮ್ಮಪ್ಪನವರ ಬೆಂಬಲಕ್ಕೆ ನಿಂತವರು ಟಿಕೆಟ್ ಕೇಳುವ ಹಕ್ಕು ಎಲ್ಲರಿಗೂ ಇದೆ , ಅದರಲ್ಲಿ ಯಾವ ತಪ್ಪಿಲ್ಲ ಎನ್ನುತ್ತಿದ್ದಾರೆ. 

ಅತ್ತ ಬಿಜೆಪಿಯಲ್ಲಿ ಹರತಾಳು ಹಾಲಪ್ಪರಿಗೆ ಟಿಕೆಟ್ ಕೊಡಬಾರದು ಎಂದು ಹಿರಿಯ ಬಿಜೆಪಿಗರು ಹಾಲಪ್ಪ ಹಠಾವೋ ಅನ್ನುತ್ತಿದ್ದರೇ, ಇತ್ತ ಕಾಂಗ್ರೆಸ್​ನಲ್ಲಿ ಬೇಳೂರಿಂದ ಬಚಾವೋ ಚಳವಳಿಯನ್ನ ಕಾಗೋಡು ತಿಮ್ಮಪ್ಪ ಕೈಗೊಂಡತಿದೆ. ಅಂತಿಮವಾಗಿ ಮಾವ-ಅಳಿಯನ ನಡುವಿನ ಈ ಟಿಕೆಟ್ ಸಮರದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಇದೆಲ್ಲದರ ನಡುವೆ ದುಡ್ಡಿದ್ದವರಿಗೆ ಮಾನ್ಯತೆ ಕೊಡುತ್ತಾರೆ ಎಂದು ಇತ್ತೀಚೆಗೆ ಕಾಂಗ್ರೆಸ್​ ಬಿಟ್ಟು ಬಂಡಾಯದ ಹಿಡಿದ ತೀ..ನಾ ಶ್ರೀನಿವಾಸ್ ಮಾತು ಸಹ ಸದ್ಯ ಸಾಗರದಲ್ಲಿ ಸದ್ದು ಮಾಡುತ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamogga news,shivamogga,shivamogga airport,kannada news live,kannada newsKagodu Thimmappa, Sagar taluk ticket, Sagar assembly constituency, Belur Gopalakrishna, Hakre Mallikarjun Kalagodu Ratnakar, Hunagodu Ratnakar, Rajnandini, Jayanth, BJP, Hartalu Halappa, Siddaramaiah, BK Hariprasad, DK Shivakumar, KPCC president Sagar Taluka Politics, Sagar Taluka News, Sagar Vichara ಕಾಗೋಡು ತಿಮ್ಮಪ್ಪ, ಸಾಗರ ತಾಲ್ಲೂಕಿನ ಟಿಕೆಟ್, ಸಾಗರ ವಿಧಾನಸಭಾ ಕ್ಷೇತ್ರ, ಬೇಳೂರು ಗೋಪಾಲಕೃಷ್ಣ, ಹಕ್ರೆ ಮಲ್ಲಿಕಾರ್ಜನ್ ಕಲಗೋಡು ರತ್ನಾಕರ್, ಹುನಗೋಡು ರತ್ನಾಕರ್, ರಾಜನಂದಿನಿ, ಜಯಂತ್, ಬಿಜೆಪಿ, ಹರತಾಳು ಹಾಲಪ್ಪ, ಸಿದ್ದರಾಮಯ್ಯ, ಬಿಕೆ ಹರೀಪ್ರಸಾದ್, ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ,  ಸಾಗರ ತಾಲ್ಲೂಕು ಪಾಲಿಟಿಕ್ಸ್, ಸಾಗರ ತಾಲ್ಲೂಕು ನ್ಯೂಸ್, ಸಾಗರ ವಿಚಾರ