ಬಿಎಸ್​ವೈ ಮನೆಗೆ ಕಲ್ಲು/ ಮಾಜಿ ಶಾಸಕರ ಕೈವಾಡ/ ಸಂಸದ ರಾಘವೇಂದ್ರರ ಆರೋಪ / ಮೋದಿ ಕಾರ್ಯಕ್ರಮದ ಬಗ್ಗೆ ಹೇಳಿದ್ದೇನು!?

Former MLA's hand in the stone-pelting incident at BSY's house/ MP Raghavendra's allegation/ What did he say about Modi's programme

ಬಿಎಸ್​ವೈ ಮನೆಗೆ ಕಲ್ಲು/ ಮಾಜಿ ಶಾಸಕರ ಕೈವಾಡ/ ಸಂಸದ ರಾಘವೇಂದ್ರರ ಆರೋಪ / ಮೋದಿ ಕಾರ್ಯಕ್ರಮದ ಬಗ್ಗೆ ಹೇಳಿದ್ದೇನು!?

KARNATAKA NEWS/ ONLINE / Malenadu today/ SHIVAMOGGA / Apr 23, 2023


ಹೊಳೆಹೊನ್ನೂರು/ ಶಿವಮೊಗ್ಗ / ಶಿಕಾರಿಪುರ ದಲ್ಲಿರುವ ಮಾಜಿ ಸಿಎಂಬಿಎಸ್​ ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಿದ ಘಟನೆಯಲ್ಲಿ ಮಾಜಿ ಶಾಸಕರ ಕೈವಾಡ ಇದೆ ಎಂದು ಯಾರೊಬ್ಬರ ಹೆಸರನ್ನು ಹೇಳದೇ ಸಂಸದ ಬಿ.ವೈ.ರಾಘವೇಂದ್ರರವರು ಆರೋಪಿಸಿದ್ಧಾರೆ

ಹೊಳೆಹೊನ್ನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,  ಮೀಸಲಾತಿ ವಿಚಾರದಲ್ಲಿ ಯಡಿಯೂರಪ್ಪ ಅವರ ನಿವಾಸ ಮೇಲೆ ಕಲ್ಲು ತೂರಾಟ ನಡೆದಿತ್ತು. 

ಈ ಪ್ರಕರಣದಲ್ಲಿಮಾಜಿ ಶಾಸಕರ ಕೈವಾಡವಿದೆ. ಅವರ ಪಿಎ ಕಾಣಿಸಿದ್ದು, ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ ಎಂದು ಹೆಸರು ಹೇಳದೇ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

ಮೀಸಲಾತಿ ವಿಚಾರದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತ ಬಂದಿದ್ದರು. ಕೆಲವೇ ತಿಂಗಳ ಹಿಂದೆ ಬಿಜೆಪಿ ಸರ್ಕಾರ ಇದಕ್ಕೆ ಅನುಮೋದನೆ ನೀಡಿ, ಯಾವುದೇ ಸಮಾಜಕ್ಕೆ ತೊಂದರೆಯಾಗದ ರೀತಿಯಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ.

ಆದರೆ, ಕಾಂಗ್ರೆಸ್ ಇದನ್ನು ನಮ್ಮ ಸರ್ಕಾರ ಬಂದರೆ ಈ ಮೀಸಲಾತಿಯನ್ನು ಹಿಂದೆ ತೆಗೆದುಕೊಳ್ಳುವುದಾಗಿ ಘೋಷಣೆ ಮಾಡುತ್ತಿದೆ  ಎಂದು ದೂರಿದ್ದಾರೆ. 

ಡಾ. ಬಿ.ಆರ್. ಅಂಬೇಡ್ಕರ್ ಅವರು ಕನಸು ಕಂಡಿದ್ದ ಭಾರತವನ್ನು ವಿಶ್ವಗುರು ಮಾಡುವಲ್ಲಿ ಪ್ರಧಾನಿ ಮೋದಿ ಅವರು ಸಾಕಾರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಆದರೆ ಈ ಹಿಂದಿನ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದಲ್ಲದೇ, ಅವರ ನಿಧನ ನಂತರ ದೆಹಲಿಯಲ್ಲಿ ಸಮಾಧಿ ಮಾಡಲೂ ಸ್ಥಳಾವಕಾಶ ನೀಡದೇ ಅವಮಾನ ಮಾಡಿತ್ತು. 

ಸಂವಿಧಾನ ನೀಡಿದಂತಹ ಮಹಾತ್ಮನಿಗೆ ಭಾರತ ರತ್ನ ನೀಡಲು ಅಟಲ್‌ ಜೀಯವರ ಬಿಜೆಪಿ ಸರ್ಕಾರ ಬರಬೇಕಾಯಿತು. ಅವರು ಲಂಡನ್​ ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಕಾಲೇಜಿನ್ನು ಸುಮಾರು 2800 ಕೋಟಿಗೆ ತೆಗೆದುಕೊಂಡು ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ವರ್ಗದವರಿಗೆ ಉಚಿತ ಉಚಿತ ವಿದ್ಯಾಭ್ಯಾಸ ನೀಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮೋದಿ ಆಗಮನ

ಈ ಬಾರಿ ಚುನಾವಣೆ ಹಿನ್ನೆಲೆ 10 ರಿಂದ 15 ಕ್ಷೇತ್ರಗಳನ್ನು ಒಗ್ಗೂಡಿಸಿ ಮೋದಿ ಅವರ ಕಾರ್ಯಕ್ರಮ ಇರುತ್ತದೆ. ಜಿಲ್ಲೆಯಲ್ಲಿ ಈ ಅದೃಷ್ಟ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಒಲಿಯಬಹುದು. 

ಆದ್ದರಿಂದ ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟು ಬೆಂಬಲಿಸಬೇಕು ಎಂದಿದ್ದಾರೆ.

Malenadutoday.com Social media