ರಾಜ್ಯ ರಾಜಕೀಯದ ಪವರ್ ಸೆಂಟರ್​ ಶಿವಮೊಗ್ಗದಲ್ಲೀಗ ಮಾಸ್​ ಲೀಡರ್​ಗಳಿಲ್ಲ! ಯಾರಾಗ್ತಾರೆ ಮುಂದಿನ ಮಹಾನಾಯಕ!

Shivamogga, the power center of state politics, no longer has mass leaders! Who will be the next great leader?

ರಾಜ್ಯ ರಾಜಕೀಯದ ಪವರ್ ಸೆಂಟರ್​ ಶಿವಮೊಗ್ಗದಲ್ಲೀಗ ಮಾಸ್​ ಲೀಡರ್​ಗಳಿಲ್ಲ! ಯಾರಾಗ್ತಾರೆ ಮುಂದಿನ ಮಹಾನಾಯಕ!

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಶಿವಮೊಗ್ಗ ರಾಜ್ಯ ರಾಜಕೀಯದ ಶಕ್ತಿಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ರಾಜಕೀಯವಾಗಿ ಅನಾಥವಾದಂತ ಸ್ಥಿತಿಗೆ ಬಂದು ತಲುಪಿದೆ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಮಾಸ್ ಲೀಡರ್ ಗಳ ಕೊರತೆ ಎದ್ದು ಕಾಣುತ್ತಿದೆ.

ಸಾರ್ವಜನಿಕರಿಗೆ ಸೂಚನೆ ! ಮೇ 24 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ರಾಜ್ಯದ ಮಾಸ್ ಲೀಡರ್ ಗಳೆಂದೇ ಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಸಾರೆಕೊಪ್ಪ ಬಂಗಾರಪ್ಪ ಹಾಗು ಬಿ.ಎಸ್ .ಯಡಿಯೂರಪ್ಪರ ನಂತರ ಜಿಲ್ಲೆಯಲ್ಲಿ ಅಂತ ಒಬ್ಬ ನಾಯಕ ಉದಯವಾಗಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೇಸ್ ಬಿಜೆಪಿ ಪಕ್ಷಗಳಲ್ಲಿ ಪ್ರಭಾವಿ ಹಿರಿಯ ನಾಯಕರುಗಳೇ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಜಿಲ್ಲೆ ಬಡವಾದಂತೆ ಭಾಸವಾಗುತ್ತಿದೆ.

ಸೊರಬದ ಕುಬಟೂರಿನಲ್ಲಿ ಕೂತು ರಾಜ್ಯ ರಾಜಕೀಯವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಿದ್ದ ಎಸ್ ಬಂಗಾರಪ್ಪ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕರಾಗಿದ್ದರು. ಹಲವು ಪಕ್ಷ ತೊರೆದು ಹಲವು ಪಕ್ಷ ಕಟ್ಟಿದರೂ ಕ್ಷೇತ್ರದ ಜನತೆ ಅವರನ್ನು ಕಿಂದರಜೋಗಿಯಂತೆ ಫಾಲೋ ಮಾಡುತ್ತಿದ್ರು. ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರ ತೊರೆದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗಲೂ ಜನತೆ ಬಂಗಾರಪ್ಪರ ಕೈ ಹಿಡಿದಿದ್ದರು. ಮುಂದೆ ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾದರು.  ರಾಜ್ಯಾದ್ಯಂತ ಮನೆ ಮಾತಾಗಿದ್ದ ಬಂಗಾರಪ್ಪ ಶಿವಮೊಗ್ಗದ ಹೆಮ್ಮೆಯಾಗಿದ್ದರು. 

ಮಲಗಿದ್ದ ವೇಳೆ ಕಚ್ಚಿದ ಹಾವು! ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಯುವತಿ ಸಾವು!

ಅವರ ನಂತರದಲ್ಲಿ ಮಂಚೂಣಿಗೆ ಬಂದು ನಿಂತವರು ಬಿ.ಎಸ್.ಯಡಿಯೂರಪ್ಪ. ಹಲವು ಹೋರಾಟ, ಪ್ರತಿಭಟನೆಗಳಿಂದ ರಾಜಕೀಯ ಉತ್ತುಂಗಕ್ಕೇರಿಂದ ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು. ನಾಲ್ಕು ಬಾರಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪರು ಶಿವಮೊಗ್ಗಕ್ಕೆ ಕಿರೀಟ ಪ್ರಾಯರಾಗಿದ್ದರು. ರಾಜಕೀಯ ವಿಷಯಗಳು ಜನಮಾನಸದಲ್ಲಿ ಮುನ್ನಲೆಗೆ ಬಂದಾಗಲೆಲ್ಲಾ ಜಿಲ್ಲೆಯ ರಾಜಕೀಯ ನಾಯಕರುಳು ಪ್ರಸ್ಥಾಪವಾಗುತ್ತಿದ್ದರು. ನೀವು ಶಿವಮೊಗ್ಗದವರಾ..ಹಾಗಾದ್ರೆ ಬಂಗಾರಪ್ಪ ಯಡಿಯೂರಪ್ಪ ಜಿಲ್ಲೆಯವರು ಎಂದು ಜನರು ಉಬ್ಬೇರುವಂತೆ ಮಾಡುತ್ತಿದ್ರು. 

ಐಎಎಸ್ ಪರೀಕ್ಷೆ ಪಾಸಾದ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಡಿಸಿಎಫ್​ ಪುತ್ರಿ

ಎಸ್. ಬಂಗಾರಪ್ಪ ಯಡಿಯೂರಪ್ಪ ಡಿ.ಹೆಚ್ ಶಂಕರಮೂರ್ತಿ ಕಾಗೋಡು ತಿಮ್ಮಪ್ಪ ಹೆಸರುಗಳು ಚರ್ಚೆಗಳಾಗುತ್ತಿದ್ದವು. ಡಿ.ಹೆಚ್ ಶಂಕರಮೂರ್ತಿ ಸಭಾಪಾತಿಯಾಗಿದ್ದಾಗ ಜಿಲ್ಲೆಗೆ ಹೆಮ್ಮೆ ಯಾಗಿದ್ದರು. ಅವರು ರಾಜಕೀಯ ನಿವೃತ್ತಿ ಘೋಷಣೆ ನಂತರ ಬಿಜೆಪಿಯಿಂದ ಕೆ.ಎಸ್ ಈಶ್ವರಪ್ಪ ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಕಾಂಗ್ರೇಸ್ ನಿಂದ ಕಾಗೋಡು ತಿಮ್ಮಪ್ಪರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ವಿಧಾನಸೌಧ ಪಡೆಸಾಲೆಯಲ್ಲಿ ಇರಬೇಕಾದ ನಾಯಕರುಗಳೆಲ್ಲಾ ಈಗ ನಿವೃತ್ತಿ ಘೋಷಿಸಿರುವುದರಿಂದ ಜಿಲ್ಲೆಯಲ್ಲಿ ಶೂನ್ಯ ಆವರಿಸಿದಂತಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದಿಂದ ಮುನ್ನಲೆಯಲ್ಲಿರುವುದು ಆರಗಾ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ, ಹರತಾಳು ಹಾಲಪ್ಪ ಕುಮಾರ್ ಬಂಗಾರಪ್ಪ, ಬಿ.ವೈ ವಿಜಯೇಂದ್ರ  ಬಿ.ವೈ ರಾಘವೇಂದ್ರ ಶಾರದಾ ಪೂರ್ಯನಾಯಕ್ ಸಂಗಮೇಶ್ ಹೆಸರುಗಳು ರಾಜ್ಯದ ಜನತೆಗೆ ಚಿರಪರಿಚಿತವಾಗಿದೆ. ಇವರುಗಳಲ್ಲಿ ಯಾರು ಜಿಲ್ಲೆಯನ್ನು ರಾಜಕೀಯವಾಗಿ ಶಕ್ತಿಯುತ ಮಾಡುತ್ತಾರೆ ಎಂಬುದು ಕುತುಹಲವಾಗಿದೆ

ಶಿವಮೊಗ್ಗ ಜಿಲ್ಲೆ ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಶಾಸಕರಿಂದ ಪ್ರಮಾಣವಚನ!

ಶಿವಮೊಗ್ಗ/ ನೂತರ ಸರ್ಕಾರ ಅಸ್ತಿತ್ವ ಬಂದ ಬೆನ್ನಲ್ಲೆ, ಮೂರು ದಿನಗಳ ಅಧಿವೇಶನವನ್ನು ಕರೆಯಲಾಗಿದೆ. ಈ ಅಧಿವೇಶನದ ವೇಳೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಎಂಎಲ್​ಎ ಚನ್ನಬಸಪ್ಪರವರು ಆರಗ ಜ್ಞಾನೇಂದ್ರ ಮತ್ತು ಬೇಳೂರು ಗೋಪಾಲಕೃಷ್ಣರವರು ಪ್ರಮಾಣ ವಚನ ಪಡೆದಿದ್ದರು. ಇವತ್ತು 

ಸಂವಿಧಾನ ಮತ್ತು ದೇವರ ಹೆಸರಿನಲ್ಲಿ ವಿಧಾನಸೌಧದಲ್ಲಿ ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರ ಸಮ್ಮುಖದಲ್ಲಿ ಶಾಸಕರಾಗಿ ಶಾರದಾ ಪೂರ್ಯಾ ನಾಯ್ಕ್ ಪ್ರಮಾಣ ಸ್ವೀಕರಿಸಿದ್ಧಾರೆ. ಈ ವಿಷಯ ತಿಳಿಸಿರುವ ಅವರು, ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ. ನುಡಿದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡುತ್ತೇನೆ ಎಂದಿದ್ಧಾರೆ. ಇನ್ನೊಂದೆಡೆ ಸೊರಬ ಶಾಸಕ ಮಧು ಬಂಗಾರಪ್ಪರವರು ಸಹ ಹಂಗಾಮಿ ಸ್ಪೀಕರ್ ಆರ್​ವಿ ದೇಶಪಾಂಡೆಯವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.