ರಾಜಾಹುಲಿಗೆ ಫುಲ್​ ಡಿಮ್ಯಾಂಡ್/ ಬಿಜೆಪಿಯಿಂದ ಬಿಎಸ್​ವೈಗೆ ಪ್ರತ್ಯೇಕ ಹೆಲಿಕಾಪ್ಟರ್ ಮೀಸಲು!

Full demand for Rajahuli/ BJP reserves separate helicopter for BSY!

ರಾಜಾಹುಲಿಗೆ ಫುಲ್​ ಡಿಮ್ಯಾಂಡ್/ ಬಿಜೆಪಿಯಿಂದ ಬಿಎಸ್​ವೈಗೆ ಪ್ರತ್ಯೇಕ ಹೆಲಿಕಾಪ್ಟರ್ ಮೀಸಲು!

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗ/  ಸದ್ಯ ರಾಜಾಹುಲಿ ಅಂತಾ ಕರೆಸಿಕೊಳ್ತಿರುವ ಬಿಎಸ್​ ಯಡಿಯೂರಪ್ಪ, ಶಿವಮೊಗ್ಗದಿಂದಲೇ ತಮ್ಮ ಮತ ಬೇಟೆ ಆರಂಭಿಸಿದ್ದಾರೆ.

ಕುತೂಹಲದ ಸಂಗತಿ ಅಂದರೆ, ಬಿಜೆಪಿ ಹೈಕಮಾಂಡ್ ಬಿಎಸ್​ ಯಡಿಯೂರಪ್ಪನವರ ಓಡಾಟಕ್ಕಾಗಿ ಹೆಲಿಕಾಪ್ಟರ್​ವೊಂದನ್ನ ಪ್ರತ್ಯೇಕವಾಗಿ ಮೀಸಲಿಟ್ಟಿದೆಯಂತೆ. ಸದ್ಯ ಹೀಗೊಂದು ಸುದ್ದಿ ಬಿಜೆಪಿಯಲ್ಲಿ ಓಡಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ

ವೀರಶೈವ ಲಿಂಗಾಯತ ಮತ ಸೆಳೆಯಲು ಬಿಎಸ್​ವೈ ಅಖಾಡಕ್ಕೆ 

ಹೊಸ ಪ್ರಯೋಗಕ್ಕೆ ಕೈ ಹಾಕಿದ್ದ ಬಿಜೆಪಿ ಹೈಕಮಾಂಡ್​ಗೆ , ಕೇಸರಿ ಪಡೆಯ ತಂತ್ರಗಾರಿಕೆಯನ್ನ ಕರಗತ ಮಾಡಿಕೊಂಡಿದ್ದ ನಾಯಕರೇ ಪಕ್ಷ ಬಿಟ್ಟಿರೋದು ದೊಡ್ಡ ತಲೆಬಿಸಿಯಾಗಿದೆ. 

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್​ ಸವದಿ ಯವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವುದು ಬಿಜೆಪಿಗೆ ಡ್ಯಾಮಜ್ ಎಂದೇ ವಿಮರ್ಶಕರು ಹೇಳುತ್ತಿದ್ದಾರೆ. 

ಈ ಕಾರಣಕ್ಕೆ ಅವರಿಬ್ಬರ ಎದುರು ರಾಜಾಹುಲಿ ಘರ್ಜಿಸುವಂತೆ ಮಾಡುವುದು ಬಿಜೆಪಿ ಹೈಕಮಾಂಡ್​ನ ಪ್ಲಾನ್​ ಆಗಿದೆ. 

ಈ ಕಾರಣಕ್ಕೆ  ಯಡಿಯೂರಪ್ಪರನವರ ಶಕ್ತಿಯನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು, ಅವರಿಗೆ ಓಡಾಟಕ್ಕೆ ಅನುವಾಗುವಂತೆ ಹೆಲಿಕಾಪ್ಟರ್​​ವೊಂದನ್ನ ಪ್ರತ್ಯೇಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಹೊರಬಿದ್ದಿದೆ. 

ಹೆಲಿಕಾಪ್ಟರ್​ನಲ್ಲಿ ರಾಜಾಹುಲಿ

ಪಕ್ಷ ಒದಗಿಸಿರುವ ಪ್ರತ್ಯೇಕ ಹೆಲಿಕಾಪ್ಟ‌ರ್​ನಲ್ಲೇ ಬಿಎಸ್​ವೈ ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳಲಿದ್ದಾರಂತೆ. ಅವರಿಗಾಗಿಯೇ ಈ ಹೆಲಿಕಾಪ್ಟರ್ ಮೀಸಲಿಡಲಾಗಿದೆ ಎಂಬ ಸಮಾಚಾರವಿದೆ.

ಬಿಎಸ್​ವೈರನ್ನ ತಮ್ಮ ತಮ್ಮ ಕ್ಷೇತ್ರಕ್ಕೆ ಕರೆಸಿಕೊಳ್ಳಲು ಹಲವರು ಕಾಯುತ್ತಿದ್ದು, ಕೊನೆ ಹಂತದ ಪ್ರಚಾರದ ವೇಳೆ ಬರುವಂತೆ ಒತ್ತಾಯಸುತ್ತಿದ್ದಾರಂತೆ. 

ಉತ್ತರಕರ್ನಾಟಕದ ಮೇಲೆ ಹೆಚ್ಚಿನ ಗಮನ

ಮಾಜಿ ಸಿಎಂ ಸದ್ಯ ಶಿವಮೊಗ್ಗದ ಅಖಾಡದಲ್ಲಿ ಲಿಂಗಾಯತ ಮತ ಸೆಳೆಯಲು ಸಭೆ ಕರೆದು ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆಕೊಟ್ಟಿದ್ಧಾರೆ.

ಇದರ ಬೆನ್ನಲ್ಲೆ ಮಾಜಿ ಸಿಎಂ ಉತ್ತರ ಕರ್ನಾಟಕದತ್ತ ಪ್ರಯಾಣ ಬೆಳಸಿದ್ದಾರಂತೆ. ಶೆಟ್ಟರ್​, ಹಾಗೂ ಲಕ್ಷ್ಮಣ್ ಸವದಿಯ ಪ್ರಭಾವದ ಕ್ಷೇತ್ರಗಳಲ್ಲಿ ಓಡಾಡಿ ಪ್ರಬಲ ಸಮುದಾಯದ ಮತಗಳ ಜೊತೆಗೆ ಮತ ತಂತ್ರಗಾರಿಕೆಯನ್ನು ಕೈಗೊಳ್ಳಲಿದ್ದಾರೆ. 

 

Malenadutoday.com Social media