60 ಸಾವಿರ ಮುಸ್ಲಿಮರ ವೋಟು ಬೇಡವೆಂದರಾ ಕೆ.ಎಸ್​.ಈಶ್ವರಪ್ಪ?

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/  ಬಿಜೆಪಿಗೆ ಮುಸ್ಲಿಂ ಮತಗಳು ಬೇಕಿಲ್ಲ ಎಂದು ಶಿವಮೊಗ್ಗದ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ರಾ? ಈ ಪ್ರಶ್ನೆಗೆ ನಿನ್ನೆ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಬಳಿ ನಡೆದ ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಉತ್ತರ ಸಿಕ್ಕಿದೆ. 

ನಿನ್ನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ.ಎಸ್​.ಈಶ್ವರಪ್ಪರವರು  ಅಗತ್ಯವಿದ್ದಾ ಸಂದರ್ಭದಲ್ಲಿ ತಮ್ಮ ಸಹಾಯವನ್ನು ವೈಯಕ್ತಿಕವಾಗಿ ಪಡೆದವರು  ನಮಗೆ ಮತ ಚಲಾಯಿಸುತ್ತಾರೆ. ಹಾಗೆ  ರಾಷ್ಟ್ರೀಯವಾದಿ ಮುಸ್ಲಿಮರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ ಎಂದಿದ್ದಾರೆ. 

ಇದೇ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರದಲ್ಲಿರುವ  ಸುಮಾರು 60,000 ಮುಸ್ಲಿಂ ಜನರ ಮತಗಳನ್ನು ಕೇಳುವ ಅಗತ್ಯವಿಲ್ಲ ಎಂದಿದ್ಧಾರೆ. 

ಇತರೆ ಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲುವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದ ಈಶ್ವರಪ್ಪನವರು  ಎಲ್ಲಾ ಜಾತಿ, ಸಮಾಜದವರ ಬೇಡಿಕೆಗಳಿಗೆ ಬಿಜೆಪಿ ಸ್ಪಂದಿಸಿದೆ.  ಯಡಿಯೂರಪ್ಪನವರು ಎಲ್ಲರಿಗೂ ಅನುದಾನ ನೀಡಿದ್ದಾರೆ ಎಂದರು. 

ಪ್ರತಿಯೊಂದು ಸಮುದಾಯಕ್ಕೂ ಬಿಜೆಪಿಯಿಂದ  ಲಾಭವಾಗಿದೆ. ನಗರದಲ್ಲಿ ಸುಮಾರು 60,000 ಮುಸ್ಲಿಮರಿದ್ದಾರೆ. ನಮಗೆ ಅವರ ಮತಗಳು ಬೇಕಿಲ್ಲ. ಸಹಜವಾಗಿ,  ಅಗತ್ಯವಿದ್ದಾಗಲೆಲ್ಲಾ ನಮ್ಮ ಸಹಾಯವನ್ನು ವೈಯಕ್ತಿಕವಾಗಿ ಪಡೆದವರು ನಮಗೆ ಮತ ಹಾಕುತ್ತಾರೆ. ರಾಷ್ಟ್ರೀಯವಾದಿ ಮುಸ್ಲಿಮರು ಖಂಡಿತವಾಗಿಯೂ ಬಿಜೆಪಿಗೆ ಮತ ಹಾಕುತ್ತಾರೆ.

ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆ.. ಯಾರೂ ಹಿಂದೂಗಳ ಮೇಲೆ ದಾಳಿ ಮಾಡುವ ಧೈರ್ಯ ಮಾಡಲಿಲ್ಲ. ಯಾವುದೇ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ತಾವು ಅಷ್ಟು ಸುರಕ್ಷಿತರಾಗಿರುವುದಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿದೆ ಎಂದರು. 

Malenadutoday.com Social media

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು