3 ಗಂಟೆಗೆ ಸಿಕ್ಕ ಶಿವಮೊಗ್ಗ ಜಿಲ್ಲೆಯ ಮತದಾನ ಪರ್ಸಂಟೇಜ್ ಎಷ್ಟು ಗೊತ್ತಾ?

Do you know the voting percentage in Shivamogga district at 3 pm?

3 ಗಂಟೆಗೆ ಸಿಕ್ಕ ಶಿವಮೊಗ್ಗ ಜಿಲ್ಲೆಯ ಮತದಾನ ಪರ್ಸಂಟೇಜ್ ಎಷ್ಟು ಗೊತ್ತಾ?

KARNATAKA NEWS/ ONLINE / Malenadu today/ May 10, 2023 GOOGLE NEWS 

ಶಿವಮೊಗ್ಗ/  ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೂ ಉತ್ತಮ ಮತದಾನವಾಗುತ್ತಿದೆ. ಏಳುಗಂಟೆಯಿಂದ ಆರಂಭವಾಗ ಮತ ಪ್ರಮಾಣದಲ್ಲಿನ ಏರಿಕೆ ಇದುವರೆಗೂ ತಗ್ಗಿಲ್ಲ. ಒಂಬತ್ತು ಗಂಟೆಗೆ, 20 ಪರ್ಸೆಂಟ್ , 11 ಗಂಟೆಗೆ ನಲವತ್ತು ಪರ್ಸೆಂಟ್​ನಷ್ಟಿದ್ದ ಮತಪ್ರಮಾಣ ಮೂರು ಗಂಟೆಯ ಹೊತ್ತಿಗೆ ಬರೋಬ್ಬರಿ ಶೇಕಡಾ 55. 39 ರಷ್ಟಿತ್ತು. 

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ

  1. 111=ಶಿವಮೊಗ್ಗ(ಗ್ರಾ.)58.25%

  2. 112=ಭದ್ರಾವತಿ.53.16 %

  3. 113=ಶಿವಮೊಗ್ಗ. 50.02%

  4. 114=ತೀರ್ಥಹಳ್ಳಿ. 60.00%

  5. 115=ಶಿಕಾರಿಪುರ  61.08%

  6. 116=ಸೊರಬ  54.00%

  7. 117=ಸಾಗರ. 52.52%

ಶಿವಮೊಗ್ಗ ನಗರದ ಹೊಸಮನೆ ಬೂತ್ ನಲ್ಲಿ ಪದೇಪದೇ ಸಮಸ್ಯೆ

ಹೊಸಮನೆ 83ನೇ ಬೂತ್ ನಲ್ಲಿ ಮತಯಂತ್ರ ದೋಷದಿಂದ ಮಧ್ಯಾಹ್ನ ಎರಡು ಬಾರಿ ಮತದಾನ ಸ್ಥಗಿತಗೊಂಡಿತ್ತು ಈಗ ಮತ್ತೆ ಸ್ಥಗಿತಗೊಂಡು ಮತದಾರರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದು,  ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಮತಗಟ್ಟೆಯಲ್ಲಿ ಆಗಿರೋದು ಕೇವಲ ಮೂರೇ ಮತ

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಮತದಾನವಾಗುತ್ತಿದ್ದರು ಕೆಲವು ಕಡೆ ಕಡಿಮೆ ಮತದಾರರ ಬಗ್ಗೆ ವರದಿಯಾಗಿದೆ ಅದರಲ್ಲಿಯೂ ಭದ್ರಾವತಿಯ ಕನಸಿನ ಕಟ್ಟೆಯ ಗ್ರಾಮದಲ್ಲಿ ಇರುವ ಮತಗಟ್ಟೆಯಲ್ಲಿ ಮಧ್ಯಾಹ್ನದವರೆಗೂ ಕೇವಲ ಎರಡು ಮತಗಳು ಚಲಾವಣೆಯಾಗಿದೆ ಇದಕ್ಕೆ ಕಾರಣ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿರುವುದು.

ಬಸ್ ಸೌಲಭ್ಯ, ಸ್ಮಶಾನ ಸೇರಿದಂತೆ ಮೂಲಬೂತ ಸೌಕರ್ಯ ಮತ್ತು ನೆಟವರ್ಕ್ ಸಮಸ್ಯೆ ಸಂಬಂಧ ವಿವಿಧ‌ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌, ಈ ಮೊದಲೇ  ಕನಸಿನಕಟ್ಟೆಯ ಗ್ರಾಮಸ್ಥರು ಮತದಾನ‌ ಬಹಿಷ್ಕಾರಗೊಳಿಸಿ ಬ್ಯಾನರ್ ಕಟ್ಟಿದ್ದರು‌

ಈ ಹಿನ್ನಲೆಯಲ್ಲಿ 1021 ಮತಗಳಿರುವ ಮತಗಟ್ಟೆಯಲ್ಲಿ ಇದುವರೆಗೂ ಮೂರು ಮತಗಳು ಚಲಾವಣೆಗೊಂಡಿದೆ. ಕನಸಿನಕಟ್ಟೆ ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರವಾಗಿದೆ. ಮತಗಟ್ಟೆ ಸಿಬ್ಬಂದಿಗಳು,ಕೊನೆ ಕ್ಷಣದಲ್ಲಿ ಮತದಾನಕ್ಕೆ ಮತದಾರರು ಆಗಮಿಸುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ..



Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media