ನಾಳೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜ್​ ಕುಮಾರ್​

Geetha Shivarajkumar to join Congress tomorrow

ನಾಳೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜ್​ ಕುಮಾರ್​
ಗೀತಾ ಶಿವರಾಜ್​ ಕುಮಾರ್​

KARNATAKA NEWS/ ONLINE / Malenadu today/ Apr 27, 2023 GOOGLE NEWS


ಬೆಂಗಳೂರು/ ಮಾಜಿ ಸಿಎಂ ದಿವಂಗತ ಎಸ್​ ಬಂಗಾರಪ್ಪರವರ ಪುತ್ರಿ, ಕರುನಾಡ ಚಕ್ರವರ್ತಿ ಡಾ.ಶಿವರಾಜ್​ ಕುಮಾರ್​ ಪತ್ನಿ ಗೀತಾ ಶಿವರಾಜ್​ ಕುಮಾರ್ ನಾಳೆ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆಯಂತೆ. ಈ ಸಂಬಂಧ ರಾಜ್ಯಮಟ್ಟದ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. 

ಗೀತಾ ಶಿವರಾಜಕುಮಾರ್ (geeta shivarajkumar) ಈ ಹಿಂದೇ ಶಿವಮೊಗ್ಗ ಕ್ಷೇತ್ರದಲ್ಲಿ ಸಂಸದ ಸ್ಥಾನಕ್ಕಾಗಿ ಸ್ಪರ್ಧೇ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಜೆಡಿಎಸ್ ಪಕ್ಷವನ್ನು ಸೇರಿದ್ದರು. ಆದರೆ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು. 


Read/ ಮುಸ್ಲಿಮ್​ ಪರವಾಗಿ ನಿಲ್ಲುವ ಅಭ್ಯರ್ಥಿಗೆ ಮತ ಬೆಂಬಲ



ಆನಂತರದ ಬೆಳವಣಿಗೆಯಲ್ಲಿ ಶಿವಮೊಗ್ಗದಲ್ಲಿ ಗೀತಾರ ಸಹೋದರ ಮಧು ಬಂಗಾರಪ್ಪ ಜೆಡಿಎಸ್​ ಪಕ್ಷವನ್ನು ತೊರೆದು ಕಾಂಗ್ರೆಸ್​ ಪಕ್ಷವನ್ನು ಸೇರಿಕೊಂಡಿದ್ದರು. ಇದೀಗ ಕಾಂಗ್ರೆಸ್​ನಲ್ಲಿ ಪ್ರಮುಖ ಹುದ್ದೆಯನ್ನು ನಿರ್ವಹಿಸುತ್ತಿರುವ ಮಧು ಬಂಗಾರಪ್ಪರವರು, ಸೊರಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಯನ್ನು ಸಹ ಮಾಡುತ್ತಿದ್ದಾರೆ. 

ಸಹೋದರನ ಪರ ಪ್ರಚಾರವನ್ನು ಸಹ ಆರಂಭಿಸಿರುವ ಗೀತಾ ಶಿವರಾಜಕುಮಾರ್​ ನಾಳೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ನಾಳೆಯ ಚಟುವಟಿಕೆಗಳು ಕುತೂಹಲ ಮೂಡಿಸಿದೆ.  

 

Malenadutoday.com Social media