ಬ್ರಾಹ್ಮಣ ನಿಗಮಕ್ಕೆ 100 ಕೋಟಿ ! ಜೆಡಿಎಸ್​ ಇಲ್ಲದೇ ಅಧಿಕಾರವಿಲ್ಲ! ಶಿವಮೊಗ್ಗದಲ್ಲಿ ಮಾಜಿ ಸಿಎಂ ಸ್ಫೋಟಕ ಭವಿಷ್ಯ!

Rs 100 crore for Brahmin Corporation There is no power without JD(S) Ex-CM in Shimoga

ಬ್ರಾಹ್ಮಣ ನಿಗಮಕ್ಕೆ 100 ಕೋಟಿ !  ಜೆಡಿಎಸ್​ ಇಲ್ಲದೇ ಅಧಿಕಾರವಿಲ್ಲ!  ಶಿವಮೊಗ್ಗದಲ್ಲಿ ಮಾಜಿ ಸಿಎಂ ಸ್ಫೋಟಕ ಭವಿಷ್ಯ!

KARNATAKA NEWS/ ONLINE / Malenadu today/ May 4, 2023 GOOGLE NEWS


ಶಿವಮೊಗ್ಗ/ ನಿನ್ನೆ ಎನ್​ಇಎಸ್ ಮೈದಾನದಲ್ಲಿ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಸಲ ತಮ್ಮನ್ನು ಬಿಟ್ಟು ಯಾವ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ನಿನ್ನೆ ಆಡಿದ ಮಾತುಗಳ ಪ್ರಮುಖ ಅಂಶಗಳನ್ನು ನೋಡೋದಾದ್ರೆ 

ನನ್ನ ಬಿಟ್ಟು ಅಧಿಕಾರಕ್ಕೆ ಯಾರು ಬರಲ್ಲ

ಈ ಸಲವೂ ಸ್ಪಷ್ಟ ಬಹುಮತ ಕಾಂಗ್ರೆಸ್ ಗಾಗಲಿ, ಬಿಜೆಪಿಗಾಗಲಿ ಬರುವುದಿಲ್ಲ. ಸಮೀಕ್ಷೆಯನ್ನು ನಂಬಬೇಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಹವಾ ಹೇಗಿದೆ ಎಂಬುದನ್ನೂ ಊಹಿಸುವುದಕ್ಕೂ ಆಗೋದಿಲ್ಲ ಎಂದ ಮಾಜಿ ಸಿಎಂ ನನ್ನನ್ನು ಬಿಟ್ಟು ಈ ಸಲ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯೋದಕ್ಕೆ ಆಗೋದಿಲ್ಲ ಎಂದಿದ್ದಾರೆ. 

 

ಓದಿ : BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ 

ಒಕ್ಕಲಿಗ ಲಿಂಗಾಯತರಿಗಾಗಿ ಮುಸ್ಲಿಮ ಮೀಸಲಾತಿ ರದ್ದು

ಒಕ್ಕಲಿಗ ಮತ್ತು ಲಿಂಗಾಯಿತರ ಮತಬ್ಯಾಂಕ್ ಗಾಗಿ ಮುಸ್ಲೀಂ ಮೀಸಲಾತಿಯನ್ನ ತೆಗೆಯುವ ಕೆಲಸವನ್ನು  ಬಿಜೆಪಿ ಮಾಡಿದೆ. ಆದರೆ ಸುಪ್ರೀಂ‌ಕೋರ್ಟ್ ನಲ್ಲಿ ನಾವು ಇದನ್ನ ಜಾರಿಗೆ ತರಲೇ ಇಲ್ಲ ಎಂದು ಅಫಿಡೆವಿಟ್ ಹಾಕಿ ಜನರ ಕಣ್ಣಿಗೆ ಮಣ್ಣು ಎರಚಿವೆ ಅಂತಾ ಟೀಕಿಸಿದ್ರು. 

ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ

ಜೆಡಿಎಸ್​ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಹಣ ಅನುದಾನ ನೀಡುವುದಾಗಿ ಮಾಜಿ ಸಿಎಂ  ಘೋಷಿಸಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಸಮುದಾಯಕ್ಕೆ ಜಾಗ ನೀಡಿದ್ದೆ. 

ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದರೆ ಬಿಜೆಪಿ ನಿಗಮಕ್ಕೆ ಹಣವೇ ಬಿಡುಗಡೆ ಮಾಡಲಿಲ್ಲ. ನಾನು ನಾಳೆ ಸ್ವಂತಬಲದಿಂದ ಸಿಎಂ ಆದರೆ 100 ಕೋಟಿ ಹಣ ತೆಗೆದಿಡುವುದಾಗಿ ಘೋಷಿಸಿದರು.

ಇಬ್ಬರು ಜಿಲ್ಲೆಯಿಂದ ಮಂತ್ರಿಗಳು

ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಾಗಲಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಆ ಇಬ್ಬರು ಯಾರು ಎಂಬುದನ್ನ ಹೇಳದ ಕುಮಾರಸ್ವಾಮಿ,  ಆಯನೂರು ಮಂಜುನಾಥ್ ಮತ್ತು ಶಾರದಾ ಪೂರ್ಯನಾಯ್ಕ್ ಮುಖವನ್ನ ನೋಡಿ ನಕ್ಕರು

 


ಶಿವಮೊಗ್ಗದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ/ ಆಯನೂರು ಮಂಜುನಾಥ್​ರ ಗೆಲುವಿನ ಬಗ್ಗೆ ಹೇಳಿದ್ಧೇನು

ಶಿವಮೊಗ್ಗ/ ಹೆಚ್​ಡಿ ಕುಮಾರಸ್ವಾಮಿ/ ಶಿವಮೊಗ್ಗ ನಗರದಲ್ಲಿ ನಿನ್ನೆ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ  ಮಾಜಿ ಸಿಎಂ ಹೆಚ್‌ಡಿಕೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಜಾತ್ಯಾತೀತ ಜನತಾದಳದ್ದು ಪಾಲಿದೆ ಎಂದಿದ್ದಾರೆ.  

ಶಿವಮೊಗ್ಗ ಜಿಲ್ಲೆಯು ಇಷ್ಟೊಂದು ಅಭಿವೃದ್ಧಿ ಪಥದಲ್ಲಿ ಸಾಗಲು ಜೆಡಿಎಸ್ ಕಾಣಿಕೆ  ಇದೆ. ತಾವು ಮುಖ್ಯಮಂತ್ರಿಯಾದಾಗ  ಜಿಲ್ಲೆಯ ಅಭಿವೃದ್ಧಿ ಯುಗಕ್ಕೆ ಶಿಲಾನ್ಯಾಸ ಮಾಡಿದ್ದಾಗಿ ಅವರು ಹೇಳಿದ್ದಾರೆ. 

 

ಎನ್.ಐ.ಎಸ್. ಮೈದಾನದಲ್ಲಿನಡೆದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ 2004-05ರ ಸಾಲಿನಲ್ಲಿ ತಾನು ಮುಖ್ಯಮಂತ್ರಿ ಯಾದಾಗ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದೆ. 

ಅಲ್ಲಿಂದಲೇ ಜಿಲ್ಲೆಯ ಅಭಿವೃದ್ಧಿ ಆರಂಭವಾಯ್ತು ಬಿಜೆಪಿಯವರು ಇದನ್ನು ನೆನಪಿಸುತ್ತಿಲ್ಲ. ತಮ್ಮಿಂದಲೇ ಎಲ್ಲಾ ಅಭಿವೃದ್ಧಿ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು. 



ಬಿಜೆಪಿ ಶಾಂತಿಯ ತೋಟವಾಗಿದ್ದ ಶಿವಮೊಗ್ಗವನ್ನು ಕಡಿಸಿದೆ. ಕೈಗಾರಿಕೆಗಳು ಬಂದ್ ಆಗುವಲ್ಲಿ ಅವರ ಪಾಲೇ ಹೆಚ್ಚಿದೆ. ಸತ್ತವರ ಹೆಣದ ಮೇಲೆ ರಾಜಕೀಯ ಮಾಡುತ್ತಾ, ಕಮಿಷನ್ ಯುಗವನ್ನು ಆರಂಭಿಸಿದವರು ಬಿಜೆಪಿಯವರು ಎಂದು ಟೀಕಿಸಿದ್ರು. 

ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಳುಗಿರುವ ಕೈಗಾರಿಕೆಗಳಿಗೆ ಪುನರ್ ಜೀವ ಕೊಡುತ್ತೇನೆ. ಈಗಾಗಲೇ ಪಂಚರತ್ನ ಮೂಲಕ ಘೋಷಿಸಿರುವ ಯೋಜನೆಗಳ ಮೂಲಕ ಸ್ವಾಭಿಮಾನಿ ಕರ್ನಾಟಕ ವನ್ನು ಮತ್ತು ನೆಮ್ಮದಿಯ ಜೀವನವನ್ನು ನಡೆಸಲು ನೆರವಾಗುತ್ತೇನೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಅಭ್ಯರ್ಥಿ ಆಯನೂರು ಮಂಜುನಾಥ್, ತಮಗೆ ಯಾವುದೇ ಕಪ್ಪು ಚುಕ್ಕೆಯಿಲ್ಲ, ಅಪಚಾರ ಮಾಡಿಲ್ಲ. ಆದರೂ ತನ್ನನ್ನು ಕೊಳಚೆ ನೀರು ಎಂದು ನಿಂದಿಸಿದ್ದಾರೆ. 

ರಾಜ್ಯದಲ್ಲಿ 2 ಪಕ್ಷಗಳಿಂದ ಬೇಸತ್ತ ಜನತೆ ಜೆಡಿಎಸ್ ಸರಕಾರತರಲು ಆಸಕ್ತಿ ತೋರಿದ್ದು, ಜನರ ಆಶೀರ್ವಾ ದಿಂದ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.  




 ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದ ವ್ಯತ್ಯಯ ಸಾಧ್ಯತೆ 

ಶಿವಮೊಗ್ಗ/ ಇವತ್ತು ಕೂಡ ಜಿಲ್ಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಕೆಎಸ್​ಆರ್​​ಟಿಸಿ ಬಸ್​ಗಳು ತೆರಳಿದ್ದವು. 

ಇವತ್ತು ಅಂದರೆ ಮೇ 4 ರಂದು ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ 2ನೇ ಹಂತದ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಂಡಿಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕ.ರಾ.ರ.ಸಾ. ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 108 ಬಸ್‌ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. 

ಆದ್ದರಿಂದ ಮೇ 4 ರಂದು( ಇವತ್ತು) ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹಾಗಾಗಿ  ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿಗಮ ದೊಂದಿಗೆ ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಗಳು ಕೋರಿದ್ದಾರೆ.




Malenadutoday.com Social media