BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

BREAKING This time the Congress government! A shock to the BJP, There is no chance for THE JD(S)! What does the survey report say?

BREAKING  | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

MALENADUTODAY.COM  |SHIVAMOGGA| #KANNADANEWSWEB

ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ, ಆಗಲೇ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ. ಲೋಕ್​ ಪೋಲ್ ಎಂಬ ಸಂಸ್ಥೆಯು ಈ ಸಂಬಂಧ ಸಮೀಕ್ಷೆ ಮಾಡಿದ್ದು ತನ್ನ ರಿಸಲ್ಟ್​ನ್ನ ಪ್ರಕಟಿಸಿದೆ. ಅದರ ಪ್ರಕಾರ, ಈ ಸಲ ಕಾಂಗ್ರೆಸ್​ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ.. LOKPOLL  ಎನ್ನುವ ಚುನಾವಣ ಸಮೀಕ್ಷೆ ನಡೆಸುವಂತಹ ಸಂಸ್ಥೆಯು ಈ ಸಂಬಂಧ ತತನ್ನ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರವಾಗಿ ಈ ಸಲ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಪಕ್ಷಗಳು ಹಂಚಿಕೊಳ್ಳುವ ಸೀಟಿನ ಪ್ರಮಾಣ ಇಲ್ಲಿದೆ. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

 ಪಕ್ಷ  ಸೀಟು  ವೋಟು 
ಬಿಜೆಪಿ 77-83 33%-36%
ಕಾಂಗ್ರೆಸ್​  116-122 39%-42%
ಜೆಡಿಎಸ್​  21-27 15%-18%
ಇತರೇ 1-4 06%-09%

ಬಿಜೆಪಿ ರಾಜ್ಯದಲ್ಲಿ 77 ಕ್ಷೇತ್ರದಲ್ಲಿ  ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್​ 116 ಕ್ಷೇತ್ರವನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಪ್ರತಿ  ಕ್ಷೇತ್ರದಲ್ಲಿ ತಲಾ 200 ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಒಟ್ಟಾರೆ 224 ಕ್ಷೇತ್ರಗಳಲ್ಲಿ ಒಟ್ಟಾರೆ 45000 ಸ್ಯಾಂಪಲ್​ಗಳನ್ನು ಕಲೆಹಾಕಲಾಗಿದ್ದು, ಅದರಲ್ಲಿ ಕೈಗೊಂಡ ಸಮೀಕ್ಷೆ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇನ್ನೂ ಜನವರಿ 15 ರಿಂದ ಫೆಬ್ರವರಿ 28  ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆಯಂತೆ. ಪ್ರತಿ ಕ್ಷೇತ್ರದ 30 ಬೂತ್​ಗಳನ್ನು ರ್ಯಾಡಂಮ್​ ಆಗಿ ಸೆಲೆಕ್ಟ್ ಮಾಡಲಾಗಿದೆ ಎಂದು ತಿಳಿಸುವ ಸಮೀಕ್ಷೆಯಲ್ಲಿ ಹಲವು ವಿಷಯಗಳನ್ನ ಸಹ ಹೇಳಲಾಗಿದೆ. 

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಆಡಳಿತ ವಿರೋಧಿ ಅಲೆಯನ್ನು ಹೆಚ್ಚಿಸುತ್ತಿದೆ. ಅಲ್ಲದೆ  ಹಲವು ಮೀಸಲಾತಿ ಬೇಡಿಕೆಗಳು ಸಹ ಆಡಳಿತದ ವಿಚಾರದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನೊಂದು ಕಾಂಗ್ರೆಸ್ ಹಾಗೂ ಜೆಡಿಎಸ್​ನ ಕಾರ್ಯಕ್ರಮಗಳು ಮತಗಳನ್ನ ಆಕರ್ಷಿಸುತ್ತಿದೆ ಎಂದು ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಕಂಡು ಕೊಂಡಿದೆ. ಇಷ್ಟೆ ಅಲ್ಲದೆ ಪ್ರಧಾನಿ ಮೋದಿ ಒಬ್ಬರೇ ಚುನಾವಣಾ ಫ್ಯಾಕ್ಟರ್​ ಅಗಲು ಸಾದ್ಯವಾಗದೇ ಹೋಗಬಹುದು ಎಂದು ಸರ್ವೆ ರಿಪೋರ್ಟ್ ಹೇಳಿದ್ದು, ಬಿಜೆಪಿಯಲ್ಲಿ ಮಾಸ್ ನಾಯಕರ ಕೊರತೆ ಇದೆ ಎನ್ನುತ್ತಿದೆ. 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS :karnataka election 2023,karnataka assembly election 2023,karnataka assembly election,karnataka assembly elections,karnataka elections,karnataka election,karnataka elections 2023,karnataka assembly elections 2023,karnataka election news,karnataka news,karnataka,karnataka vidhan sabha election 2023,2023 election,karnataka latest news,karnataka politics,2023 assembly election,assembly election 2023,karnataka election survey,karnataka election campaign  #jpstory #jp flshback #jpexclusive #jp malenadu #malenadutoday, #malnadutoday, #todaynews  #shivamoggalivetoday #shivamogganewstoday, #malnadtoday.com #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga