ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

Missing case mystery of skull found in Thirthahalli! On JP FLASHBACK!

ಮಗಳು ಜೀವ  ಉಳಿಸಿದ್ದಳು! ತಾಯಿ ಕೊಂದಿದ್ದಳು,  ತಂಗಿ ಕೇಸ್​ ಪತ್ತೆ ಮಾಡಿದ್ದಳು! ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP  FLASHBACK ನಲ್ಲಿ!
Shimoga Crime Story,

ತನ್ನ ತಾಯಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಸಿಲುಕಿ ಸಾವು ಬದುಕಿನ ಮದ್ಯೆ ಹೋರಾಟಕ್ಕಿಳಿದಾಗ ಆ ಮಗಳು ತನ್ನ ಜೀವವನ್ನೆ ಪಣಕ್ಕಿಟ್ಟು ತಾಯಿಯ ರಕ್ಷಣೆಗೆ ಮುಂದಾಗಿದ್ದಳು. ಎದೆಗುಂದದೆ ಮನೆಯಲ್ಲಿದ್ದ ಕರೆಂಟ್ ಪೀಸ್ ತೆಗೆದು ತಾಯಿಯನ್ನು ಬದುಕಿಸಿದ್ದಳು. ತಾಯಿಯನ್ನು ರಕ್ಷಿಸಿದ ಆಕೆಗೆ ರಾಜ್ಯಮಟ್ಟದ ಶೌರ್ಯ ಪ್ರಶಸ್ತಿಯೂ ಲಭಿಸಿತ್ತು. ಆದರೆ ತಾನು ರಕ್ಷಿಸಿದ ತಾಯಿಯೇ ಮುಂದೊಂದು ದಿನ, ತನ್ನ ಅಪ್ಪನನ್ನು  ಕೊಲೆ ಮಾಡುತ್ತಾಳೆಂದು ಆ ಬಾಲಕಿ ಕನಸಿನಲ್ಲಿಯೂ ಊಹಿಸಿರಲಿಲ್ಲ.ಆ ಸಂಸಾರದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು!...ಇದು ಇವತ್ತಿನ JP ಫ್ಲಾಶ್ ಬ್ಯಾಕ್ ಸ್ಟೋರಿ.... ಮಗಳು ರಕ್ಷಿಸಿದಳು- ತಾಯಿ ಕೊಂದಳು.

ಪ್ರೀಯ ಓದುಗರೆ, ಇಂದಿನ ಫ್ಲ್ಯಾಶ್​ ಬ್ಯಾಂಕ್​ನಲ್ಲಿ ನಿಮ್ಮ ಮುಂದೆ ಮನಕಲಕುವ ಇಂಟರಿಸ್ಟಿಂಗ್ ಸ್ಟೋರಿಯನ್ನು ಕೊಡ್ತಿದಿನಿ. ..ಈ ಸ್ಟೋರಿಯ ಹೈಲೈಟ್ ಒಂದು ಕೊಲೆಯಾಗಿದ್ದರೂ..,ಅದರ ಹಿಂದೆ ಮತ್ತೊಂದು ನೋವಿನ ಸಂಗತಿಯಿದೆ. ಆ ಕಥೆಯ ಹಿಂದೆ ಬಾಲಕಿಯೊಬ್ಬಳಿದ್ದಾಳೆ.ಬಹುಷಃ ಆ ಬಾಲಕಿ ತನ್ನ ತಾಯಿಯನ್ನು ಅಂದು ರಕ್ಷಣೆ ಮಾಡದೆ ಹೋಗಿದ್ದರೆ.  ಅವತ್ತು ಮಲೆನಾಡಿನ ಆ ಒಂಟಿ ಮನೆಯಲ್ಲಿ ಆಕೆ ತಂದೆನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ ಗೊತ್ತಿಲ್ಲ..,ಆದರೆ ನಡೆಯ ಬಾರದ ಘಟನೆಯೊಂದಕ್ಕೆ ಆ ಪುಟ್ಟ ಗ್ರಾಮ ಸಾಕ್ಷಿಯಾಗಿತ್ತು. 

2011 ರಲ್ಲಿ ತೀರ್ಥಹಳ್ಳಿ ತಾಲೂಕಿನ  ಒಂದು  ಗ್ರಾಮದ ಮನೆಯಲ್ಲಿ ನಡೆದ ಘಟನೆ. ಆ ಮನೆಯಲ್ಲಿ  ತಾಯಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಸಿಲುಕಿದಾಗ ಅಲ್ಲಿ ಆಕೆಯನ್ನು ಬದುಕುಳಿಸಲು ಯಾರು ಇರಲಿಲ್ಲ. ಕಿರುಚಿಕೊಂಡರೂ ಸಕಾಲಕ್ಕೆ ಬರುವವರೂ ಹತ್ತಿರದಲ್ಲೂ ಇರಲಿಲ್ಲ...ಆಗ  ಮನೆಯಲ್ಲಿ ಓದುತ್ತಿದ್ದ, ಆ ಬಾಲಕಿ ಮಾತ್ರ ತನ್ನ ತಾಯಿ ಕರೆಂಟ್ ಗೆ ಸಿಲುಕಿ, ಜೀವನ್ಮರಣದ ನಡುವೆ ಹೋರಾಡುತ್ತಿರುವುದನ್ನು ಕಂಡು ಸುಮ್ಮನೆ ಕೂರಲು ಸಾಧ್ಯವಾಗಲಿಲ್ಲ. ಕರೆಂಟ್ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲದ ಆ ಬಾಲಕಿ ತನ್ನ ತಾಯಿಯ ಸ್ಥಿತಿಯನ್ನು ಕಂಡು..ಹೇಗಾದರೂ ಮಾಡಿ ಬದುಕುಳಿಸಿಕೊಳ್ಳಬೇಕೆಂದು ಯೋಚಿಸಿದಾಗ ಆಕೆಗೆ ತಟ್ಟನೆ ಹೊಳೆದಿದ್ದು.,ಮನೆಯಲ್ಲಿನ ಕರೆಂಟ್ ಪೀಸ್ ತೆಗೆಯಬೇಕೆಂದು. ತಕ್ಷಣ ಬಾಲಕಿ ಮನೆ ಮುಂದಿದ್ದ ಪೀಸನ್ನು ಹಿಂದೆ ಮುಂದೆ ಯೋಚಿಸದೆ ತೆಗೆದು ಬಿಟ್ಟಳು. ಕ್ಷಣಾರ್ಧದಲ್ಲಿ ತಾಯಿಗೆ ಮರುಜೀವ ಬಂತು.ಸಾವಿನ ಮನೆ ಕದ ತಟ್ಟಿದವಳನ್ನು ರಕ್ಷಿದ ಮಗಳನ್ನು ತಾಯಿ ಬಿಗಿದಪಪ್ಪಿ ಕಣ್ಣಿರಿಟ್ಟ ಪ್ರಸಂಗವೂ ಕೂಡ ನಡೆಯಿತು. ತಾಯಿಯನ್ನು ರಕ್ಷಿಸಿದ ಬಾಲಕಿಗೆ ಶೌರ್ಯ ಪ್ರಶಸ್ತಿನೂ ಬಂದಿತ್ತು. 

ಈ ಘಟನೆಯಾಗಿ ಮೂರು ವರ್ಷದ ನಂತರ ಮತ್ತೊಂದು ಘಟನೆ ಅಲ್ಲಿ ನಡೆದಿತ್ತು. ತೀರ್ಥಹಳ್ಳಿ ತಾಲೂಕಿನ ಆ ಗ್ರಾಮದಲ್ಲಿ  ಒಂಟಿ ಮನೆಯೊಂದಿತ್ತು. ಅಲ್ಲಿ ಅವತ್ತು ಶವವೊಂದು ಹೂತುಹಾಕಿದ್ದ ರ ವಿಚಾರಗೊತ್ತಾಗಿ ಮಣ್ಣು ಅಗೆಯುತ್ತಿದ್ರು.  ತೀರ್ಥಹಳ್ಳಿ  ತಹಸಿಲ್ದಾರ್  ಹಾಗೂ ದಾವಣೆಗೆರೆಯಿಂದ ಬಂದ ಪೊರೆನ್ಸಿಕ್ ಲ್ಯಾಬ್ ತಜ್ಞರ ಸಮ್ಮುಖದಲ್ಲಿ ಅಗೆದಾಗ ಸಿಕ್ಕಿದ್ದು ಒಂದು ಮೂಟೆ. ಅದರಲ್ಲಿದ್ದಿದ್ದು ತಲೆಬುರುಡೆ,ಎರಡು ದೊಡ್ಡ ಎಲುಬು,ಪ್ಯಾಂಟು, ಶರ್ಟು,ಚಾಪೆ,ಕಂಬಳಿ. ಅಲ್ಲಿ ಕೈಕಾಲು ಕಟ್ಟಿ ಬಟ್ಟೆಯಲ್ಲಿ ಸುತ್ತಿ,ಹೂತಿಟ್ಟಂತಿತ್ತು ಎಲುಬಿನ ಸ್ಪ್ರಕ್ಚರ್

ತೀರ್ಥಹಳ್ಳಿಯ ಮಾಳೂರು ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯದು.  ಮೇಲಿನ ಎರಡು ಘಟನೆಗಳ ಬಗ್ಗೆ ಹೇಳುವುದಕ್ಕೂ ಮೊದಲು ವಿಚಾರವೊಂದನ್ನ ಹೇಳಬೇಕು ಇಂದು ನಾವು ಹೇಳಲು ಹೊರಟಿರೋ ಸ್ಟೋರಿಯಲ್ಲಿ ಪೊಲೀಸರ ಮಿಸ್ಸಿಂಗ್ ಕೇಸ್​ಗಳಲ್ಲಿ ನಿರ್ಲಕ್ಷ್ಯ ತೋರಿದರೇ ಎನಾಗುತ್ತದೆ ಎಂಬುದಕ್ಕೆ ಒಂದು ಸಾಕ್ಷಿಯಿದೆ. ದಿನಬೆಳಗಾದರೆ, ಟ್ರಾಫಿಕ್​ ಸ್ಟೇಷನ್​ಗಳನ್ನ ಹೊರತು ಪಡಿಸಿ ಶಿವಮೊಗ್ಗ ಜಿಲ್ಲೆಯ 30 ಸ್ಟೇಷನ್​ ಗಳ ಪೈಕಿ  ಒಂದಲ್ಲ ಒಂದು ಮಿಸ್ಸಿಂಗ್ ಕೇಸ್ ದಾಖಲಾಗಿರುತ್ತದೆ. ಮೊನ್ನೆ ಮೊನ್ನೆ ಶಿವಮೊಗ್ಗ ಗ್ರಾಮಾಂತರ ಸ್ಟೇಷನ್​ನಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕೇಸ್ ಪ್ರಕರಣದಲ್ಲಿ ಮೃತದೇಹ ಸಿಕ್ಕಿದ್ದು, ಕೊಲೆ ಶಂಕೆಯ ತನಿಖೆ ನಡೆಯುತ್ತಿದೆ.   ಇಂತಹ ನಾಪತ್ತೆ ಪ್ರಕರಣಗಳಲ್ಲಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸಬೇಕಿದೆ..ಹಾಗೊಂದು ವೇಳೆ ನಿರ್ಲಕ್ಷ್ಯ ತೋರಬಾರದು ಎನ್ನುವುದಕ್ಕೆ ಸಾಕ್ಷಿಯಾಗಿತ್ತು ಮಾಳೂರು ಪಿಎಸ್​ನ ಅವತ್ತಿನ ಕೇಸ್

ರಿಟರ್ನ್​ ಸ್ಟೋರಿ ವಿಚಾರಕ್ಕೆ ಬರುವುದಾರೆ, ಅವತ್ತು ಅಲ್ಲಿಯು ಮಿಸ್ಸಿಂಗ್ ಕೇಸ್ ದಾಖಲಾಗಿತ್ತು, ಅದ್ಯಾಕೋ ಪೊಲೀಸರು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾಪತ್ತೆಯಾಗಿದ್ದ ವ್ಯಕ್ತಿಯನ್ನ ರವಿಯಣ್ಣ ಎಂದುಕೊಳ್ಳೋಣ. ಆತ ನಾಪತ್ತೆಯಾಗಿದ್ದರ ಬಗ್ಗೆ ಆತನ ಸಹೋದರಿಯರು ದೂರು ಕೊಟ್ಟಿದ್ದರು, ಪತ್ನಿಯು ದೂರು ಕೊಟ್ಟಿದ್ದರು. ಆದರೆ ಕೇಸ್ ತನಿಖೆಯ ಹಾದಿ ಹಿಡಿದಿರಲಿಲ್ಲ. ಅತ್ತ ರವಿಯಣ್ಣನ ಹೆಂಡತಿಯು ಗಂಡ ಕಾಣೆಯಾದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಸಹೋದರಿಯರಿಗೆ ರವಿಯಣ್ಣ ಕಾಣದೇ ಹೋಗಿದ್ದು ಆತಂಕ ಮೂಡಿಸಿತ್ತು . ಹಾಗಾಗಿ ಸ್ಟೇಷನ್​ ಬಾಗಿಲಿಗೆ ಅಲೆಯುತ್ತಾರೆ. ಸಾರ್, ವಿಚಾರ ಹಿಂಗಿಂಗೆಲ್ಲಾ ಇದೆ ಸರ್ ನೋಡಿ ಸರ್ ಅನ್ನುತ್ತಾರೆ. ಆದರೆ 2 ವರ್ಷವಾದರೂ ರವಿಯಣ್ಣ ಹುಡುಕುವ ಕೆಲಸ ಆಗುವುದಿಲ್ಲ. ಕೊನೆಗೆ ರವಿಯಣ್ಣನ ಎಲ್ಲೋ ಕೊಲೆಯಾಗಿದ್ದಾನೆ ಎನ್ನುವ ಅನುಮಾನ ಸಹೋದರಿಯರಿಗೆ ಮೂಡುತ್ತೆ. ಹಾಗಾಗಿ ಅವರೇ ಪೊಲೀಸ್ ತನಿಖೆಯನ್ನ ಆರಂಭಿಸ್ತಾರೆ. ಅವರಲ್ಲೊಂದು ಅನುಮಾನ ಇತ್ತು. ಅವರ ಅನುಮಾನ ಗಟ್ಟಿಯಾಗಿತ್ತು. ಹಾಗಾಗಿ ಅನುಮಾನದ ಹಾದಿ ಹಿಡಿದು, ಬೆನ್ನಟ್ಟುತ್ತಾರೆ. ಹಾಗೆ ಸಾಗಿದ ಸಂಶಯದ ಹಾದಿಯಲ್ಲಿ ಅವರಿಗೆ ಕೊಲೆಗಾರನೇ ಸಿಕ್ಕಿಬಿದ್ದಿದ್ದ.

ಹೌದು, ಓದುಗರೆ, ಸಹೋದರಿಯರು ತಮ್ಮ ಸಹೋದರ ರವಿಯಣ್ಣನನ್ನ ಕೊನೆಗೆ ಹುಡುಕುತ್ತಾರೆ. ಆದರೆ ಜೀವಂತವಾಗಲ್ಲ, ಹೆಣವಾಗಿ.. ರವಿಯಣ್ಣನನ್ನ ಹುಡುಕಲು ಮುಂದಾದ ಸಹೋದರಿಯರಿಗೆ ಅನುಮಾನ ಕಾಡೋದು ಆತನ ಹೆಂಡತಿ ಮೇಲೆ ! ಇದಕ್ಕೆ ಕಾರಣವೂ ಇತ್ತು. ರವಿಯಣ್ಣ ಕಾಣೆಯಾಗಿದ್ದರ ಬಗ್ಗೆ ಆಕೆಯ ಪತ್ನಿ ತಲೆಯೇ ಕೆಡಿಸಿಕೊಂಡಿರಲಿಲ್ಲ. ಅವರ ಹೆಸರು ಅನಿತಾ ಎಂದುಕೊಳ್ಳೋಣ.. ಅತ್ತಿಗೆ ಅನಿತಾ ಏಕೆ ರವಿಯಣ್ಣನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಸೂಕ್ಷ್ಮವೂ ಸಹೋದರಿಯರಿಗೆ ಗೊತ್ತಿತ್ತು. ಆ ಸತ್ಯವನ್ನು ಸ್ವತಃ ರವಿಯಣ್ಣ ಹಿಂದೊಮ್ಮೆ ಹೇಳಿದ್ದ. ಹಾಗಾಗಿ ಸಹೋದರಿಯರ ಸಂಶಯ ಅತ್ತಿಗೆ ಮೇಲಿತ್ತು. ಹಾಗಾಗಿ ಅವರನ್ನೆ ಹಿಂಬಾಲಿಸಿದ್ರು. ಆಕೆಯ ಚಟುವಟಿಕೆಯನ್ನ ಹತ್ತಿರದಿಂದ ಗಮನಿಸ ತೊಡಗಿದರು. ಆ ಒಂದು ದಿನ, ಊರಿನವರನ್ನೆಲ್ಲಾ ಸೇರಿಸಿಕೊಂಡು ಅತ್ತಿಗೆಯ ಮನೆಯೋಳಕ್ಕೆ ನುಗ್ಗಿದರು. ಅಲ್ಲಿ ಸತ್ಯ ರೆಡ್ ಹ್ಯಾಂಡಾಗಿ ಬಯಲಾಗಿತ್ತು. 

READ |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆ! ನಡೆಯಿತೆ ಕೊಲೆ?

ಗಂಡ ಕಾಣೆಯಾದರೂ ಸಹ ಆರಾಮಾಗಿದ್ದ ಅನಿತಾರ ಬಗ್ಗೆ ಪೊಲೀಸರು ಶಂಕಿಸಿರಲಿಲ್ಲ. ಸ್ಟೇಷನ್​ ಲಿಮಿಟ್​ನಲ್ಲಿ ಸಿಗುವ ಶವಗಳನ್ನ ಬನ್ನಿ ನೋಡಿ, ಐಡೆಂಟಿಫೈ ಅಂತಿದ್ರೆ, ಅನಿತಾ ಅಲ್ಲಾ ಬಿಡಿ ಅದು ನನ್ನ ಗಂಡನ ಶವವಲ್ಲ ಎನ್ನುತ್ತಿದ್ದಳಂತೆ ಅನಿತಾ! ಶವವನ್ನೆ ನೋಡದೇ ಅನಿತಾ ಹೀಗೆ ಸ್ಪಷ್ಟವಾಗಿ ಹೇಳುತ್ತಿದ್ದರ ಬಗ್ಗೆ ಪೊಲೀಸರಿಗೆ ಏಕೆ ಅನುಮಾನ ಕಾಡಲಿಲ್ಲವೋ ಬಲ್ಲವರಿಲ್ಲ. ಆದರೆ ಗ್ರಾಮಸ್ಥರಿಗೆ ಡೌಟು ಜೋರಾಗಿತ್ತು. ಅಲ್ಲದೆ ಸಹೋದರಿಯುರಿಗೂ ಇದು ಕಾಡುತ್ತಿತ್ತು. ಅದರ ಬೆನ್ನುಬಿದ್ದು ಮನೆಗೆ ನುಗ್ಗಿದಾಗ ಅಲ್ಲೊಂದು ಅಕ್ರಮ ಸಂಬಂಧದ ಅನಾವರಣ ಆಗಿತ್ತು. 

ಹೌದು ಇದು ನಿಜಕ್ಕೂ ವಿಪರ್ಯಾಸವೆನ್ನಬೇಕು. ಮಾಳೂರು ಠಾಣೆಯಲ್ಲಿ ಮಿಸ್ಸಿಂಗ್ ಕೇಸು ಕೊಟ್ಟು ಅನಿತಾ ಏನೋ ಆರಾಮಾಗಿದ್ಲು.ಅವಳಿಗೆ ಗಂಡ ಇಲ್ಲ ಅನ್ನೋ  ಫೀಲಿಂಗೇ ಇರ್ಲಿಲ್ಲ. ಆದ್ರೆ ತಮ್ಮ ಕಾಣೆಯಾದಾಗ ಆ ಸಹೋದರಿ ಲೀಲಾ(ಹೆಸರು ಬದಲಿಸಿದೆ) ಪೊಲೀಸ್ರಿಗೆ ದುಂಬಾಲು ಬಿದ್ದು ತನಿಖೆ ಮಾಡಿ ಅಂದ್ರೂ ಪೊಲೀಸ್ರು ಸುಮ್ಮನಾಗಿ ಬಿಟ್ರು,.ಆದರೆ ಲೀಲಾ ಮಾತ್ರ..ತಾನೇ ಇನ್ ವೆಸ್ಟಿಗೆಟಿಂಗ್ ಆಫಿಸರ್ ರೀತಿ ನಾಪತ್ತೆಯಾದ ತಮ್ಮನ ಹುಡುಕಾಟದ ತನಿಖೆ ಶುರು ಹಚ್ಚಿಕೊಂಡು ಬಿಟ್ಳು,  ಮಾಳೂರು ಪೊಲೀಸ್ರು ತನಿಖೆಗೆ ಮುಂದಾಗದೇ..ನೀವೇ ಹಿಡ್ಕೊಡ್ರಿ ಅನ್ನೋ ರೀತಿ ಉಢಾಫೆ ಉತ್ತರ ಕೊಟ್ಟಾಗ, ಲೀಲಾ  ಅನಿತಾ ಹಾಗೂ ಆತನ ಜೊತೆಗಿದ್ದ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಹಿಡಿಲೇ ಬೇಕು ಅಂತಾ ನಿರ್ದಾರ ಮಾಡುತ್ತಾಳೆ.ಘಟನೆ ನಡೆದ ಆ ಗ್ರಾಮಕ್ಕೆ ಬಾಡೂಟದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಲೀಲಾಗೆ  ಅನಿತಾ ಮತ್ತು ಅವನು ಆ ಮನೆಯಲ್ಲಿದ್ದಾರೆ ಎಂಬ ವಿಷಯಗೊತ್ತಾಗುತ್ತದೆ. ಊರಿನವರನ್ನೆಲ್ಲಾ ಸೇರಿಸಿಕೊಂಡು, ಮನೆಗೆ ನುಗ್ಗುತ್ತಾರೆ.  ಈ ಸಂದರ್ಭದಲ್ಲಿ ಅಲ್ಲಿದ್ದ ಅವನು ಮನೆಯಿಂದ ಓಡೋಗೋದಕ್ಕೆ ಅಣಿಯಾಗಿದ್ದ. ಆದರೆ  ಗ್ರಾಮಸ್ಥರು ಆತನನ್ನು ಹಿಡಿದು  ಮರಕ್ಕೆ ಕಟ್ಟಿಹಾಕಿದ್ರು. ಹಾಗೆ ಮರಕ್ಕೆ ಬಿಗಿದುಕೊಂಡವನ ಹೆಸರು ಸುಂದರ ಎಂದುಕೊಳ್ಳೋಣ. ಹೀಗೆ ಊರಿನವರೆಲ್ಲಾ ಸೇರಿಕೊಂಡು, ಅನಿತಾ ಮತ್ತು ಅವನು ಸುಂದರ, ಇಬ್ಬರನ್ನು ಕೂಡಿಹಾಕಿ ಸತ್ಯ ಹೇಳಿ ಎಂದು ಬೆದರಿಸುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಪೊಲೀಸರು ಸಹ ಬರುತ್ತಾರೆ. ಅವರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಹೋಗಿ ಇಬ್ಬರನ್ನು ವಿಚಾರಿಸುತ್ತಾರೆ. ಆಗ ಸತ್ಯ ಹೊರಬಿದ್ದಿತ್ತು. ಮನೆ ಹಿತ್ತಲಲ್ಲಿ ನಡೆದ ಕೊಲೆ ಬಯಲಾಗಿತ್ತು. 

ರವಿಯಣ್ಣ ಮತ್ತು ಅನಿತಾ ದಂಪತಿಗೆ ಇಬ್ಬರು ಮಕ್ಕಳು. ಸುಂದರ ಅವರ ಬಾಳಿಗೆ ಬರುವವರೆಗೂ ಅವರದ್ದು ಸುಂದರ ಸಂಸಾರ. ಮೊದಲ ಮಗಳ ತಾಯಿಯ ಜೀವ ಕಾಪಾಡಿದ್ದಳು.  ಬಡತನದಲ್ಲಿ ಪ್ರೀತಿಗೇನು ಕೊರತೆಯಿರಲಿಲ್ಲ. ರವಿಯಣ್ಣನ  ಸಹೋದರಿಯರಿಬ್ಬರು ಗಾಜನೂರು ಹತ್ತರ  ಒಂದು ಊರಲ್ಲಿದ್ದರು. ಆಗಾಗ ಅವರ ಮನೆಗೆ ರವಿ ಹೋಗಿ ಬರುತ್ತಿದ್ದ,  ಈ ಮಧ್ಯೆ ಅನಿತಾಗೆ ಸುಂದರ ಎಂಬವ ಪರಿಚಯನಾಗಿದ್ದ. ಆತ ರವಿಗೂ ಗೊತ್ತಿದ್ದ, ಆತನೂ ಸಹ ಗಾಜನೂರು ಕಡೆಯವಾನಿಗದ್ದ. ಅನಿತಾರ ಸ್ನೇಹ ಮಾಡಿದ ಸುಂದರ, ಕೊನೆಕೊನೆಗೆ ಅನಿತಾರ ಮನೆಗೂ ಬರಲು ಆರಂಭಿಸಿದೆ. ಇದು ಊರಿನವರಿಗೆ ಅನುಮಾನ ಮೂಡಿಸಿತ್ತುಆದರೆ ಇತ್ತ  ರವಿ ಕೂಲಿ ಕೆಲಸಕ್ಕೆ ಮನೆಯಿಂದ ಹೊರನಡೆದಾಗಲೆಲ್ಲಾ ಸುಂದರ  ಮನೆಗೆ ಬಂದು ಅನಿತಾಳೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಳ್ತಿದ್ದ.  ಇದು ಗ್ರಾಮಸ್ಥರಿಗೂ ಗೊತ್ತಾಗಿತ್ತು.ಹೋಯ್ ..,ರವಿ ಇಲ್ಲದ ಸಂದರ್ಭದಲ್ಲಿ ಸುಂದರ ಯಾಕೆ ಮನೆಗೆ ಬರ್ತಾನೆ ಮಾರಾಯ ಅಂತಾ..,ಒಂದು ಸಲ ಗ್ರಾಮಸ್ಥರು ರವಿಗೆ ಪ್ರಶ್ನೆ ಹಾಕಿದ್ದಾರೆ.ಅದಕ್ಕೆ ರವಿ ಮನೆ ಮಾನ ಉಳಿಸಿಕೊಳ್ಳೋದಕ್ಕೆ ಆತ ನಮ್ ಸಂಬಂಧಿ ಅಂತೆಲ್ಲಾ ಹೇಳಿ ಊರಿನವರನ್ನ ಸಾಗಾಕಿದ್ದ.  ಆದರೆ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ರವಿ ಮನದಲ್ಲೇ ಉತ್ತರ ಹುಡುಕೋದಕ್ಕೆ ಪ್ರಾರಂಭ ಮಾಡ್ದಾ..,ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆ ಬಳಿಯೇ ನಿಂತು ಸುಂದರ ಬರೋದನ್ನು ಹೊಂಚು ಹಾಕಿ ನೋಡ್ದಾ..ಗ್ರಾಮಸ್ಥರ ಅನುಮಾನ ನಿಜವಾಗಿತ್ತು.ನಾನು ಹೆಂಡ್ತಿಗೆ ಇಷ್ಟು ಪ್ರೀತಿ ತೋರಿಸಿದ್ರೂ..,ಬೇರೆಯವನೊಟ್ಟಿಗೆ ಸಂಬಂಧ ಇಟ್ಕೊಂಡು ಬಿಟ್ಳಲ್ಲ ಅಂತಾ ತುಂಬಾ ಫೀಲ್ ಮಾಡ್ಕೊಂಡ..,ಮನೆಯಲ್ಲಿ ಯಾರು  ಇಲ್ಲದ ಸಂದರ್ಭದಲ್ಲಿಯೇ ಹೆಂಡ್ತಿಗೆ ನಯವಾಗಿ ಸುಂದರನ ಸಹವಾಸ ಬಿಡು ಅಂತಾ ಬುದ್ದಿ ಹೇಳ್ದ.ಆಗ ಅನಿತಾ ನನಗೂ ಸುಂದರನಿಗೂ ಸಂಬಂದವೇ ಇಲ್ಲ ಅನ್ನೋ ರೀತಿ ವರ್ತನೆ ಮಾಡೋಕೆ ಶುರು ಮಾಡಿದ್ಲು.

ಕುಡಿಯುವ ಚಟವಿದ್ದ,ರವಿ ಹೆಂಡ್ತಿ ವರ್ತನೆಯಿಂದ ಮತ್ತಷ್ಟು ಟೈಟ್ ಆಗೋದಕ್ಕೆ ಶುರು ಮಾಡ್ತಾ..ಸುಂದರ ಮತ್ತು ಅನಿತಾ ನಡುವಿನ ಅನೈತಿಕ ಸಂಬಂಧ ವಿಚಾರದಲ್ಲಿ ರವಿ ಗಲಾಟೆ ಮಾಡಲು ಶುರು ಮಾಡ್ದಾ..ಈ ಸಂದರ್ಭದಲ್ಲಿ ಅನಿತಾ ಕೆಲ ಕಾಲ ತವರು ಮನೆ ಸೇರ್ಕೊಂಡಿದ್ಲು. ಈ ವಿಚಾರವನ್ನು ರವಿ ತನ್ನ ಸಹೋದರಿಯರಿಗೂ ಹೇಳಿದ್ದ. ಅವರು ಊರು ಮನೆ ಪಂಚಾಯಿತಿ ಎಂದು ಮಾಡಿ  ಇನ್ನುಂದೆ ರವಿ ನೀನು ಕುಡಿಯುವುದನ್ನು ಬಿಡಬೇಕು. ಅನಿತಾ ನೀನು ಸುಂದರನ ಸಹವಾಸ ಬಿಟ್ಟು ಸರಿಯಾಗಿ ಸಂಸಾರ ಮಾಡಿಕೊಂಡು ಹೋಗಬೇಕು ಎಂದು ತೀರ್ಮಾನ ಮಾಡಿಸಿದ್ರು.  ರಾಜಿ ಸಂಧಾನದ ನಂತ್ರ  ಅನಿತಾ ರವಿ.ಸಂಸಾರ ಚೆನ್ನಾಗಿತ್ತು. ಚಂದ್ರು ಕುಡಿಯುವುದನ್ನು ಬಿಟ್ಟು ಮನೆಯನ್ನು ಕಟ್ಟಲು ಅಣಿಯಾಗಿದ್ದ. ಇದ್ದ ಅಲ್ಪ ತೋಟವನ್ನು ಡೆವಲೆಪ್ ಮೆಂಟ್ ಮಾಡಲು ನಿರ್ಧರಿಸಿದ್ದ. ಆದರೆ ಸುಂದರ ಮತ್ತು ಅನಿತಾ ನಡುವಿನ ಅನೈತಿಕ ಸಂಬಂಧ ಮತ್ತೆ ಮುಂದುವರೆಯಿತು.ಇದು ರವಿಯನ್ನು  ಕೆರಳಿಸಿತ್ತು. ಒಂದು ಬಾರಿ ಸುಂದರ ಮತ್ತು ಅನಿತಾ  ಸರಸ ಸಲ್ಲಾಪದಲ್ಲಿರುವಾಗ್ಲೆ ಚಂದ್ರ ಎಂಟ್ರಿ ಕೊಟ್ಟು ರಾದ್ದಾಂತ ಮಾಡಿದ್ದ....ಅದೇ ದಿನ ಕೊನೆ...

ಮನೆಬಿಟ್ಟು ಹೋಗಿದ್ದಾನೆ ಗಂಡ ಅಂದ್ಲು

ಠಾಣೆಗೆ ಬಂದು ಮಿಸ್ಸಿಂಗ್ ಕೇಸು ಕೊಟ್ಲು .

ದಿನಾಕ 01-09-2014 ರಂದು ಆ ಮನೆಯಲ್ಲಿ ನಡೆದ ಗಲಾಟೆ ಅಂದೇ ಕೊನೆ. ಮಾರನೇ ದಿನ ರವಿ  ಮನೆತೊರೆದು ಹೋಗಿದ್ದಾನೆ ಎಂದು ಅನಿತಾ ಸ್ಥಳೀಯರಿಗೆ ಹೇಳಿದಳು. ಒಂದು ತಿಂಗಳ ನಂತರ ಮಾಳೂರು ಠಾಣೆಯಲ್ಲಿ ನಾಪತ್ತೆ ಪ್ರಕರಣದಡಿ ದೂರು ನೀಡಿದ್ಲು., ಸಿಕ್ಕಸಿಕ್ಕವರಲ್ಲಿ ಗಂಡನ ಬಗ್ಗೆ ಅನುಕಂಪ ಇರೋ ರೀತಿ ವರ್ತನೆ ಮಾಡ್ತಿದ್ದ ಅನಿತಾ, ಇತ್ತ ಮನೆಯಲ್ಲಿದ್ದ ಮಕ್ಕಳು ಅಮ್ಮ ಅಪ್ಪಾ ಎಲ್ಲಿ ಎಂದು ಕೇಳ್ದಾಗ ಇಲ್ಲೇ ಎಲ್ಲೋ ಹೋಗಿದಾರೆ.ಮಂಗಳೂರು ಉಡುಪಿ ಅಂತಾ ರೀಲ್ ಬಿಡ್ತಾ ಇದ್ಲು. ಗ್ರಾಮಸ್ಥರು ಕೂಡ ರವಿ ಬೇರೆ ಊರಲ್ಲಿದನೆ.. ಇಂದಲ್ಲ ನಾಳೆ ಬಂದೇ ಬರ್ತಾನೆ ಅನ್ಕೊಂಡೇ ಸುಮ್ಮನಾಗಿದ್ರು..ಇತ್ತ ಮಾಳೂರು ಠಾಣೆ ಪೊಲೀಸ್ರು ಅಂದೇ ಸರಿಯಾಗಿ ಕೆಲಸ ಮಾಡಿದ್ರೆ..,24 ಗಂಟೆಯೊಳಗೆ ಅನಿತಾಳನ್ನೇ ಅಂದರ್ ಮಾಡಬಹುದಿತ್ತು. ರವಿಯ ನಾಪತ್ತೆ ರಹಸ್ಯ ಹೊರಕ್ಕೆ ಬರಲು ಎರಡು ವರ್ಷ ಬೇಕಾಯ್ತು. 

ಅವತ್ತು ಆ ಮನೆಯಲ್ಲಿ ನಡೆದಿದ್ದೇನು? 

ಸೆಪ್ಟಂಬರ್  ಒಂದು ,2014 ರ ಆ ರಾತ್ರಿ ಅನಿತಾ ಮತ್ತು ಸುಂದರ ಒಟ್ಟಿಗುರುವಾಗಲೇ ರವಿ  ಎಂಟ್ರಿಯಾಗಿದ್ದಾನೆ.ಈ ಸಂದರ್ಭದಲ್ಲಿ ರವಿ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಸಂದರ್ಭಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ ಸುಂದರ ಕಣಿಗೆಯಿಂದ ಚಂದ್ರು ಬುಲ್ಡೆ ಬಿಚ್ಚಿದ್ದಾನೆ. ಸುಂದರನ ಕೃತ್ಯಕ್ಕೆ ಅನಿತಾ ಕೂಡ ಸಾಥ್ ನೀಡಿದ್ದಾಳೆ. ನಂತ್ರ ,ಮೃತ ರವಿ  ಕೈಕಾಲುಗಳನ್ನು ತಂತಿಯಲ್ಲಿ ಕಟ್ಟಿ.ಬಟ್ಟೆ ಚಾಪೆಯಲ್ಲಿ ಸುತ್ತಿ ಮನೆ ಹಿಂದಿನ ತೋಟದಲ್ಲಿದ್ದ ಗುಂಡಿಯ ಬಳೆ ಎಳೆದೊಯ್ದಿದ್ದಾನೆ.ರಾತ್ರೊರಾತ್ರಿ..,ಇಬ್ಬರು ರಕ್ತದ ಕಲೆಗಳನ್ನು ತೊಳೆಯಲು  ಮನೆ ಶುಚಿಗೊಳಿಸಿದ್ದಾರೆ. ನಂತರ ಮೊದಲೇ ಇದ್ದ ಸಣ್ಣ ಗುಂಡಿಗೆ ಚಂದ್ರುವಿನ ದೇಹ ಎಳೆದು ಮೇಲೆ ಮಣ್ಣು ಮುಚ್ಚಿದ್ದಾರೆ.ಇಷ್ಟೆಲ್ಲಾ ಮಾಡಿದ ಮೇಲೆ ಆ ರಾತ್ರಿ ಇವರಿಬ್ಬರು ಮತ್ತೆ ಪಲ್ಲಂಗವೇರಿದ್ದಾರೆ.  ಘಟನೆ ನಡದ ಮಾರನೇ ದಿನ ಅನಿತಾಳೇ ತನ್ನ ಗಂಡ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದಾನೆ ಅಂತಾ ಸುದ್ದಿ ಹರಡಿಸಿದಳು.ಮಾಳೂರು ಠಾಣೆಯಲ್ಲಿ ಗಂಡನನ್ನು ಹುಡುಕಿಕೊಡುವಂತೆ ದೂರು ನೀಡಿದ್ಲು..ಇದಾದ ನಂತರ ಮಾಳೂರು ಪೊಲೀಸರು ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಎಲ್ಲೇ ಶವ ಪತ್ತೆಯಾದ್ರೂ..,ಅನಿತಾಳಿಗೆ ಬಾಡಿ ಐಡೆಂಟಿಪೈ ಮಾಡಲು ಕರಿತಾಯಿದ್ರು..,ಆದ್ರೆ ಅನಿತಾ ಕೂತ ಜಾಗದಲ್ಲೇ ಅದು ನನ್ನ ಗಂಡಂದಲ್ಲ ಬಿಡಿ ಅಂತಿದ್ಲು..,ಈ ಸಂದರ್ಭದಲ್ಲಾದ್ರೂ ಮಾಳೂರು ಠಾಣೆ ಪೊಲೀಸ್ರು,,ಅನಿತಾಳನ್ನು ಸಸ್ ಪೆಕ್ಟ್ ಮೇರೆಗೆ ವಿಚಾರಣೆ ಮಾಡಬಹುದಿತ್ತು.ಅಲ್ಲಿ ಕೂಡ ನೆಗ್ಲೆಟ್ ಮಾಡಿಬಿಟ್ರು. ಅನಿತಾ ಬಾಡಿ ಐಡೆಂಟಿಪೈಗೆ ಹೋಗ್ತಿಲ್ಲಾ ಅಂದ ಮೇಲೆ ..,ಇವಳೇ ಗಂಡನನ್ನು ಅನಾದ್ರೂ ಹೆಚ್ಚು ಕಮ್ಮಿ ಮಾಡಿ ಮುಗಿಸಿರಬೇಕು ಅನ್ನೋ ಅನುಮಾನ ಗ್ರಾಮಸ್ಥರಲ್ಲಿ ದಟ್ಟವಾಗೋದಕ್ಕೂ ಕೂಡ ಕಾರಣವಾಯ್ತು. ಅಂತಿಮವಾಗಿ ಸಹೋದರಿಯರ ಶ್ರಮ ಮತ್ತು ಊರಿನವರ ಸಹಕಾರದಿಂದ  ಮನೆ ಹಿಂಬದಿಯ ತೋಟದಲ್ಲಿ ಗಂಡನನ್ನೇ ಸಮಾದಿ ಮಾಡಿ ಪ್ರತಿನಿತ್ಯ ಪಲ್ಲಂಗದ ಆಟವಾಡ್ತಿದ್ದ,ಅನಿತಾ ಹಾಗು ಆತನ ಪ್ರಿಯಕರ ಕೊನೆಗೂ...ಅಂದರ್ ಆಗಿದ್ದರು. ಆಕ್ಷಣದಲ್ಲಿ ಗ್ರಾಮಸ್ಥರ ಸಿಟ್ಟು ಎಷ್ಟಿತ್ತು ಎಂದರೆ, 

.ಕ್ಷಣಕಾಲದ ಸುಖಕ್ಕೆ ಗಂಡನನ್ನು ಕೊಲ್ಲೊದಕ್ಕೂ ಮುನ್ನ,ತನ್ನ ಮಗಳನ್ನು ನೆನೆಸಿಕೊಂಡಿದ್ರೆ ಸಾಕಿತ್ತೇನೋ..ರವಿಗೆ ಒಂದು ರಿಲೀಫ್ ಸಿಕ್ತಿತ್ತು.ಆದ್ರೆ..ಈ ಪ್ರಕರಣದಲ್ಲಿ ಎಲ್ಲವೂ ಟ್ರಾಜಿಡಿ ಸೀನ್ ಗಳೇ..ತಾಯಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಮಗಳ ಸ್ಥಿತಿ .,ತಮ್ಮನ ನಾಪತ್ತೆ ಪ್ರಕರಣ ಬೇದಿಸಲು ಹೊರಡುವ ಅಕ್ಕ......ಇಷ್ಟೆಲ್ಲಾ ಸನ್ನಿವೇಶಗಳ ನಡುವೆ ಪ್ರಕರಣವನ್ನು ನಿರ್ಲಕ್ಷ್ಯಿಸಿದ ಪೊಲೀಸ್ರು....,ಎಲ್ಲವೂ ಕ್ಷಣಕಾಲ ಸಿನಿಮಾದಂತೆ ಕಣ್ಣ ಮುಂದೆ ಬಂದು ಹೋಗುತ್ತೆ.  ಎವಿಡೆನ್ಸಿಗೆ ಪೊಲೀಸರು ಕರೆದುಕೊಂಡು ಬಂದಿದ್ದ ಸುಂದರನನ್ನು ಬಿಟ್ಟಿದ್ರು ಜನ ಹರ್ಕೊಂಡು ತಿಂದು ಬಿಡ್ತಿದ್ರೇನೋ.ಇದೆಲ್ಲಾ ಗೊತ್ತಿದ್ದೇ ಪೊಲೀಸ್ರು ಹೆಚ್ಚಿನ ಭದ್ರತೆಯಲ್ಲಿ ಆರೋಪಿಗಳನ್ನು ಸ್ಪಾಟ್ ಗೆ ಕರ್ಕೊಂಡು ಬಂದಿದ್ರು. 

H3N2 ಅಂದರೆ ಏನು? ಸೋಂಕು ಅಂಟಿದ್ರೆ ಏನಾಗುತ್ತೆ!? ಇಬ್ಬರನ್ನ ಬಲಿ ಪಡೆದ ವೈರಸ್​ನಿಂದ ಎದುರಾಗುವ ಸಮಸ್ಯೆಗಳೇನು? ಪೂರ್ತಿ ಮಾಹಿತಿ!

2016 ರಲ್ಲಿ ಅಂದು ಶಿವಮೊಗ್ಗಕ್ಕೆ ಬಂದಿದ್ದ,ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಕೂಡ ಶಿವಮೊಗ್ಗ ಜಿಲ್ಲೆಯಲ್ಲಿನ ನಾಪತ್ತೆ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು..,10 ವರ್ಷಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಿಸ್ಸಿಂಗ್ ಕೇಸುಗಳಾಗಿವೆಯಲ್ಲ..,ಇವರೆಲ್ಲಾ ಎಲ್ಲಿ ಹೋದ್ರೂ..,ಅಂತಾ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ರು…ಈ ಜಾಡಿನಲ್ಲಾದ್ರೂ ಪೊಲೀಸ್ರು ದೂಳಿಡಿದ ಪೈಲ್ ಗಳಿಗೆ ಹೊಸ ರೂಪ ಕೊಟ್ರೆ ರವಿ ತರದ ಅದೆಷ್ಟೋ ಆತ್ಮಗಳಿಗೆ ಶಾಂತಿ ಸಿಗಬಹುದೇನೋ?

 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #jpstory #jp flshback #jpexclusive #jp malenadu #malenadutoday, #malnadutoday, #todaynews  #shivamoggalivetoday #shivamogganewstoday, #malnadtoday.com #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga