ಶಿವಮೊಗ್ಗ ಬಸ್ಸ್ಟ್ಯಾಂಡ್ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ
Shariq at Shivamogga bus stand! Why are the suspects brought here and interrogated? Here's the report
MALENADUTODAY.COM |SHIVAMOGGA| #KANNADANEWSWEB
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತೆ ಶಿವಮೊಗ್ಗಕ್ಕೆ ಬಂದಿದ್ದಾರೆ. ಮುಖ್ಯವಾಗಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಖ್ನನ್ನ ನಿನ್ನೆ ಶಿವಮೊಗ್ಗ ಸಿಟಿಯಲ್ಲಿ ಓಡಾಡಿಸಿದ್ದಾರೆ. ನಗರ ಪ್ರಮುಖ ಸ್ಥಳಗಳಲ್ಲಿ ಆತನನ್ನು ಕರೆದುಕೊಂಡು ಓಡಾಡಿದ ಎನ್ಐಎ ಸಿಬ್ಬಂದಿ, ಮಹಜರ್ ಪ್ರಕ್ರಿಯೆ ಮಾಡಿದ್ದಾರೆ ಎನ್ನಲಾಗುತ್ತದೆ. ಮುಖ್ಯವಾಗಿ ಬಸ್ಸ್ಟ್ಯಾಂಡ್ ಬಳಿಯಲ್ಲಿ ಶಾರೀಖ್ ಮಾಸ್ಕ್ ಹಾಕಿಕೊಂಡು ಪೊಲೀಸರ ಜೊತೆಗೆ ಹೋಗುತ್ತಿರುವ ಪೋಟೋವೊಂದು ಇದೀಗ ಮಾಧ್ಯಮಗಳಿಗೆ ಸಿಕ್ಕಿದೆ. ಇನ್ನೂ ಇವತ್ತು ಸಹ ಎನ್ಐಎ ಸಿಬ್ಬಂದಿ ಮೀನಾಕ್ಷಿ ಭವನದ ಬಳಿ ಶಂಕಿತನನ್ನ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ಮಾಧ್ಯಮಗಳಿಗೆ ಲಭ್ಯವಾಗಿದೆ.
READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್
ಅಸಲಿಗೆ ಎನ್ಐಎ ಅಧಿಕಾರಿಗಳು ಶಾರಿಖ್ನನ್ನ ಶಿವಮೊಗ್ಗಕ್ಕೆ ಮಹಜರ್ ಪ್ರಕ್ರಿಯೆಗೆ ಕರೆದುಕೊಂಡು ಬಂದಿದ್ದು, ಈ ಹಿಂದೆ ಅಂದರೆ, ಕಳೆದ ವರ್ಷ ಸೆಪ್ಟೆಂಬರ್ 19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ (shivamogga rural police station) ದಾಖಲಾದ ಕೇಸ್ನ ಹಿನ್ನೆಲೆಯಲ್ಲಿ ಎನ್ಐಎಗಿ ರಾಷ್ಟ್ರೀಯ ತನಿಖಾ ದಳ (NIA ) ಕಳೆದ ವರ್ಷದ ನವೆಂಬರ್ 15 ರಂದು ದಾಖಲಿಸಿದ್ದ ಕೇಸ್ನನ್ವಯ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಮುಖ್ಯವಾಗಿ ಗುರುಪುರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಕೇಸ್ ಹಾಗೂ ಮಂಗಳೂರಿನ ಕುಕ್ಕರ್ ಬ್ಲಾಸ್ ಪ್ರಕರಣ ಮತ್ತು ಅಮಿರ್ ಅಹಮದ್ ಸರ್ಕಲ್ ಬಳಿಯಲ್ಲಿ ನಡೆದ ಪ್ರೇಮ್ ಸಿಂಗ್ಗೆ ಇರಿತ ಪ್ರಕರಣದ ನಂತರ ದಾಖಲಾದ ಪೊಲೀಸರ ದಿಡೀರ್ ದಾಳಿ ಪ್ರಕರಣಗಳನ್ನು ಎನ್ಐಎ ವಿಶೇಷವಾಗಿ ತನ್ನ ತನಿಖೆಯಲ್ಲಿ ಪರಿಗಣಿಸುತ್ತಿದೆ. ಇದರ ಜೊತೆಯಲ್ಲಿ ಆರೋಪಿ ಜಬಿಯ ವಿಚಾರಣೆಯನ್ನು ಸಹ ಎನ್ಐಎ ನಡೆಸ್ತಿದೆ ಎನ್ನಲಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #