BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?

BREAKING NEWS | NIA team to return to Shimoga What is the reason? Did you bring Jabi and Shariq to the district?

BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?
BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?

MALENADUTODAY.COM  |SHIVAMOGGA| #KANNADANEWSWEB

ಮುಖ್ಯ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ರಾಷ್ಟ್ರೀಯ ತನಿಖಾ ದಳದ ತಂಡ ಇವತ್ತು ಶಿವಮೊಗ್ಗಕ್ಕೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಬೆಂಗಳೂರು ಮೂಲಗಳಿಂದಲೇ ಹೊರಬಿದ್ದಿದೆ.  ಈ ಸಂಬಂಧ ಈಗಷ್ಟೆ ಮಾಹಿತಿ ಹೊರಬಿದ್ದಿದ್ದು,  ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಜಬಿ, ಹಾಗೂ ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟದ ಆರೋಪಿ ಶಾರೀಕ್​ ನನ್ನ ಎನ್​ಐಎ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದೆ ಎನ್ನಲಾಗಿದೆ. 

READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

ಶಿವಮೊಗ್ಗ ನಗರಕ್ಕೆ ರಾತ್ರಿ ಎರಡು ತಂಡಗಳಲ್ಲಿ ಇಬ್ಬರನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿರುವ ಎನ್​ಐಎ , ಆರೋಪಿಗಳ ಮನೆ ಹಾಗೂ ಟ್ರಯಲ್ ಬ್ಲಾಸ್ಟ್ ನಡೆಸಿದ ಜಾಗ ಮತ್ತು ನಿರ್ದಿಷ್ಟ ತೋಟದಲ್ಲಿ ಮಹಜರ್ ನಡೆಸಿದೆ ಎಂಬ ಮಾಹಿತಿಯಿದೆ. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಶಾರೀಕ್​ ಗುಣವಾದ ಬೆನ್ನಲ್ಲೆ ಆತನನ್ನ ಎನ್​ಐಎ ವಶಕ್ಕೆ ಪಡೆದಿತ್ತು. ಅದರ ಬೆನ್ನಲ್ಲೆ ಇಬ್ಬರು ಆರೋಪಿಗಳನ್ನು ತನಿಖಾಧಿಕಾರಿಗಳು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. 

READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್

ಇನ್ನೂ ತೀರ್ಥಹಳ್ಳಿಗೂ ಆರೋಪಿ ಶಾರೀಖ್​ನನ್ನ ಕರೆದುಕೊಂಡು ಹೋಗಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನವನ್ನು ಮಲೆನಾಡು ಟುಡೆ, ತಂಡ ಮಾಡುತ್ತಿದೆ. ಅಪ್​ಡೇಟ್ ಸಿಕ್ಕಿದ ಬಳಿಕ, ವರದಿಗೆ ಸಂಬಂಧಿತ ವಿಚಾರವನ್ನು ಇನ್ನಷ್ಟು ವಿಸ್ತ್ರತವಾಗಿ ನೀಡಲಿದೆ. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #