haratalu halappa : ರಸ್ತೆಯಲ್ಲಿ RTO ಅಧಿಕಾರಿ/ ಸಭೆಯಲ್ಲಿ ಮೇಷ್ಟ್ರು - ಮಕ್ಕಳಿಗೆ ಟ್ರಾಫಿಕ್​ ರೂಲ್ಸ್​ನ್ನ ಹೇಳಿಕೊಟ್ಟ ಶಾಸಕ / ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಹ ವಿಚಾರವಿದು

haratalu halappa : RTO Officer on the Road/ Master in the Meeting Sagar MLA teaches traffic rules to children/ This is something that everyone should know

haratalu halappa : ರಸ್ತೆಯಲ್ಲಿ RTO  ಅಧಿಕಾರಿ/ ಸಭೆಯಲ್ಲಿ ಮೇಷ್ಟ್ರು - ಮಕ್ಕಳಿಗೆ ಟ್ರಾಫಿಕ್​ ರೂಲ್ಸ್​ನ್ನ ಹೇಳಿಕೊಟ್ಟ ಶಾಸಕ / ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಹ ವಿಚಾರವಿದು

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಲಭಾಗದಲ್ಲಿ ನಡೆದುಕೊಂಡು ಹೋಗಬೇಕೋ ಅಥವಾ ಎಡಭಾಗದಲ್ಲಿ ನಡೆದುಕೊಂಡು ಹೋಗಬೇಕೋ? ಸುದ್ದಿ ಓದುವ ಓದುಗರೇ,, ಒಮ್ಮೆ ಈ ಪ್ರಶ್ನೆಗೆ ಯೋಚಿಸಿ ಆನಂತರ ಮುಂದಕ್ಕೆ ಓದಿ. ಕಾರಣ ಇಷ್ಟೆ. ಸಾಮಾನ್ಯವಾಗಿ ರಸ್ತೆಯಲ್ಲಿ ನಡೆದುಹೋಗುವಾಗ ಎಡಕ್ಕೆ ಹೋದರಾಯ್ತು ಎಂದು ಹೋಗುವವರೇ ಜಾಸ್ತಿ.. ಎಡಬದಿಯಲ್ಲಿಯೇ ಹೋಗುವುದೇ ಸರಿ ಎಂಬ ಉತ್ತರ ನಿಮ್ಮಲ್ಲೂ ಬಂದಿರಬಹುದು. ಆದರೆ ನಡೆದುಕೊಂಡು ಹೋಗುವಾಗ ರಸ್ತೆಯ ಬಲಬದಿಯಲ್ಲಿ ಹೋಗಬೇಕು ಎಂದೇ ರೂಲ್ಸ್​ನಲ್ಲಿ ಹೇಳಲಾಗಿದೆ. ಅಂದಹಾಗೆ ಇಂತಹದ್ದೊಂದು ವಿಚಾರವನ್ನು ಶಾಲೆಗಳಲ್ಲಿ ಈಗ ಹೇಳಿಕೊಡಲಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ. ಹಿಂದೆಲ್ಲೇ ಹೇಗೆ ಹೇಳಿಕೊಡುತ್ತಿದ್ದರು. ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹೇಗೆ ಹೋಗಬೇಕು ಎನ್ನುವುದಕ್ಕೆ ಹಾಲಪ್ಪನವರು( haratalu halappa) ಖುದ್ದು ಮೆಷ್ಟ್ರಾದ 2 ವಿಡಿಯೋಗಳು ಇದೀಗ ಎಲ್ಲೆಡೆಯಿಂದಲೂ ಪ್ರಶಂಸೆ ಪಡೆಯುತ್ತಿದೆ. 

ಫೆಬ್ರವರಿ 8 ಕ್ಕೆ ಮುಖ್ಯಮಂತ್ರಿ ಫೆಬ್ರವರಿ 27ಕ್ಕೆ ಪ್ರಧಾನ ಮಂತ್ರಿ ಶಿವಮೊಗ್ಗಕ್ಕೆ ! ಏನೇನಿದೆ ಕಾರ್ಯಕ್ರಮ? ವಿವರ ಇಲ್ಲಿದೆ

ಸಾಗರ ಪಟ್ಟಣದಲ್ಲಿ ಇತ್ತೀಚೆಗೆ ಒಂದು ಅಪಘಾತ ಸಂಭವಿಸಿತ್ತು. ಕಾಲೇಜಿಗೆ ಹೋಗ್ತಿದ್ದ ವಿದ್ಯಾರ್ಥಿನಿಯರಿಗೆ ಹಿಂಬದಿಯಿಂದ ಲಾರಿಯೊಂದು ಗುದ್ದಿತ್ತು. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಘಟನೆ ಇಡೀ ಸಾಗರೀಕರ ಕರಳು ಹಿಂಡುವಂತೆ ಮಾಡಿತ್ತು. ಯಾರ ಮಕ್ಕಳೇ ಆದರೂ ಮಕ್ಕಳು ಮಕ್ಕಳೇ. ಅಂತಹ ಮಕ್ಕಳ ಜೀವ ಪಡೆಯಿತಲ್ಲಾ ಒಂದು ಲಾರಿ ಎಂದು ಎಲ್ಲರೂ ಆಕ್ರೋಶ ಭರಿತವಾಗಿಯೇ ಕೇಳಿದರು. ಇದೇ ಆಕ್ರೋಶವನ್ನು ಶಾಸಕ ಹರತಾಳು ಹಾಲಪ್ಪನವರು ಸಹ ವ್ಯಕ್ತಪಡಿಸಿದ್ದರು. ಆದರೆ ಅವರು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಶಾಲೆ ಮಕ್ಕಳು ನಡೆದುಕೊಂಡು ಹೋಗುವುದನ್ನ ಗಮನಿಸಿ ಅವರಿಗೆ ರಸ್ತೆಯಲ್ಲಿ ಹೇಗೆ ನಡೆದುಕೊಂಡು ಹೋಗಬೇಕು? ಯಾವ ಕಡೆಯಿಂದ ಹೋಗಬೇಕು ಎಂದು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಕ್ಕಳು ಸೇರುವ ಸಮಾರಂಭದಲ್ಲಿಯು ಮಕ್ಕಳಿಗೆ ನಡೆದುಕೊಂಡು ಹೋಗುವಾಗ ಜಾಗೃತೆ ಹೇಗೆ ವಹಿಸಬೇಕು ಎಂದು ತಿಳಿಸ್ತಿದ್ಧಾರೆ. 

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಶಿವಮೊಗ್ಗ ವಿಮಾನ ನಿಲ್ದಾಣ ಹೇಗೆ ಸಿದ್ಧವಾಗಿದೆ ನೋಡಿ

ಮಕ್ಕಳಿಗೆ ಮೇಷ್ಟ್ರಾದ ಹಾಲಪ್ಪ

ಮೊನ್ನೆ ಮೊನ್ನೆ ಸಾಗರ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದ ಹಾಲಪ್ಪನವರು, ತಮ್ಮ ವಾಹನದ ಮುಂದೆ ಮಕ್ಕಳು ಹೋಗುವುದನ್ನ ಕಂಡು ಕಾರು ನಿಲ್ಲಿಸಿದ್ದಾರೆ. ಅಲ್ಲಾ ಮಕ್ಕಳ ರಸ್ತೆಯಲ್ಲಿ ಹಿಂಗೆ ನಡೆದುಕೊಂಡು ಹೋದರೆ ಹಿಂದೆ ಎನ್​ ಬರ್ತಿದೆ ಅಂತಾ ಗೊತ್ತಾಗುವುದಾದರೂ ಹೇಗೆ? ಲೇ ಸಂಗ್ಯಾಭ್ಯಾಳ್ಯ ಬಾ ಯಿಲ್ಲಿ, ರೋಡಲ್ಲಿ ಹೋಗಬೇಕಾದರೆ ಯಾವ ಕಡೆ ಹೋಗಬೇಕೋ ಅಂಥಾ ಪ್ರಶ್ನಿಸಿದ್ದಾರೆ. ಅಲ್ಲದೆ ಬಲಭಾಗದಲ್ಲಿ ಹೋಗಬೇಕು ಎಂದು ಉತ್ತರವನ್ನು ಹೇಳಿದ್ಧಾರೆ. ಹೋಗುವಾಗ ಇಬ್ಬಿರಬ್ಬರು ಒಟ್ಟಿಗೆ ಹೋಗಿ, ಕೈ ಕೈ ಹಿಡ್ಕೊಂಡು ಆರಾರು ಜನ ಒಟ್ಟಿಗೆ ಹೋದರೆ, ವೆಹಿಕಲ್​ಗಳು ಬಂದರೆ ತಪ್ಪಿಸಿಕೊಳ್ಳಲಾಗಲ್ಲ. ಎಡಗಡೆ ಹೋಗ್ತಿದ್ರೆ ಹಿಂದೆ ಬರುವ ವಾಹನಗಳು ಕಾಣಿಸಿಲ್ಲ. ಬಲಭಾಗದಲ್ಲಿ ಹೊಗ್ತಿದ್ದರೆ, ಎದುರಿಗೆ ಬರುವ ವಾಹನಗಳು ಕಾಣಿಸುತ್ತವೆ. ಏನಾದರೂ ಆಗುವ ಮೊದಲೆ ಸರಿದು ಪಕ್ಕಕ್ಕೆ ನಿಲ್ಲಬಹುದು ಎಂದು ಮಕ್ಕಳ ಭಾಷೆಯಲ್ಲಿಯೇ ಪಾಠ ಮಾಡಿದ್ದರು 

ಶಾಲೆಯಲ್ಲಿ ಹೇಳಿಕೊಡುತ್ತಿದ್ದರು!

ಇನ್ನೂ ಸಮಾರಂಭವೊಂದರಲ್ಲಿ ಮಾತನಾಡ್ತಾ ಹರತಾಳು ಹಾಲಪ್ಪನವರು ಇದೇ ವಿಚಾರವನ್ನು ಇನ್ನೂ ಸ್ಪಷ್ಟವಾಗಿ ಹೇಳಿದರು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಯಾವ ಕಡೆ ನಡೆದುಕೊಂಡು ಹೋಗಬೇಕು ಎಂದು ಮಕ್ಕಳನ್ನು ಪ್ರಶ್ನಿಸಿದ ಅವರು, ನಮ್ಮ ಶಾಲೆಯಲ್ಲಿ ಓದುವಾಗ ರಸ್ತೆಯಲ್ಲಿ ನಡೆದುಹೋಗುವಾಗ ಎಡಭಾಗದಲ್ಲಿ ನಡೆದುಹೋಗಬೇಕು ಎಂದು ಪಾಠವಿತ್ತು. ಆದರೆ ಈ ರೂಲ್ಸ್​ ಬದಲಾಗಿದೆ. 92 ಇಸವಿಯಿಂದ ಕಾನೂನು ಬದಲಾಗಿದೆ. ಬಲಭಾಗದಿಂದ ಹೋಗುವಾಗ ಎದುರಿನಿಂದ ಬರುವ ವಾಹನಗಳು ಕಾಣುತ್ತವೆ ಎಂಬ ಕಾರಣಕ್ಕೆ ಕಾನೂನಿನ ಬದಲಾಯಿಸಲಾಗಿದೆ. ಈ ಪಾಠ ತಿಳಿದುಕೊಂಡಿದ್ದರೆ, ಇತ್ತೀಚೆಗೆ ಸಂಭವಿಸಿದ ಅಪಘಾತ ನಡೆಯುತ್ತಿರುತ್ತಿಲ್ಲ. ಆ ಮಗು ಬದುಕುತ್ತಿತ್ತು ಎಂದು ಜಾಗೃತಿಯ ಅವಶ್ಯಕತೆಯನ್ನು ಒತ್ತಿ ಹೇಳಿದರು. 

ಕಾನೂನಿನಲ್ಲಿದೆ ಆದರೆ ಜಾಗೃತಿ ಇಲ್ಲ

ಬದುಕು ಅಮೂಲ್ಯವಾದುದು ಎನ್ನುವ ಹಾಲಪ್ಪನವರು ಮೇಷ್ಟ್ರಾಗಿ ಮಾಡಿದ ಪಾಠ ಪ್ರತಿಯೊಬ್ಬರು ಪೋಷಕರು ಮಕ್ಕಳು ಅರಿತುಕೊಂಡರೆ, ರಸ್ತೆಯ ಅಪಘಾತಗಳಲ್ಲಿ ಒಂದಿಷ್ಟು ಜೀವಗಳನ್ನು ಉಳಿಸಬಹುದಾಗಿದೆ. ಫುಟ್​ಪಾತ್ ಇಲ್ಲದ ರಸ್ತೆಗಳಲ್ಲಿ ಬಲಭಾಗದಲ್ಲಿ ನಡೆದುಕೊಂಡು ಹೋಗಬೇಕು ಎಂಬ ಮಾರ್ಗಸೂಚಿಗಳು ಭಾರತೀಯ ಕಾನೂನಿನಲ್ಲಿದ್ದು, ಇಂತಹ ಹಲವು ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಆದರೆ ಅದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿಲ್ಲ. ಇನ್ನೂ ಅಪ್ಪಟ ದೀವರ ಸಮುದಾಯದ ಭಾಷೆಯ ಶೈಲಿಯಲ್ಲಿ ಮತ್ತು ಹಾಸ್ಯ ಹಾಗೂ ನೈಜ ಸೊಗಡಿನ ಪದಗಳನ್ನು ಬಳಸಿ ಮಾತನಾಡುವುದರಲ್ಲಿ  ಹರತಾಳು ಹಾಲಪ್ಪನವರು ನಿಸ್ಸೀಮರು. ರಾಜಕಾರಣಿಯಾದರೂ ಸಹ ರಾಜಕಾರಣದ ಭಾಷೆಗೆ ಅವರು ಅಂಟಿಕೊಂಡಿಲ್ಲ. ಬದಲಾಗಿ, ಮಲೆನಾಡ ಮಣ್ಣಿನ ಭಾಷೆಯಲ್ಲಿಯೇ ಅವರ ಮಾತುಗಳು ಹೊರಬರುತ್ತವೆ ಎನ್ನುವುದಕ್ಕೆ ಎರಡು ವಿಡಿಯೋಗಳು ಸಾಕ್ಷಿಯಾಗಿವೆ. 

ವೀಕ್ಷಕರೇ ಹರತಾಳು ಹಾಲಪ್ಪನವರು ತಿಳಿಸಿದ ಮಾಹಿತಿ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಒಳ್ಳೆಯದು. ವರದಿಯ ಜೊತೆಗೆ ಇನ್ನೊಂದಿಷ್ಟು ಜನರಿಗೆ ಈ ಮಾಹಿತಿಯನ್ನು ಫಾರವರ್ಡ್ ಮಾಡಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com