powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್ !

powercut Shimoga citizens will not have electricity in these parts by March 9.

powercut  |  ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ  ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್ !
powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್ !

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ,  ಮೆಸ್ಕಾಂ ಮಾಚೇನಹಳ್ಳಿ ವಿವಿ ಕೇಂದ್ರದ ಎಫ್-3 ಮಾರ್ಗದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಮಾರ್ಚ್ 09 ರಂದು  ಬೆಳಿಗ್ಗೆ 09 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. 

ಎಲ್ಲೆಲ್ಲಿ?

ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಮಾಳೇನಹಳ್ಳಿ  ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

READ | ಎಸ್​ಪಿ ಜನಸಂಪರ್ಕ ಸಭೆಯಲ್ಲಿ ಬಹಿಷ್ಕಾರದ ದೂರು! ಸೊರಬದಲ್ಲಿ 15 ಕ್ಕೂ ಹೆಚ್ಚು ಕುಟುಂಬಕ್ಕೆ ನಿರ್ಬಂಧದ ಕಟ್ಟಳೆ ಏಕೆ? ಏನಿದು ವರದಿ?

ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ

ಶಿವಮೊಗ್ಗ, ಮೆಸ್ಕಾಂ ಮಂಡ್ಲಿ ವಿವಿ ಕೇಂದ್ರದ ಊರಗಡೂರು ಫೀಡರ್-07 ರಲ್ಲಿ ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಮಾರ್ಚ್ 09 ರಂದು  ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ಮದಾರಿಪಾಳ್ಯ, ಮಳಲಿಕೊಪ್ಪ, ಇಂದಿರಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.


READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

ಜನ ಸಂಪರ್ಕ ಸಭೆ

 ಮೆಸ್ಕಾಂ ಶಿಕಾರಿಪುರ ಉಪವಿಭಾಗ ಕಚೇರಿಯಲ್ಲಿ ಮಾ.09 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.  ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಿ ಸಂಬಂಧಪಟ್ಟ ಪ್ರದೇಶದ ಅಹವಾಲುಗಳನ್ನು ಸ್ವೀಕರಿಸುವ ಕಾರಣ ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮೆಸ್ಕಾಂ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448289519 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #