ಎಸ್​ಪಿ ಜನಸಂಪರ್ಕ ಸಭೆಯಲ್ಲಿ ಬಹಿಷ್ಕಾರದ ದೂರು! ಸೊರಬದಲ್ಲಿ 15 ಕ್ಕೂ ಹೆಚ್ಚು ಕುಟುಂಬಕ್ಕೆ ನಿರ್ಬಂಧದ ಕಟ್ಟಳೆ ಏಕೆ? ಏನಿದು ವರದಿ?

Complaints about the boycott were received at a public relations meeting held by Shivamogga SP in Soraba.

ಎಸ್​ಪಿ ಜನಸಂಪರ್ಕ ಸಭೆಯಲ್ಲಿ ಬಹಿಷ್ಕಾರದ ದೂರು! ಸೊರಬದಲ್ಲಿ 15 ಕ್ಕೂ ಹೆಚ್ಚು ಕುಟುಂಬಕ್ಕೆ ನಿರ್ಬಂಧದ ಕಟ್ಟಳೆ ಏಕೆ? ಏನಿದು ವರದಿ?

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಬಹಿಷ್ಕಾರದಂತಹ ಘಟನೆಯ ಬಗ್ಗೆ ವರದಿಯಾಗುತ್ತಿದೆ. ಇಲ್ಲಿನ ಕುದುರೆಗಣಿ, ಬರಿಗೆ, ಗುಡವಿ--ಅಂಬೇಡ್ಕರ್​ ನಗರ, ಮಳಲಗದ್ದೆಯಲ್ಲಿಯಲ್ಲಿ ಆಯ್ದ ವ್ಯಕ್ತಿಗಳ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಬಗ್ಗೆ ಸುದ್ದಿಯಾಗಿದೆ. ಈ ಸಂಬಂಧ ನಿನ್ನೆ ಸೊರಬ ತಾಲ್ಲೂಕಿನಲ್ಲಿ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ನಡೆಸಿದ ಜನಸಂಪರ್ಕ ಸಭೆಯಲ್ಲಿ ನೇರವಾಗಿ ದೂರು ಹೇಳಿಕೊಳ್ಳಲಾಗಿದೆ. 

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಏನಿದು ಬಹಿಷ್ಕಾರ

ಸದ್ಯ ಲಭಿಸಿದ ಮಾಹಿತಿ ಪ್ರಕಾರ, ಗುರುತಿಸಿದ ಗ್ರಾಮಗಳಲ್ಲಿ ಒಟ್ಟು 15 ಕ್ಕೂ ಹೆಚ್ಚು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಹಿಷ್ಕಾರ ನೇರವಾಗಿಯು ಹಾಕಿಲ್ಲ. ಅಂದರೆ, ಕಾನೂನು ಸುವ್ಯವಸ್ಥೆಯ ಭಯದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ, ನಿರ್ಧಾರವೊಂದನ್ನ ಕೈಗೊಂಡು, ಬಹಿಷ್ಕಾರ ಘೋಷಿಸುತ್ತಾರೆ. ಇದು ಪ್ರಕಟಗೊಳ್ಳುವುದಕ್ಕಿಂತಲೂ ಹೆಚ್ಚಾಗಿ ಕಟ್ಟುನಿಟ್ಟಾಗಿ ಜಾರಿಯಾಗಿರುತ್ತದೆ. ಊರಿನ ಸವಲತ್ತುಗಳಿಂದ ಆಯ್ದ ವ್ಯಕ್ತಿಗಳಿಂದ ದೂರವಿರಿಸಿ, ಮಾತು ಸಹ ಆಡದಂತೆ ಬಹಿಷ್ಕರಿಸಲಾಗುತ್ತೆ. ಹಾಗೆ ಬಹಿಷ್ಕಾರದ ಕಟ್ಟುಪಾಡನ್ನ ವಿರೋಧಿಸಿದರೆ. ಅವರಿಗೆ ದಂಡ ವಿಧಿಸಲಾಗುತ್ತದೆ. 

ಇನ್ನೂ ಈ ಸಂಬಂಧ ಜನ ಸಂಪರ್ಕ ಸಭೆಯಲ್ಲಿ ದೂರು ಹೇಳಿಕೊಂಡ ಬೆನ್ನಲ್ಲೆ ಎಸ್​ಪಿ ಮಿಥುನ್​ ಕುಮಾರ್​ ಬಹಿಷ್ಕಾರದ ಆರೋಪ ಕೇಳಿ ಬಂದ ಹಳ್ಳಿಗೆ ಅಧಿಕಾರಿಗಳ ತಂಡ ಭೇಟಿಕೊಟ್ಟು ಪರಿಶೀಲನೆ ನಡೆಸಲಿದೆ. ಬಹಿಷ್ಕಾರ ವಿಧಿಸಿದರವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.  ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ  ರಂಗನಾಥ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಸೊರಬ ಮತ್ತು ಆನವಟ್ಟಿ ಪೊಲೀಸ್ ಠಾಣಾ ವತಿಯಿಂದ ನಡೆದ  ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಕೆಲವೊಂದು ಸಲಹೆಯನ್ನ ಸಹ ನೀಡಿದ್ದಾರೆ. 

  • 1) ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಪಾಲನೆಯ ಕುರಿತಂತೆ ಮಾಹಿತಿಯನ್ನು ನೀಡಿ, ಶಾಲಾ ಕಾಲೇಜುಗಳು ಹತ್ತಿರ ಸಂಚಾರ ನಿಯಮ ಉಲ್ಲಂಘನೆ ತಡೆಯಲು, ಪೊಲೀಸ್ ಇಲಾಖೆಯಿಂದ ಹೆಚ್ಚಿನ ಆಧ್ಯತೆಯನ್ನು ನೀಡಿ,  ಅತಿವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆ ಮಾಡುವವರ ವಿರುದ್ಧ / ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನಗಳನ್ನು ಚಾಲನೆ ಮಾಡುವುದು / ದ್ವಿ ಚಕ್ರ ವಾಹನಗಳಲ್ಲಿ ತ್ರಿಬ್ಬಲ್ ರೈಡಿಂಗ್ ಮಾಡುವವರ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾಕ್ರಮ ಕೈಗೊಳ್ಳಲಾಗುವುದು.
  • 2) ಶಾಲಾ ಕಾಲೇಜುಗಳು ಪ್ರಾರಂಭ ವಾಗುವ ಮತ್ತು ಮುಕ್ತಾಯವಾಗುವ ಸಮಯದಲ್ಲಿ ಶಾಲಾ ಕಾಲೇಜುಗಳ ಹತ್ತಿರ ERSS -112 ವಾಹನ ಮತ್ತು ಪೊಲೀಸ್ ಗಸ್ತು ನೇಮಿಸಲಾಗುವುದು.
  • 3) ಸೊರಬ ಟೌನ್ ಬೆಳೆಯುತ್ತಿದ್ದು ಸಂಚಾರ ಮಾಹಿತಿ ಸೂಚಕ ಫಲಕಗಳು (Traffic Sign Board)  ಮತ್ತು ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು  ಪಟ್ಟಣ ಪಂಚಾಯಿತಿಯ ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲಾಗುವುದು.
  • 4) ಅಪರಾಧ ನಡೆಯುವುದನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚುವಲ್ಲಿ ಸಿ.ಸಿ ಕ್ಯಾಮೆರಾಗಳು ಪ್ರಮುಖ ಪಾತ್ರವಹಿಸುತ್ತವೆ, ಆದ್ದರಿಂದ Public Safety Act ಅಡಿಯಲ್ಲಿ ಸಾರ್ವಜನಿಕರು ತಮ್ಮ ಅಂಗಡಿ ಮತ್ತುಮನೆಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಇದರಿಂದಾಗಿ ಯಾವುದೇ ಘಟನೆಗಳು ನಡೆದಾಗ, ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತದೆ.
  • 5)  ಸೊರಬ ಬಸ್ ನಿಲ್ದಾಣದಿಂದ ರಂಗನಾಥ ಸ್ವಾಮಿ ದೇವಾಲಯದ ವರೆಗಿನ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕುರಿತಂತೆ ಪಟ್ಟಣ ಪಂಚಾಯಿತಿಗೆ ವರದಿ ಸಲ್ಲಿಸಿ ಆದೇಶವಾದ ನಂತರ ಕ್ರಮ ಕೈಗೊಳ್ಳಲಾಗುವುದು.
  • 6) ತನಿಖೆಯಲ್ಲಿರುವ ಪ್ರಕರಣಗಳನ್ನು ವಿಳಂಬವಿಲ್ಲದೆ,  ಕಾಲ ಮಿತಿಯ ಒಳಗೆ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗುತ್ತಿದೆ.   
  • 7) ಸಾರ್ವಜನಿಕರು ತಮ್ಮ ಸಮಸ್ಯೆ ಮತ್ತು ಸಹಾಯಕ್ಕಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್ಐ / ಪಿಐ ರವರನನು ಭೇಟಿ ಮಾಡುವುದು / ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿರುತ್ತದೆ. 
  • 8) ಯಾವುದೇ ತುರ್ತು ಸಂದರ್ಭದಲ್ಲಿ  ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ/ 112 ಸಹಾಯವಾಣಿ/ ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯ ಪಡೆಯಲು ತಿಳಿಸಿರುತ್ತಾರೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!