ವರದಾ ನದಿಯಲ್ಲಿ ಮುಳುಗಿ ಹಾನಗಲ್ ಯುವಕ ಸಾವು!

Hanagal youth drowns in Varada river

ವರದಾ ನದಿಯಲ್ಲಿ ಮುಳುಗಿ ಹಾನಗಲ್ ಯುವಕ ಸಾವು!
Hanagal youth drowns in Varada river

SHIVAMOGGA  |  Jan 16, 2024  |Hanagal youth drowns in Varada river   ವರದಾ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಸಾವು

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ತಲಗಡ್ಡೆ ಸಮೀಪ ವರದಾ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಸೋಮವಾರ ಸಂಭವಿಸಿದೆ. 

ಹಾನಗಲ್ ತಾಲ್ಲೂಕು ನಿವಾಸಿ

ಹಾನಗಲ್‌ ತಾಲೂಕಿನ ನಿಟಗಿನಕೊಪ್ಪ ಗ್ರಾಮದ ಪ್ರವೀಣ್ (25) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಕರ ಸಂಕ್ರಾಂತಿ ಹಿನ್ನೆಲೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸಿದ್ದರು. 

ಆನವಟ್ಟಿ ಪೊಲೀಸ್ ಸ್ಟೇಷನ್ 

ಈ ವೇಳೆ ನದಿಯಲ್ಲಿ ಸ್ನಾನಕ್ಕೆ ಇಳಿದ ಪ್ರವೀಣ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಅಗ್ನಿಶಾಮಕ ಠಾಣೆ ಸಿಬ್ಬಂದಿ ಸತತ ಆರು ತಾಸು ಶೋಧ ಕಾರ್ಯ ನಡೆಸಿ, ಯುವಕನ ಶವವನ್ನು ನದಿಯಿಂದ ಮೇಲೆತ್ತಿದ್ದಾರೆ. ಆನವಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.