shivamogga-ayodhya train / ಶಿವಮೊಗ್ಗ-ಅಯೋಧ್ಯೆ ನಡುವೆ ಶೀಘ್ರದಲ್ಲಿಯೇ ಟ್ರೈನ್ ಸಂಚಾರ?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 15, 2024  |  shivamogga-ayodhya train  ಅಯೋಧ್ಯೆಗೆ ಶಿವಮೊಗ್ಗದಿಂದ ನೇರವಾಗಿ ವಿಶೇಷ ರೈಲು ಸಂಚರಿಸುತ್ತಾ? ಹೀಗೊಂದು ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಮೈಸೂರಿನಿಂದ ಟ್ರೈನ್ ಸಂಚಾರ ಆರಂಭವಾಗಿದೆ. ಶಿವಮೊಗ್ಗ-ಅಯೋದ್ಯೆ ರೈಲು   (shivamogga-ayodhya train  )ಸಂಚಾರಕ್ಕೆ ಪ್ರಯತ್ನ ನಡೆಯುತ್ತಿದ್ದು. ಇದೇ ಜನವರಿ 22 ರಿಂದ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ರಾಷ್ಟ್ರೀಯ ವರದಿ ಮಾಧ್ಯಮಗಳ ಪ್ರಕಾರ, ನೈಋತ್ಯ ರೈಲ್ವೆ ವಲಯ 12ಕ್ಕೂ ಅಧಿಕ ವಿಶೇಷ ರೈಲುಗಳನ್ನು  ರೈಲುಗಳನ್ನ ಓಡಿಸಲಿದೆ. ಇವುಗಳು ರಾಜ್ಯದಿಂದ ಅಯೋದ್ಯೆಗೆ ಸಂಚಾರ ಮಾಡಲಿವೆ. ರೈಲುಗಳ ಸಮಯ ಹಾಗೂ ದಿನ ನಿಗದಿಯಾಗಬೇಕಿದೆ.  

ಶ್ರೀರಾಮಮಂದಿರ ಮಂದಿರ ವೀಕ್ಷಣೆಗೆ ತೆರಳುವವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳ ಸಹಾಯದೊಂದಿಗೆ ವಿಶೇಷ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಬೇಡಿಕೆಗೆ ತಕ್ಕ ಹಾಗೆ ರೈಲು ಸಂಚಾರದ ನಿರ್ಧರಿಸಲಾಗುತ್ತದೆ ಎಂದು  ನೈರುತ್ಯ ರೈಲ್ವೆ ಇಲಾಖೆ ಹೇಳಿದೆ. ಮೂಲಗಳ ಪ್ರಕಾರ, ಶಿವಮೊಗ್ಗದಿಂದಲೂ ಜನವರಿ 22 ರ ನಂತರ ಅಯೋಧ್ಯೆಗೆ ಟ್ರೈನ್​ ಸಂಚರಿಸುವ ಸಾಧ್ಯತೆ ಇದೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor